लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
26/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಳಸ ತಾಲೂಕಿನ ಸಂಸೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸೆ ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು….

1 min read

ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ……..
ಕಳಸ ತಾಲೂಕಿನ ಸಂಸೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸೆ ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಸಿ ಆರ್ ಪಿ ಗಿರೀಶ್ ರವರು, ಇದೊಂದು ಮಕ್ಕಳ ವಿಕಸನಕ್ಕೆ ಅದ್ಭುತವಾದ ವೇದಿಕೆ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳ ಹೊರ ಹೊಮ್ಮುವ ಒಂದು ಸುಂದರ ಕಲ್ಪನೆಯ ಕಾರ್ಯಕ್ರಮ ಇದರ ಸದುಪಯೋಗವನ್ನು ಪಡಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಮಕ್ಕಳದು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಸ್ಟರ್ ಶೌರ್ಯ ವಿಪತ್ತು ಘಟಕ ಅಧ್ಯಕ್ಷ ಮಹೇಶ್ ಮಾತನಾಡಿ, ಇದು ಕೇವಲ ಮಕ್ಕಳಿಗೆ ವೇದಿಕೆ ಅಲ್ಲ ಬದಲಾಗಿ ಇಡೀ ಗ್ರಾಮಕ್ಕೆ ಸಾರ್ವಜನಿಕರಿಗೆ ಹಬ್ಬ ಎಂದರೆ ತಪ್ಪಾಗಲಾರದು, ಎಷ್ಟೋ ಮಕ್ಕಳಿಗೆ ಇದೇ ಒಂದು ಜೀವನದಲ್ಲಿ ದೊಡ್ಡ ಅವಕಾಶ ಆಗಬಹುದು ಹಾಗಾಗಿ ಸೋಲು ಗೆಲುವಿಗೆ ಭಯ ಪಡದೆ ನಿಮ್ಮ ಕಲೆಯನ್ನು ತೋರಿಸುವ ಕಡೆಗೆ ಮಾತ್ರ ಗಮನ ಕೊಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಂಜಪ್ಪ ಮಾತನಾಡಿ, ಈ ದಿನ ನಾವೆಲ್ಲರೂ ಅಂಬೇಡ್ಕರ್ ರವರನ್ನು ನೆನಸಿಕೊಳ್ಳಬೇಕು ಕಾರಣ ನಾವೆಲ್ಲರೂ ಇಷ್ಟು ಅದ್ಭುತವಾದ ವೇದಿಕೆಯಲ್ಲಿ ಸೇರಲು ಕಾರಣ ಭಾರತದ ಸಂವಿಧಾನ ಅಂಬೇಡ್ಕರ್ ಎಂದು ಹೇಳುತ್ತಾ
ಅಪ್ಪ ಅಮ್ಮನ ಆಸ್ತಿಯಲ್ಲಿ ಯಾರಾದರೂ ಪಾಲು ಕೇಳಬಹುದು ಆದರೆ ನಿಮ್ಮ ಪ್ರತಿಭೆ ಮತ್ತು ನಿಮ್ಮ ವಿಧ್ಯೆ ಅದನ್ನ ಯಾರಿಂದನು ಕೇಳಲು ಸಾಧ್ಯವಿಲ್ಲ ನೀವು ಚೆನ್ನಾಗಿ ಓದಬೇಕು ಎಂಬ ಕಿವಿ ಮಾತನ್ನ ವಿಧ್ಯಾರ್ಥಿಗಳ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಜಯಂತ್ ಅಧ್ಯಕ್ಷೆತೆ ಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಭಾಕರ್, ಸುಜಿತ್ ಬೆಳ್ಳ , ಶ್ರೀನಿವಾಸ್, ಉದಯ್, ಹೆಲನ್ ಲೆವಿಯ , ಬಸವರಾಜ, ಬದ್ರುದ್ದೀನ್ , ಪದ್ಮಪ್ರಭ ಜೈನ್, ಅಹಮದ್ ಬಾವ, ರಮೇಶ್ ಆಟೋ, ಉಮೇಶ್, ಪ್ರದೀಪ್ ಕಡೆಪಾಲ, ಯೂಸುಫ್, ಮಹಮದ್, ಅಬೂಬಕರ್, ಅಜೀಜ್ , ಕುಮಾರ್ ಸಬ್ಲಿ, ಅಬೂಬಕರ್, ಸತೀಶ್, ದೇವಿಕಾ, ಅಶ್ವಿನಿ, ಅನ್ನಪೂರ್ಣ, ಶಕುಂತಲಾ, ಯಶೋದಾ , ವಸಂತ,
ಕಾರ್ಯಕ್ರಮದ ಸ್ವಾಗತವನ್ನು ಶಕುಂತಲಾ
ವಂದನಾರ್ಪಣೆಯನ್ನು ಭಾರತಿ
ಕಾರ್ಯಕ್ರಮದ ನಿರ್ವಣೆಯನ್ನು ಚಿಂತನ್ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಬೋಧನೆ ವಿಶೇಷವಾಗಿ ಗಮನ ಸೆಳೆಯಿತು.

About Author

Leave a Reply

Your email address will not be published. Required fields are marked *

You may have missed