“ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷರಾಗಿ ವೈ.ಟಿ.ಗೋವಿಂದಪ್ಪ ಆಯ್ಕೆ.”
1 min read
ತರಿಕೇರೆ: ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷರಾಗಿ ಕಡೂರು ತಾಲ್ಲೂಕಿನ ವಿದ್ಯಾನಗರದ ವೈ.ಟಿ. ಗೋವಿಂದಪ್ಪ ಇವರನ್ನು ಮಹಾಸಭಾದ ರಾಜ್ಯಾಧ್ಯಕ್ಷ ಹಾಗೂ ಸಚಿವರಾದ ಕೆ.ಎಚ್. ಮುನಿಯಪ್ಪ ಇವರು ನೇಮಕ ಮಾಡಿದ್ದಾರೆ. ಇವರ ಜೊತೆಯಲ್ಲಿ ಉಪಾಧ್ಯಕ್ಷ: ವಕೀಲ ಆರ್. ರಮೇಶ್ (ಹಿರೇಮಗಳೂರು), ಕಾರ್ಯದರ್ಶಿ : ಕೆ. ನಾಗರಾಜ (ತರಿಕೇರೆ), ಖಜಾಂಚಿ : ಶುದ್ಧ ಶ್ರೀನಿವಾಸ್ (ಮಲ್ಲೇಶ್ವರ) ಇವರನ್ನು ನೇಮಕ ಮಾಡಲಾಗಿದೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ.ಟಿ. ಚಂದ್ರಶೇಖರ್ (ಬೀರೂರು), ಎಸ್. ವಸಂತಕುಮಾರ್ (ಲಕ್ಕ್ಯ), ಎಸ್. ಎನ್. ಮಹೇಂದ್ರಸ್ವಾಮಿ (ಶಿವನಿ), ಪ್ರಮೋದ್ ಕೆ.ಜಿ. (ಕಡೂರು), ಕುಸುಮಾ ಭರತ್ (ಕುಪ್ಪಳ್ಳಿ) ಹಾಗೂ ವಿಶೇಷ ಆಹ್ವಾನಿತರಾಗಿ ಎಸ್.ಎನ್. ಸಿದ್ದಾಮಪ್ಪ (ತರಿಕೇರೆ), ಎಲ್. ಎಸ್. ಶ್ರೀಕಾಂತ್ (ಲಕ್ಕ್ಯ), ಟಿ.ಜಿ. ಮಂಜಪ್ಪ (ತಿಮ್ಮಾಪುರ-ಅಜ್ಜಂಪುರ), ಲಕ್ಷ್ಮಣಪ್ಪ (ಹುಲ್ಲೇಕಳ್ಳಿ), ಎಚ್. ನಾಗರಾಜ (ಎನ್.ಆರ್. ಪುರ), ರಾಮಚಂದ್ರ (ಮೂಡಿಗೆರೆ) ಇವರನ್ನು ನೇಮಕ ಮಾಡಲಾಗಿದೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

