लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
26/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಭಾರತದ ಸಂವಿಧಾನ ಕೋಮುವಾದ ಮತ್ತು ಫ್ಯಾಸಿಸ್ಟ್ ಶಕ್ತಿಗಳ ಕಸ್ಟಡಿಯಲ್ಲಿದೆ “

1 min read

“ಭಾರತದ ಸಂವಿಧಾನ ಕೋಮುವಾದ ಮತ್ತು ಫ್ಯಾಸಿಸ್ಟ್ ಶಕ್ತಿಗಳ ಕಸ್ಟಡಿಯಲ್ಲಿದೆ “

ನವೆಂಬರ್ 26 ಸಂವಿಧಾನ ದಿನ,

ನವೆಂಬರ್ 26 ಬಂದರೆ ಸಾಕು ದೇಶದ ಮೂಲೆ ಮೂಲೆಗಳಲ್ಲಿ ಸಂವಿಧಾನ ಪೀಠಿಕೆ ಓದಲಾಗುತ್ತದೆ. ನಾಯಕರು ಸಂವಿಧಾನ ಪುಸ್ತಕವನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆಸಿಕೊಳ್ಳುತ್ತಾರೆ. ದೊಡ್ಡ ದೊಡ್ಡ ವೇದಿಕೆಗಳಲ್ಲಿ ದೊಡ್ಡ ದೊಡ್ಡ ಭಾಷಣಗಳು. ಆದರೆ ಸಂವಿಧಾನದ ಆತ್ಮವನ್ನು ಕೇಳಿದರೆ ಅದು ಇನ್ನೂ ನರಳುತ್ತಿದೆ.

ಡಾ. ಬಿ.ಆರ್ ಅಂಬೇಡ್ಕರ್ ಅವರ ಬರೆದುಕೊಟ್ಟ ಸಂವಿಧಾನ ಇಂದು ಸಂವಿಧಾನದ ವಿರೋಧಿಗಳ ಕೈಯಲ್ಲಿ ಅವರ ಕಸ್ಟಡಿಯಲ್ಲಿದೆ. ಕೋಮುವಾದ ಮತ್ತು ಫ್ಯಾಸಿಸ್ಟ್ ಶಕ್ತಿಗಳು ಸಂವಿಧಾನವನ್ನು ಹೊರಗಿನಿಂದ ನಾಶ ಮಾಡುತ್ತಿಲ್ಲ ಒಳಗಿನಿಂದ ಟೊಳ್ಳು ಮಾಡುತ್ತಿವೆ.

ಸಂವಿಧಾನ ಎಂದರೆ ಏನು?

ಸಂವಿಧಾನ ಎಂದರೆ ಕೇವಲ ಒಂದು ಪುಸ್ತಕವಲ್ಲ. ಅದು ಈ ದೇಶದ ಎಲ್ಲಾ ಜನರ ನಡುವೆ ಮಾಡಿಕೊಂಡ ಒಪ್ಪಂದ.

ನಾವು ಭಾರತದ ಜನರು ಎಲ್ಲರೂ ಸಮಾನರು ಯಾವುದೇ ಜಾತಿ, ಧರ್ಮ, ಲಿಂಗ, ಭಾಷೆ, ತಾರತಮ್ಯ ಇಲ್ಲದೆ ಪ್ರತಿಯೊಬ್ಬರು ಮಾತನಾಡುವ ಸ್ವಾತಂತ್ರ್ಯ,ಬದುಕುವ ಹಕ್ಕು, ತನ್ನ ಧರ್ಮವನ್ನು ಪಾಲಿಸುವ ಹಕ್ಕು, ಬಡವ – ಶ್ರೀಮಂತನಿಗೆ ಒಂದೇ ಕಾನೂನು ಇದು ಸಂವಿಧಾನದ ಮೂಲ ಆಶಯ

ಅಂಬೇಡ್ಕರ್ ಅಂದೇ ಎಚ್ಚರಿಸಿದರು ಸಂವಿಧಾನ ಎಷ್ಟು ಒಳ್ಳೆಯದಾದರೂ ಅದನ್ನು ಜಾರಿಗೆ ತರುವವರು ಕೆಟ್ಟವರಾದರೇ ಸಂವಿಧಾನದ ಮೂಲ ಆಶಯಗಳನ್ನು ಈಡೇರಿಸಲು ಸಾಧ್ಯವೇ ಆಗುವುದಿಲ್ಲ ಎಂದರು.

