AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಂಬಂಧಗಳ ಬಲೆಯೊಳಗೆ….

ಪೂರ್ವ ನಿರ್ಧಾರಿತ ಬಂಧನದಲ್ಲಿ….

ಒಂದು ನಿಗದಿತ ವ್ಯವಸ್ಥೆಯ ಜೈಲಿನಲ್ಲಿ….

ಹಿಂದಿನವರ ಅನುಭವದ ಗೋಡೆಗಳೊಳಗೆ…..

ಹುಟ್ಟುತ್ತಾ ವಿಶ್ವಮಾನವರು, ಬೆಳೆಯುತ್ತಾ……

ಹುಟ್ಟಿದ ಕ್ಷಣದಿಂದಲೇ ತಂದೆ ತಾಯಿಯ ಸಂಬಂಧ ಬೆಸೆಯುತ್ತದೆ.

ಅಕ್ಕ ಅಣ್ಣ, ತಮ್ಮ ತಂಗಿ,
ಬಂಧು ಬಳಗಗಳು ಕೂಡುತ್ತವೆ.

ಒಂದು ಧರ್ಮ ಪೂರ್ವ ನಿರ್ಧಾರಿತವಾಗಿ ನಮ್ಮ ಹೆಗಲೇರುತ್ತದೆ.

ಅದೇ ರೀತಿ ಒಂದು ಜಾತಿಯಲ್ಲಿ ನಮ್ಮನ್ನು ಗುರುತಿಸಲಾಗುತ್ತದೆ.

ಸಹಜವಾಗಿಯೇ ನಮ್ಮ ಗುರುತಿಗೆ ಒಂದು ಹೆಸರು ನಾಮಕರಣ ಮಾಡಲಾಗುತ್ತದೆ.

ಸಾಮಾನ್ಯವಾಗಿ ತಂದೆಯ ಭಾಷೆಯೇ ಮಾತೃಭಾಷೆಯಾಗುತ್ತದೆ.

ಮುಂದೆ ಶಾಲೆಯಲ್ಲಿ ಪ್ರಕಟಿತ ಪುಸ್ತಕದ ವಿಷಯಗಳನ್ನೇ ನಮಗೆ ಕಲಿಸಿಕೊಡಲಾಗುತ್ತದೆ.

ನಮ್ಮ ಸುತ್ತಲ ಆಹಾರ, ಉಡುಪುಗಳನ್ನೇ ಅನುಸರಿಸುವಂತೆ ಮಾಡಲಾಗುತ್ತದೆ.

ಎಂದಿನಂತೆ ಸ್ಥಳೀಯ ದೇವರು, ಸಂಪ್ರದಾಯಗಳೇ ನಮ್ಮ ಆಚರಣೆಯಾಗುತ್ತವೆ.

ಹದಿನೆಂಟು ತುಂಬಿದ ನಂತರ ಮತದಾನ ಮತ್ತು ಇಲ್ಲಿನ ಕಾನೂನುಗಳು ನಮ್ಮನ್ನು ನಿಯಂತ್ರಿಸುತ್ತವೆ.

ನಂತರ ಕೆಲಸ, ವ್ಯಾಪಾರ, ವ್ಯವಹಾರ, ಬದುಕಿನ ಕನಸುಗಳು.

ಸ್ವಜಾತಿ ಕುಲ ಗೋತ್ರಗಳಲ್ಲಿ ಮದುವೆ ಮಕ್ಕಳು ಸಂಸಾರ.

ಎಲ್ಲವೂ ಕ್ರಮಬದ್ಧ, ನಿಶ್ಚಿತ ಎಂಬಂತೆ ಸಾಗುತ್ತದೆ.

ಒಂದು ವೇಳೆ ಯಾವುದೋ
ಹಂತದಲ್ಲಿ ನಿಮ್ಮ ಅರಿವು ಈ ಕ್ರಮಬದ್ಧತೆಯನ್ನು
ಮೀರಿ ಜಾಗೃತಾವಸ್ಥೆ ತಲುಪಿ ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಚಿಂತನಾ ಸ್ವಾತಂತ್ರ್ಯ, ಭ್ರಮೆ ಕಳಚಿ ವಾಸ್ತವದೆಡೆಗೆ ನಿಮ್ಮ ಆಲೋಚನೆ ಹರಿಯಲು ಪ್ರಾರಂಭಿಸಿದರೆ ಮುಗಿಯಿತು.

