AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

Day: July 11, 2026

1 min read

ಪ್ರಿಯ ವೀಕ್ಷಕರೇ,ತಮ್ಮ ಮಾಧುರ್ಯಭರಿತ ಧ್ವನಿಯಿಂದಲೇ ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿದ್ದ ದಕ್ಷಿಣ ಭಾರತದ ಗಾನಕೋಗಿಲೆ, ದಂತಕಥೆ ಎಸ್. ಜಾನಕಿ (S.Janaki) ಇನ್ನಿಲ್ಲ. ತಮ್ಮ 88ನೇ...

ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆಗೆ ಮನವಿ ಚಿಕ್ಕಮಗಳೂರು: ಜಿಲ್ಲೆಯ ಹಾಂದಿ, ಕೆಳಗೂರು, ವಸ್ತಾರೆ ಗ್ರಾಮಗಳಲ್ಲಿ   ಕೆ ಎಸ್ ಅರ್ ಟಿ ಸಿ  ಬಸ್ಸುಗಳು    ನಿಲುಗಡೆಯಿಲ್ಲದೆ ಶಾಲಾ ಕಾಲೇಜುಗಳಿಗೆ...

ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆಗೆ ಮನವಿ ಚಿಕ್ಕಮಗಳೂರು: ಜಿಲ್ಲೆಯ ಹಾಂದಿ, ಕೆಳಗೂರು, ವಸ್ತಾರೆ ಕೆಎಸ್‌ಆರ್‌ಟಿಸಿ علو ಗ್ರಾಮಗಳಲ್ಲಿ ನಿಲುಗಡೆಯಿಲ್ಲದೆ ಶಾಲಾ ಕಾಲೇಜುಗಳಿಗೆ ಓಡಾಡುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್‌ ಹೇಳಿದ್ದಾರೆ. ಅವರು ಈ ಕುರಿತು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕಳೆದ ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ವೇಗದೂತ ಬಸ್‌ಗಳು ನಿಲುಗಡೆ ನೀಡುತ್ತಿಲ್ಲ. ಇದರಿಂದ ಶಾಲಾ ಕಾಲೇಜುಗಳಿಗೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ಹಾಗೂ ಮೂಡಿಗೆರೆ, ಕೊಟ್ಟಿಗೆಹಾರ, ಉಜಿರೆ, ಧರ್ಮಸ್ಥಳ ಮತ್ತು ಆಲ್ಲೂರು, ಚಿಕ್ಕಮಗಳೂರು ಕಡೆಗೆ ತೆರಳುವ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರು ಕೆಲಸ ಕಾರ್ಯಗಳಿಗೆ, ಆಸ್ಪತ್ರೆ ಇನ್ನಿತರೆ ವ್ಯವಹಾರಗಳಿಗೆ ಹೋಗುವವರು ಕೂಡ ಕೆಎಸ್‌ಆರ್‌ಟಿಸಿ ಬಸ್ಸನ್ನು ಅವಲಂಬಿತರಾಗಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಹಲವು ವೇಗದೂತ ಬಸ್‌ಗಳು ಎರಡು ಕಡೆಯಿಂದ ಹೋದರೂ ಬಂದರೂ ಈ ಗ್ರಾಮಗಳಲ್ಲಿ ನಿಲುಗಡೆಯಿಲ್ಲದೆ, ಜನರು ಪರಿತಪಿಸುವಂತಾಗಿದೆ ಎಂದಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ಅತಿ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರತಿನಿತ್ಯ ಸಾರಿಗೆ ಬಸ್‌ನಲ್ಲಿ ಓಡಾಡುವವರೇ ಹೆಚ್ಚು ಇದ್ದು, ಬಸ್ ನಿಲುಗಡೆಗೊಳಿಸದಿರುವ ಕಾರಣ ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ನಗರದಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿ ಮತ್ತು ಪಿಜಿಗಳಲ್ಲಿ ಉಳಿದುಕೊಂಡು ತಮ್ಮ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.ತಮ್ಮ ಮಕ್ಕಳ ವಿದ್ಯಾಬ್ಯಾಸ ವಿದ್ಯಾಬ್ಯಾಸ ಹಾಗೂ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪೋಷಕರು ತಮ್ಮ ದುಡಿಮೆಯನ್ನು ಮಕ್ಕಳ ಪಿಜಿ ಹಾಗೂ ಅವರ ಖರ್ಚು ವೆಚ್ಚಕ್ಕಾಗಿ ಹಾಕುತ್ತಿದ್ದು, ತಮ್ಮ ಜೀವನವನ್ನು ಸಾಗಿಸಲು ತುಂಬಾ ಶ್ರಮವಹಿಸಬೇಕಾಗಿದೆ. ಇನ್ನು ಕೆಲವರಿಗೆ ಪಿಜಿಯಲ್ಲಿ ಉಳಿದುಕೊಳ್ಳಲು ಆದಾಯದ ಕೊರತೆ ಇರುವುದರಿಂದ ಸಮಯ ವ್ಯರ್ಥ ಮಾಡಿ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸಬೇಕಾಗಿದೆ ಎಂದಿದ್ದಾರೆ.ಬೆಳಿಗ್ಗೆಯಿಂದ ಆಯಾ ಬಸ್ ನಿಲ್ದಾಣಗಳಲ್ಲಿ ಬಸ್ಸಿಗಾಗಿ ಕಾಯುತ್ತಾ ಮಕ್ಕಳು ಕುಳಿತಿರುವುದು ಸಾಮಾನ್ಯವಾಗಿದೆ. ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸಿಗದ ಕಾರಣ ರಸ್ತೆಯಲ್ಲಿ ಹೋವು ಎಲ್ಲಾ ವಾಹನಗಳಿಗೆ ಕೈ ಅಡ್ಡ ಹಾಕುವ ಪರಿಸ್ಥಿತಿ ಉಂಟಾಗಿದೆ. ಹೆಣ್ಣು ಮಕ್ಕಳ ಪರಿಸ್ಥಿತಿಯಂತೂ ಹೇಳ ತೀರದ್ದಾಗಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರು ಹಾಗೂ ಮಕ್ಕಳು ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವಾಗ ತಮ್ಮ ಜೀವವನ್ನು ಕೈಯಲ್ಲಿಡಿದು ಪ್ರಯಾಣಿಸುವಂತಾಗಿದೆ. ಆದ್ದರಿಂದ ಹಾಂದಿ, ಕೆಳಗೂರು, ವಸ್ತಾರೆ ಗ್ರಾಮಗಳಲ್ಲಿ ಸಂಚರಿಸುವ ಎಲ್ಲಾ ವೇಗದೂತ ಬಸ್‌ಗಳನ್ನು ನಿಲುಗಡೆ ಮಾಡಿದರೆ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತುಂಬಾ ಸಹಕಾರಿಯಾಗಲಿದೆ ಮನವಿ ಮಾಡಿದ್ದಾರೆ. ಮನವಿ ಸಲ್ಲಿಸುವಾಗ ಗ್ರಾಮಸ್ಥರಾದ ಸುನೀಲ್, ಭದ್ರಯ್ಯ, ಚಂದ್ರಪ್ಪ, ಹೇಮ, ಗಿರಿಜಾ, ಯಶೋಧ, ಶಾಂತ, ಕಾವ್ಯ, ಗಾಯತ್ರಿ, ರೂಪ, ಮಂಜುಳಾ, ಕಲ್ಪನಾ, ರೋಹಿತ್, ಮಂಜಯ್ಯ, ಚಂದ್ರಶೇಖ‌ರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು…..