ಕೋಮುವಾದ ಹೇಗೆ? ಸಂವಿಧಾನವನ್ನು ಕಬಳಿಸುತ್ತಿದೆ ಎಂದರೆ:

ಸಂವಿಧಾನ ಹೇಳುತ್ತದೆ ಭಾರತ ಜಾತ್ಯತೀತ ರಾಷ್ಟ್ರ ಅಂದರೆ ಸರ್ಕಾರಕ್ಕೆ ಯಾವುದೇ ಧರ್ಮ ಇಲ್ಲ ಎಲ್ಲಾ ಧರ್ಮಗಳು ಸಮಾನ ಆದರೆ ಇಂದು ಏನು ನಡೆಯುತ್ತಿದೆ? ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯಲಾಗುತ್ತಿದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ಗೋಡೆ ಕಟ್ಟಲಾಗುತ್ತಿದೆ ಚುನಾವಣೆ ಬಂದರೆ ಸಾಕು, ಮಸೀದಿ, ಮಂದಿರ, ಈಜಾಬ್,ಆಲಾಲ್, ಗೋಮಾಂಸದ ವಿಚಾರಗಳು ಮುನ್ನಡೆಗೆ ಬರುತ್ತವೆ ಜನರ ಹೊಟ್ಟೆಗೆ ಅನ್ನ ಕೈಗೆ ಕೆಲಸ ಮಕ್ಕಳಿಗೆ ಶಿಕ್ಷಣದ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಒಂದು ಧರ್ಮವನ್ನು ದೇಶದ್ರೋಹಿಗಳಂತೆ ತೋರಿಸಿ ಇನ್ನೊಂದು ಧರ್ಮದವರು ನಿಜವಾದ ದೇಶ ದೇಶ ಭಕ್ತರಂತೆ ಬಿಂಬಿಸಲಾಗುತ್ತಿದೆ ಇದು ಸಂವಿಧಾನದ ಸಮಾನತೆಯ ತತ್ವಕ್ಕೆ ನೇರವಾದ ದ್ರೋಹ.
ಸಂವಿಧಾನದ ಪೀಠಿಕೆಯಲ್ಲಿ ಬರೆದಿರುವ ಭ್ರಾತೃತ್ವ ಅಂದರೆ ಸಹೋದರತ್ವ. ಈ ದಿನಮಾನಗಳಲ್ಲಿ ಭ್ರಾತೃತ್ವ ಎಂಬ ಸಂವಿಧಾನದ ಆಶಯ ಹಳ್ಳಿಯಿಂದ ಕಳೆದುಹೋಗುತ್ತಿದೆ ನೆರೆಹೊರೆಯವರನ್ನು ಅನುಮಾನದ ದೃಷ್ಟಿಯಿಂದ ನೋಡುವ ಪರಿಸ್ಥಿತಿ ಬಂದಿದೆ

ಫ್ಯಾಸಿಸ್ಟ್ ಶಕ್ತಿಗಳ ಕಸ್ಟಡಿ
ಅಂದರೆ, ಫ್ಯಾಸಿಸಂ ಎಂಬ ಒಬ್ಬ ನಾಯಕ, ಒಂದು ಪಕ್ಷ,ಒಂದು ಧರ್ಮ, ಒಂದು ಭಾಷೆ ಮಾತ್ರ ಸರಿ ಉಳಿದವೆಲ್ಲವೂ ತಪ್ಪು ಎಂಬ ಸಿದ್ದಾಂತ.

ಪ್ರಶ್ನೆ ಮಾಡಿದವರನ್ನು ದೇಶದ್ರೋಹಿ ಎಂಬುದೇ ಇದರ ಮೊದಲ ಲಕ್ಷಣ.

ಇಂದು ಸಂವಿಧಾನ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ ಪತ್ರಕರ್ತ ಪ್ರಶ್ನೆ ಮಾಡಿದರೆ ಜೈಲು ವಿದ್ಯಾರ್ಥಿ ಪ್ರಶ್ನೆ ಮಾಡಿದರೆ ದೇಶದ್ರೋಹಿ ರೈತ ಹಕ್ಕು ಕೇಳಿದರೆ ಲಾಟಿಚಾರ್ಜ್,ಕಾರ್ಮಿಕ ಸಂಬಳ ಕೇಳಿದರೆ ನಕ್ಸಲ್, ದಲಿತ ತನ್ನ ಹಕ್ಕು ಕೇಳಿದರೆ ಜಾತಿವಾದಿ..

ಸಂವಿಧಾನದ ಸಂಸ್ಥೆಗಳಲ್ಲಿ ಪ್ರಮುಖವಾದ ಚುನಾವಣಾ ಆಯೋಗ, ಇಂದು ಎಂತಹ ಸಂವಿಧಾನ ವಿರೋಧಿ ದ್ರೋಹ ಮಾಡುತ್ತಿದೆ ಎಂಬುದನ್ನು ದಿನನಿತ್ಯ ನಾವು ಗಮನಿಸುತ್ತೇವೆ.