ಮಾನಸಿಕ ತಳಮಳ, ಕ್ಷೋಭೆ, ವ್ಯವಸ್ಥೆಯ ಬಗೆಗಿನ ಭ್ರಮನಿರಸನ, ವಾಸ್ತವದ ಕಠೋರತೆ, ಹೊಂದಿಕೊಳ್ಳಲಾಗದ ಅಸಹಾಯಕತೆ, ಸತ್ಯ ಸುಳ್ಳಿನ ನಡುವಣ ವೇದನೆ, ಸತ್ಯದ ಹುಡುಕಾಟದಲ್ಲಿ ಜನಪ್ರಿಯತೆಯ ಮೇಲಾಟ,

ಅಬ್ಬಾ! ಅರೆ ಹುಚ್ಚರಂತಾಗುವ ಎಲ್ಲಾ ಸಾಧ್ಯತೆಯೂ ಇದೆ.

ಇದನ್ನು ಮೀರಿ ನಮ್ಮನ್ನು ನಾವು ಕಂಡುಕೊಳ್ಳುವ ಸಮಷ್ಠಿ ಪ್ರಜ್ಞೆಯ ಪ್ರಾಯೋಗಿಕ ಚಿಂತನೆಯನ್ನೇ ಪ್ರಬುದ್ಧತೆ ಎನ್ನಬಹುದೇ.

ವ್ಯವಸ್ಥೆಯನ್ನು
ಒಪ್ಪಿಕೊಂಡ ಸಾಮಾನ್ಯ ಜನಕ್ಕಿಂತ ಹಲವಾರು ಪಟ್ಟು ತಾಳ್ಮೆ, ತ್ಯಾಗ, ಪ್ರೀತಿ, ವಿಶ್ವಾಸ ಕರುಣೆ, ಕ್ಷಮಾಧಾನಗಳನ್ನು ಈ ಜಾಗೃತ ಮನಸ್ಥಿತಿಯ ವ್ಯಕ್ತಿ ಹೊಂದಿರಬೇಕಾಗುತ್ತದೆ.

ಬಹುಶಃ ಇತಿಹಾಸದಲ್ಲಿ ಮಹಾನ್ ವ್ಯಕ್ತಿಗಳೆಂದು ಗುರುತಿಸಲ್ಪಡುವ ಬುದ್ದ, ಬಸವ, ವಿವೇಕಾನಂದ, ಗಾಂಧಿ, ಅಂಬೇಡ್ಕರ್ ಮುಂತಾದವರು ಇದನ್ನು ಮೈಗೂಡಿಸಿಕೊಂಡಿದ್ದಿರಬಹುದೇ.

ಆದರೂ ಬಗೆಹರಿಯದ ಸಾಕಷ್ಟು ಗೊಂದಲಗಳು, ದ್ವಂದ್ವಗಳು, ಪ್ರಶ್ನೆಗಳು ಹಾಗೆಯೇ ಉಳಿಯುತ್ತದೆ. ಮತ್ತೆ ಅದರ ಸಹಜ ಹುಡುಕಾಟವೇ ಪ್ರಬುದ್ಧತೆ ಇರಬಹುದೇ.

ಎಲ್ಲವನ್ನು ಮೀರುವ, ಒತ್ತಡವನ್ನು ಸಹಿಸುವ, ಸಮಷ್ಠಿ ಪ್ರಜ್ಞೆಯ, ವಿಶಾಲ ಹೃದಯದ, ಧ್ಯಾನಸ್ತ ಮನಸ್ಥಿತಿಯ ಬದುಕು ನಮ್ಮದಾಗಲಿ ಎಂದು ಆಶಿಸುತ್ತಾ………

ಒಂದು ಸುಂದರ, ಒಳ್ಳೆಯ ಗುಣಮಟ್ಟದ ನಾಗರಿಕ ಸಮಾಜ ನಿರ್ಮಾಣಕ್ಕೆ ಇವು ತುಂಬಾ ಅವಶ್ಯಕ ಎಂದು ಭಾವಿಸುತ್ತಾ…..

ಈ ನಿಟ್ಟಿನಲ್ಲಿ ನಾವು ನೀವು, ಮುಖವಾಡಗಳನ್ನು ತೊರೆದು, ಸಹಜ ವ್ಯಕ್ತಿತ್ವ ಅನಾವರಣಗೊಳ್ಳಲು ಅನುವು ಮಾಡಿಕೊಡೋಣ ಎಂದು ಮನವಿ ಮಾಡಿಕೊಳ್ಳುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.

✍🏻ಬರಹ ಕೃಪೆ.✍🏻

ವಿವೇಕಾನಂದ.ಎಚ್.ಕೆ.

9663750451.

9844013068.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

About Author

Leave a Reply

Your email address will not be published. Required fields are marked *

You may have missed