ಮೂಡಿಗೆರೆಯಲ್ಲಿ ಭಾರತೀಯ ಬೌದ್ಧ ಮಹಾಸಭಾ ತಾಲ್ಲೂಕು ಶಾಖೆ ಗೆ ಚಾಲನೆ…
1 min read
ಮೂಡಿಗೆರೆಯಲ್ಲಿ ಭಾರತೀಯ ಬೌದ್ಧ ಮಹಾಸಭಾ ತಾಲ್ಲೂಕು ಶಾಖೆ ಗೆ ಚಾಲನೆ…

ದಿನಾಂಕ -12-07-2026 ರ ಭಾನುವಾರ ದೀನ್ ದಯಾಳ್ ಸಭಾ ಭವನ ಮೂಡಿಗೆರೆ ಇಲ್ಲಿ ಭಾರತೀಯ ಬೌದ್ಧ ಮಹಾಸಭಾ ರಿ ಮೂಡಿಗೆರೆ ಶಾಖೆ ಗೆ ಚಾಲನೆ ಕೊಡುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತೀಯ ಬೌದ್ಧ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಶಿವರಾಜ್ ರವರು -‘ಮರಳಿ ನಮ್ಮ ಮೂಲ ಧರ್ಮಕ್ಕೆ ಹೋಗುವ ಕೆಲಸ ಇಡೀ ದೇಶದಲ್ಲಿ ನಡೆಯುತ್ತಿದೆ ಆ ನಿಟ್ಟಿನಲ್ಲಿ ಮೂಡಿಗೆರೆಯಲ್ಲಿ ಶಾಖೆಯನ್ನು ಮಾಡಿ ಆ ಮುಖೇನ ಧಮ್ಮದ ಪರಿಪೂರ್ಣ ವಿಚಾರವನ್ನು ಈ ಸಂಸ್ಥೆಯ ಮೂಲಕ ಜನರಲ್ಲಿ ಅರಿವು ಮೂಡಿಸಿ ನಾವೆಲ್ಲ ನಮ್ಮ ಮೂಲ ಧಮ್ಮಕ್ಕೆ ಮರಳುವ ಪ್ರಯತ್ನ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಉಪ ತಹಸೀಲ್ದಾರ್ ಬಿ ಪಿ ಮಂಜುನಾಥ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬೌದ್ಧ ಮಹಾಸಭಾ ದ ಜಿಲ್ಲಾಧ್ಯಕ್ಷ ಅನಿಲ್, ಜಿಲ್ಲಾ ಕಾರ್ಯದರ್ಶಿ ಪ್ರಕಾಶ್, ಹುಣಸೇಮಕ್ಕಿ ಲಕ್ಷ್ಮಣ,ನಿವೃತ್ತ ಶಿಕ್ಷಕ ಹಾಲಯ್ಯ , ನಿವೃತ್ತ ಅಂಚೆ ಇಲಾಖೆಯ ಮಹೇಂದ್ರ ಮೌರ್ಯ, ಮರಗುಂದ ಪ್ರಸನ್ನ, ಯು ಬಿ ಮಂಜಯ್ಯ, ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ. ಪರಮೇಶ್, ಶಂಕರ್ ಬೆಟ್ಟಗೆರೆ, ಎಲ್ ಬಿ ರಮೇಶ್, ಪಿ ಕೆ ಮಂಜುನಾಥ್, ಮಾರಯ್ಯ, ಚಂದ್ರಶೇಖರ್ , ಯುವರಾಜ್, ಬಕ್ಕಿ ಮಂಜುನಾಥ್, ನಿಂಗರಾಜ, ಶ್ರೀಕಾಂತ್, ಹೊನ್ನೇಶ್, ನಾಗೇಶ್, ರವಿ, ಮಹೇಶ್, ನವೀನ್, ವೆಂಕಟೇಶ್, ರಾಮಯ್ಯ, ರುದ್ರಯ್ಯ, ಸುರೇಶ್, ದೊಡ್ಡಯ್ಯ, ಸಂದೀಪ್ , ಹೊನ್ನೇಶ್ ಬೆಟ್ಟಗೆರೆ, ಗಾಯಿತ್ರಿ, ರಾಮು, ಪರಮೇಶ್, ಜಗದೀಶ್ ಸೋಮು, ಕುಮಾರ್, ಗಿರೀಶ್ ಮುಂತಾದವರು ಭಾಗವಹಿಸಿದ್ದರು.

