“ಪಿಂಚಣಿ ಹಾಗೂ ಅಂತ್ಯಕ್ರಿಯೆ ನೆರವು ಸ್ಥಗಿತ ಖಂಡನೆ : ಸರ್ಕಾರದ ವಿರುದ್ಧ ಜೆಡಿಎಸ್ ಮುಖಂಡರ ವಾಗ್ದಾಳಿ.”
1 min read
ಸಾಮಾಜಿಕ ಭದ್ರತಾ ಯೋಜನೆ ಅಡಿ ಮಾಸಿಕ ಪಿಂಚಣಿಗಳನ್ನು ತಡೆ ಹಿಡಿದಿರುವ ಸರ್ಕಾರ ಕೂಡಲೇ ಪಿಂಚಣಿದಾರರಿಗೆ ಹಣವನ್ನು ಬಿಡುಗಡೆ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆನಂದ್ ನಾಯ್ಕ ಹಳೆಹಟ್ಟಿ ಒತ್ತಾಯಿಸಿ ದಿನಾಂಕ 21/07/2026ರ ಮಂಗಳವಾರದಂದು ಮಾತನಾಡಿದ ಅವರು ಈ ಯೋಜನೆ ಅಡಿ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗಿರುವವರಿಗೆ ಹಾಗೂ ಹಾಲಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ಸಂದೇಹಸ್ಪದವಾಗಿ ಪಡೆಯುತ್ತಿರುವ ಫಲಾನುಭವಿಗಳಿಗೆ ತಿಳುವಳಿಕೆ ಪತ್ರ ನೀಡುವ ನೆಪದಲ್ಲಿ ಮೂರು ತಿಂಗಳಿನಿಂದ ಪಿಂಚಣಿಯನ್ನು ತಡೆಹಿಡಿದಿದ್ದಾರೆಂದು ಆರೋಪಿಸಿದರು.
ಇದರ ಜೊತೆಗೆ ಅಂತ್ಯಕ್ರಿಯೆಗೆ ನೀಡುತ್ತಿದ್ದ ಹಣವನ್ನು ಸಹ ನಿಲ್ಲಿಸಿದ್ದು ಇದರಿಂದಾಗಿ ಬಡ ಕುಟುಂಬಗಳಿಗೆ ತೊಂದರೆಯಾಗಿದೆ ಈ ಹಣವನ್ನು ಅನ್ಯ ಉದ್ದೇಶಕ್ಕೆ ಪಂಚ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲು ಸರ್ಕಾರ ಹೊನ್ನಾರ ನಡೆಸುತ್ತಿದೆ ಎಂದು ಟೀಕಿಸಿದರು ಜಿಲ್ಲೆಯಲ್ಲಿ ಜೂನ್ ಅಂತ್ಯಕ್ಕೆ 69029 ಸಂದೇಹಾಸ್ಪದ ಫಲಾನುಭವಿಗಳ ಪೈಕಿ ಒಟ್ಟು 56529 ಫಲಾನುಭವಿಗಳ ಭೌತಿಕ ಪರಿಶೀಲನೆಯನ್ನು ಪೂರ್ಣಗೊಳಿಸಲಾಗದೆ ಈ ಪೈಕಿ 55269 ದಾಖಲೆಗಳನ್ನು ಗ್ರಾಮ ಆಡಳಿತಾಧಿಕಾರಿಯವರು ಪರಿಶೀಲನೆ ಸಂದರ್ಭದಲ್ಲಿ ಫಲಾನುಭವಿ ಗ್ರಾಮದಲ್ಲಿ ವಾಸವಿಲ್ಲವೆಂದು ಮತ್ತು ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲವೆಂದು ಹಾಗೂ ಆದಾಯ ಪತ್ರವನ್ನು ಒದಗಿಸಿಲ್ಲವೆಂದು ವರದಿಯಲ್ಲಿ ನೀಡಿದ್ದಾರೆಂದು ದೂರಿದರು ಮಾಸಿಕ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಆದಾಯ ಮಿತಿಯನ್ನು 32 ಸಾವಿರಕ್ಕೆ ಸೀಮಿತಗೊಳಿಸಲಾಗಿದ್ದು ಪಡಿತರ ಚೀಟಿಯಲ್ಲಿ ಗಂಡು ಮಕ್ಕಳ ಹೆಸರು ಇರಬಾರದು ನಿರ್ಗತಿಕರಾಗಿರಬೇಕು ಜಮೀನು ಹೊಂದಿರಬಾರದು ಎಂಬ ನಿಬಂಧನೆಗಳನ್ನು ಸರಣಿಕರಿಸಿ 1,20 ಲಕ್ಷ ರೂ ಗೆ ಆದಾಯ ಮಿತಿ ಹೆಚ್ಚಳ ಮಾಡುವಂತೆ ಆಗ್ರಹಿಸಿದರು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಂತ ಹಂತವಾಗಿ ಪಿಂಚಣಿ ಯೋಜನೆಯ ಹಣ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ರಮೇಶ್ ನಾಯಕ ಸಿ ಕೆ ಮೂರ್ತಿ ತರುಣ್ ಶ್ರೀಕಾಂತ್ ಮತ್ತಿತರು ಉಪಸ್ಥಿತರಿದ್ದರು.
✍🏻ಬರಹ ಕೃಪೆ.✍🏻

ರತ್ನ ನಾಗೇಶ್.
ಚಿಕ್ಕಮಗಳೂರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