ಪತ್ರಿಕ ರಂಗ, ಮಾಧ್ಯಮ, ವಿಶ್ವವಿದ್ಯಾಲಯಗಳು, ಇವುಗಳೆಲ್ಲವೂ, ಸಂವಿಧಾನ ಪ್ರಕಾರ ಸ್ವಾತಂತ್ರ್ಯವಾಗಿರಬೇಕಿತ್ತು ಆದರೆ ಇಂದು ಇವೆಲ್ಲವೂ ಆಳುವ ವರ್ಗದ ಕೈ ಗೊಂಬೆಯಾಗಿವೆ.

ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು ಆದರೆ ಇಂದು ಅಧಿಕಾರದಲ್ಲಿರುವವರಿಗೆ ಒಂದು ಕಾನೂನು.

ವಿರೋಧ ಮಾಡುವವರಿಗೆ ಇನ್ನೊಂದು ಕಾನೂನಾಗಿದೆ.

ಅಂಬೇಡ್ಕರ್ ಅವರ ಕನಸಿಗೆ ದ್ರೋಹ

ಅಂಬೇಡ್ಕರ್ ಅವರ ಸಂವಿಧಾನವನ್ನು ಬರೆದಿದ್ದು ದಲಿತರಿಗೆ ಮಾತ್ರ ಅಲ್ಲ. ಭಾರತದ ಪ್ರತಿಯೊಬ್ಬರ ಸಮಾನತೆಯಿಂದ ಬದುಕಲಿ ಎಂಬುದು ಅವರ ಆಶಯವಾಗಿತ್ತು.

ಆದರೆ ಇಂದು ಜಾತಿ ವ್ಯವಸ್ಥೆಯನ್ನು ಮತ್ತೆ ಗಟ್ಟಿ ಮಾಡಲಾಗುತ್ತಿದೆ. ಮೀಸಲಾತಿಯನ್ನು ಮುಗಿಸಬೇಕು ಎಂಬ ಷಡ್ಯಂತರ ನಡೆಯುತ್ತಿದೆ. ಸರ್ಕಾರಿ ಉದ್ಯೋಗಗಳನ್ನೆಲ್ಲ ಖಾಸಗಿಕರಣ ಮಾಡಿ ಮೀಸಲಾತಿ ಇಲ್ಲದಂತೆ ಮಾಡಲಾಗುತ್ತಿದೆ ದಲಿತರ ಮೇಲೆ ಮಹಿಳೆಯರ ಮೇಲೆ ಅಲ್ಪಸಂಖ್ಯಾತರ ಇನ್ನಿಲ್ಲದಂತೆ ದೌರ್ಜನ್ಯ ಮಾಡಲಾಗುತ್ತಿದೆ ದೌರ್ಜನ್ಯ ಮಾಡಿದವರನ್ನು ಹಾರ ಹಾಕಿ ಸ್ವಾಗತಿಸಲಾಗುತ್ತಿದೆ.

ನವೆಂಬರ್ 26 ನಮಗೆ ಏನು ಏನು ಹೇಳುತ್ತದೆ.

ನವೆಂಬರ್ 26 ಕೇವಲ ಸಂವಿಧಾನ ದಿನವಲ್ಲ ಅದು ನಮ್ಮ ಪ್ರತಿಜ್ಞೆ ದಿನವಾಗಬೇಕು.

ಸಂವಿಧಾನ ಕೋಮುವಾದಿಗಳ ಕಸ್ಟಡಿಯಲ್ಲಿದೆ ಅದನ್ನು ಬಿಡಿಸಿಕೊಳ್ಳಲು ಜನರ ಕೈಗೆ ಮತ್ತೆ ಅಧಿಕಾರ ತರಬೇಕು. ಸಂವಿಧಾನವನ್ನು ಉಳಿಸುವುದು ಎಂದರೆ ಪುಸ್ತಕವನ್ನು ಉಳಿಸುವುದಲ್ಲ ಅದರ ಮೌಲ್ಯಗಳನ್ನು ಉಳಿಸುವುದು.

ನಾವು ಕೇಳಲೇಬೇಕಾದ ಬಹುಮುಖ್ಯ ಪ್ರಶ್ನೆಗಳೆಂದರೆ?