ಚಿಕ್ಕಮಗಳೂರು: ಜಿಲ್ಲೆಯ ಹಾಂದಿ, ಕೆಳಗೂರು, ವಸ್ತಾರೆ ಕೆಎಸ್‌ಆರ್‌ಟಿಸಿ ಗ್ರಾಮಗಳಲ್ಲಿ   ಬಸ್ ನಿಲುಗಡೆಯಿಲ್ಲದೆ ಶಾಲಾ ಕಾಲೇಜುಗಳಿಗೆ ಓಡಾಡುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್‌...

ಅವಿನ್ ಟಿವಿ ಸುದ್ದಿಜಾಲ *ಸಾವಿರಾರು ಭಾವಗಳಿಗೆ ಜೀವ ಧ್ವನಿಯಾಗಿದ್ದ ಗಾನಕೋಗಿಲೆ ಎಸ್ ಜಾನಕಿ ಅಮ್ಮ ಇನ್ನು ನೆನಪು ಮಾತ್ರ.* ಮೈಸೂರು ಜುಲೈ 11: ಭಾರತೀಯ ಚಿತ್ರರಂಗದ ಅದ್ಭುತ...

ಜೆ. ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೇರಣಾದಾಯಕ ಉಪನ್ಯಾಸ ಕಾರ್ಯಕ್ರಮ ಮೂಡಿಗೆರೆ, ಜುಲೈ 11: ಜೆ. ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 11/07/2026ರ ಶನಿವಾರ ವಿದ್ಯಾರ್ಥಿಗಳಿಗಾಗಿ...

ಅತ್ಯಾಚಾರ ಗಂಡಿನ ಅಂತಿಮ ಯಾತ್ರೆಯಾಗಲಿ........ { ಕಾಠಿಣ್ಯ ಎನಿಸಿದರೆ ಕ್ಷಮೆ ಇರಲಿ ) ಅತ್ಯಾಚಾರವಂತೆ ಅತ್ಯಾಚಾರ ಎಲ್ಲೆಲ್ಲೂ, ಅದೂ ಸಾಮೂಹಿಕ ಅತ್ಯಾಚಾರ......... ಛೆ, ಇನ್ನೆಷ್ಟು ದಿನ ಈ...