ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ರವರನ್ನು ಬೆಂಗಳೂರಿನಲ್ಲಿ ಭೇಟಿಮಾಡಿ ಹಾಸನ,ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು…
1 min read
ದಿನಾಂಕ 08.07.2026 ರಂದು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ರವರನ್ನು ಬೆಂಗಳೂರಿನಲ್ಲಿ ಭೇಟಿಮಾಡಿ
ಹಾಸನ,ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಸಭೆಯ ಪ್ರಾರಂಭದಲ್ಲಿ
ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಯಾಗಿ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಶ್ರೀಯುತರಿಗೆ ಈ ಸಂದರ್ಭದಲ್ಲಿ ಅಭಿನಂದಿಸಿ ಗೌರವ ಸೂಚಿಸಲಾಯಿತು
ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷರಾದ ಶ್ರೀ ಬಿಎಸ್ ಜೈರಾಮ್ ರವರು ಕಂದಾಯ ಭೂಮಿ, ಅರಣ್ಯ ಭೂಮಿಯ ಬಗ್ಗೆ ಮತ್ತು ನಮೂನೆ50, 53ರ ಭೂ ಮಂಜೂರಾತಿಯಲ್ಲಿನ ಹಗರಣದಲ್ಲಿ ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ 5ಗುಂಟೆ, 10ಗುಂಟೆ,ಹೀಗೆ ಅತ್ಯಂತ ಕಡಿಮೆ ಭೂಮಿ ಅನಧಿಕೃತ ಸಾಗುವಳಿ ಮಾಡಿರುವ ಸಾಕಷ್ಟು ಬಡ ರೈತರ ಅರ್ಜಿಗಳನ್ನು ಸರ್ಕಾರ ವಜಾ ಮಾಡಿರುವುದರಿಂದ ಬಹಳ ತೊಂದರೆ ಆಗಿರುತ್ತದೆ ಎಂದು ತಿಳಿಸಿದರು.ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಸಭೆಯೊಂದರಲ್ಲಿ ಪಾಲ್ಗೊಂಡು ಸಲಹೆ ನೀಡಲು ಅವಕಾಶ ಕಲ್ಪಿಸಿಕೊಡುವುದಾಗಿ ಆಶ್ವಾಸನೆ ನೀಡಿದರು.
ಪಟ್ಟಣ ಪಂಚಾಯಿತಿ ,ಪುರಸಭೆ, ನಗರಸಭೆ ಪರಿಮಿತಿಯಿಂದ 3 -5 ಕಿ.ಮೀ ಭಾಗದ ಜಮೀನುಗಳನ್ನು ನಗರಸಭೆ,ಪುರಸಭೆ ,ಪಟ್ಟಣ ಪಂಚಾಯತಿ ವ್ಯಾಪ್ತಿ ಪರಿಮಿತಿಗೆ ಹೊಂದಿಕೊಂಡಿರುವ ಗ್ರಾಮಾಂತರ ಭಾಗದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ಲಾಂಟೇಶನ್ ಮತ್ತು ಇತರ ಬೆಳೆಗಳ ಜಮೀನುಗಳನ್ನು ಬಫರ್ ಜೋನ್ ವ್ಯಾಪ್ತಿಯಿಂದ ಹೊರಗಿರುವಂತೆಯೂ ಶ್ರೀ B.S. ಜಯರಾಮ್ ಮನವಿ ಮಾಡಿದರು.
ಶ್ರೀ ಎಮ್ ಎಸ್ ಅನಂತ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಮಾತನಾಡಿ ತುಂಡುಭೂಮಿ ಕಾನೂನು ಕಾಯ್ದೆ ವಾಪಸ್ ಪಡೆಯುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.ಅಂದರೆ,ಐದು ಕಾಲು ಗುಂಟೆ ಜಮೀನನ್ನು ಮಾತ್ರ ರಿಜಿಸ್ಟರ್ ಮಾಡಲು ಸರ್ಕಾರದಿಂದ ಕಾನೂನು ತಿದ್ದುಪಡಿ ಮಾಡಿದ್ದು ಇದರಿಂದ ಮನೆ ಕಟ್ಟಿಕೊಳ್ಳಲುಒಂದು ಗುಂಟೆ, ಎರೆಡು ಗುಂಟೆ ಭೂಮಿ ಖರೀದಿ ಮಾಡಲು ಇಚ್ಚಿಸುವ ನಿವೇಶನ ರಹಿತರಿಗೆ ಅನಾನುಕೂಲವಾಗುತ್ತಿದೆ. ಈ ಕಾಯ್ದೆಗೆ ತಿದ್ದುಪಡಿ ತಂದು ಬಡವರಿಗೆ ಅನುಕೂಲವಾಗುವ ಕಾನೂನು ರೂಪಿಸುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಯುತರು ಕಂದಾಯ ಸಚಿವರು ಹಾಗೂ ಬೆಳೆಗಾರರ ಸಂಘಟನೆಗಳನ್ನು ಕರೆದು ಮುಂದಿನ ಮಂತ್ರಿ ಮಂಡಲ ಪುನರ್ ರಚನೆಯಾದ ನಂತರ ದಿನಾಂಕವನ್ನು ನಿಗದಿಪಡಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿರುತ್ತಾರೆ. ಭೇಟಿ ಮಾಡಿದ ನಿಯೋಗವು ನೂತನವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀ B.K ಹರಿಪ್ರಸಾದ್ ರವರನ್ನೂ ಕೂಡ ಗೌರವಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಬಿ ಬಿ ನಿಂಗಯ್ಯನವರು, ಮಾಜಿ ಶಾಸಕರಾದ ಶ್ರೀ ಎಂ ಪಿ ಕುಮಾರಸ್ವಾಮಿ ಅವರು, ಶ್ರೀ ಹಾಲಪ್ಪ ಗೌಡ್ರು, ಶ್ರೀ ಎಂ ಪಿ ಮನು ರವರು, ಶ್ರೀ ಡಿಕೆ ಉದಯಶಂಕರ್ ಅವರು, ಶ್ರೀ ಹೆಚ್ ಜಿ ಸುರೇಂದ್ರರವರು, ಶ್ರೀ ಸಿ ಕೆ ಇಬ್ರಾಹಿಂ ರವರು ಹಾಗೂ ಪಕ್ಷದ ಇತರೆ ಎಲ್ಲ ಮುಖಂಡರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
.