ನಮ್ಮ ಹಳ್ಳಿಯಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶ ಇದೆಯೇ ನಮ್ಮ ಪಕ್ಕದ ಮನೆ ಮುಸ್ಲಿಂ ಸಹೋದರರೇ ಭಯವಿಲ್ಲದೆ ಬದುಕಲು ಸಾಧ್ಯವಿದೆಯೇ?ಮಹಿಳೆಯರು ಒಂಟಿಯಾಗಿ ಬದುಕಲು ಸ್ವಾತಂತ್ರ್ಯ ಇದೆಯೇ?ಬಡವನ ಮಗನಿಗೂ ಶ್ರೀಮಂತನ ಮಗನಿಗೆ ಸಿಗುವ ಶಿಕ್ಷಣ ಸಿಗುತ್ತಿದೆಯೇ?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ “ಇಲ್ಲ” ಎಂದು ಬಂದರೆ ಸಂವಿಧಾನ ಇನ್ನೂ ಕಸ್ಟಡಿಯಲ್ಲಿದೆ ಎಂದರ್ಥ.

ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ನಮಗೆ ಬರೆದುಕೊಟ್ಟು ಹೋಗಿದ್ದಾರೆ ಅದನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಕೋಮುವಾದ ಮತ್ತು ಫ್ಯಾಸಿಸ್ಟ್ ಎಂಬ ಕತ್ತಲೆಯಿಂದ ಸಂವಿಧಾನ ಹೊರಗೆ ತರಲೇ ಬೇಕಾಗಿದೆ ಸಂವಿಧಾನ ಉಳಿದರೆ ಮಾತ್ರ ಭಾರತ ದೇಶ ಉಳಿಯುತ್ತದೆ ಸಂವಿಧಾನ ಇಲ್ಲದಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣವಾಗಿ ನಾಶವಾಗಿ ಸರ್ವಾಧಿಕಾರ ಹುಟ್ಟುತ್ತದೆ. ಆದ್ದರಿಂದ ಈ ದಿನ ನಾವು ಪ್ರತಿಜ್ಞೆ ಮಾಡೋಣ ಸಂವಿಧಾನವನ್ನು ಕಸ್ಟಡಿಯಿಂದ ಬಿಡಿಸುತ್ತೇವೆ . ಬಹು ಸಂಖ್ಯಾತರ ಕೈಗೆ ಮತ್ತೆ ಸಂವಿಧಾನವನ್ನು ಕೊಡುತ್ತೇವೆ.

ಅದಕ್ಕಾಗಿ ಆದರೂ…….

ಜನಪರ ಚಿಂತನೆಗಳುಳ್ಳ ಜನಪರ, ಜೀವಪರ ಸಂಘಟನೆಗಳು, ಬುದ್ಧಿಜೀವಿಗಳು ವಿಚಾರವಂತರು, ಮಹಿಳೆಯರು,ವಿದ್ಯಾರ್ಥಿ ಸಮುದಾಯ, ಬರಹಗಾರರು, ಪ್ರಜ್ಞಾವಂತರು, ಅಲ್ಪಸಂಖ್ಯಾತರು, ಒಂದಾಗಬೇಕಾಗಿದೆ. ಸಣ್ಣ ಸಣ್ಣ ಸೈದಾಂತಿಕ ಭಿನ್ನಾಭಿಪ್ರಾಯಗಳು, ವ್ಯಕ್ತಿ ಪ್ರತಿಷ್ಠೆ ಬಿಟ್ಟು ಒಂದೇ ವೇದಿಕೆಗೆ ಬಂದು ಪ್ರತಿ ಹಳ್ಳಿ ಹಳ್ಳಿಗೂ ಒಗ್ಗಟ್ಟಿನಿಂದ ತೆರಳಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಿ “ಜನಜಾಗೃತಿ” ಮಾಡಬೇಕಾಗಿದೆ.
ಆಗ ಮಾತ್ರವೇ ಸಂವಿಧಾನವನ್ನು ಕೋಮುವಾದ ಮತ್ತು ಪ್ಯಾಸಿಸ್ ಶಕ್ತಿಗಳ ಕಸ್ಟಡಿಯಿಂದ ಭಾರತದ ಸಂವಿಧಾನವನ್ನು ಬಿಡಿಸಬಹುದು.

“ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್,ಜೈ ಭೀಮ್, ಜೈ ಸಂವಿಧಾನ್ ಎಂಬುದು ಭಾರತೀಯರ ದ್ಯೇಯ ವಾಕ್ಯವಾಗಲಿ ”

ಬರಹ : ಡಾ. ಹರೀಶ್ ನಲ್ಕೆ
9731493209

About Author

More Stories

Leave a Reply

Your email address will not be published. Required fields are marked *

You may have missed