ಬುದ್ಧ ಶಾಸನದಂತೆ ಅನಂತ್ ರವರಿಗೆ ವಿಧಿ ವಿಧಾನ ಸಲ್ಲಿಸಿದ ಭಾರತೀಯ ಬೌದ್ಧ ಮಹಾಸಭಾ ಮೂಡಿಗೆರೆ……
1 min read
ಬುದ್ಧ ಶಾಸನದಂತೆ ಅನಂತ್ ರವರಿಗೆ ವಿಧಿ ವಿಧಾನ ಸಲ್ಲಿಸಿದ ಭಾರತೀಯ ಬೌದ್ಧ ಮಹಾಸಭಾ ಮೂಡಿಗೆರೆ……
ಮೂಡಿಗೆರೆ ತಾಲೂಕಿನಲ್ಲಿ ತನ್ನದೇ ಆದ ವ್ಯಕ್ತಿತ್ವದ ಮೂಲಕ ಜನ ಮಾನಸದಲ್ಲಿ ಸರ್ವರ ಪ್ರೀತಿ ಗಳಿಸಿದ್ದ ಅನಂತ್ ರವರು ತನ್ನ ಬದುಕಿಗೆ ವಿದಾಯ ಹೇಳಿದ ದಿನವಿದು.
ಅನಂತ ರವರು ಅಂಬೇಡ್ಕರ್ ವಿಚಾರಗಳ ಪ್ರೇರಣೆಯೊಂದಿಗೆ ತಮ್ಮ ಜೀವನದಲ್ಲಿ ಸಾಕಷ್ಟು ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವಲ್ಲಿ ಪ್ರಯತ್ನಿಸುತ್ತಿದ್ದರು ಆ ಕಾರಣಕ್ಕಾಗಿ ಬೌದ್ಧ ಮಹಾಸಭಾ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿ ಬೌದ್ಧ ಧರ್ಮದ ಪ್ರಭಾವ ಮತ್ತು ಪರಿಣಾಮ ತನ್ನ ಹಾಗೂ ಕುಟುಂಬವನ್ನು ತೊಡಗಿಸುವಲ್ಲಿ ಪ್ರಯತ್ನವನ್ನು ನಡೆಸಿದಲ್ಲದೆ ಸಮಾಜದಲ್ಲಿ ಮರಳಿ ಬುದ್ಧ ನಾಡನ್ನು ಕಟ್ಟುವ ಮೂಲಕ ಶಾಂತಿಯ ನಾಡನ್ನು ಕಟ್ಟಬೇಕು ಎನ್ನುವ ಸಂದೇಶವನ್ನು ಹಲವಾರು ಬಾರಿ ಬದುಕಿದಾಗ ಪ್ರಸ್ತಾಪಿಸಿದ ಹಿನ್ನಲೆಯಲ್ಲಿ ಅವರ ಕುಟುಂಬವನ್ನು ಒಪ್ಪಿಸಿ ಎಲ್ಲರ ಆಶಯದಂತೆ ಈ ದಿನ ಅವರ ಸಂಸ್ಕಾರದ ಕಾರ್ಯವನ್ನು ಭಾರತೀಯ ಬೌದ್ಧ ಮಹಾಸಭಾ ಮೂಡಿಗೆರೆ ಇವರು ಈ ದಿನ ಬುದ್ಧ ಶಾಸನದಂತೆ ಅನಂತ್ ರವರ ವಿಧಿ ವಿಧಾನವನ್ನು ಬೌದ್ಧ ಉಪಾಸಕರಾದ ಬೇಲೂರಿನ ಗಂಗಾಧರ ರವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಭಾರತೀಯ ಬೌದ್ಧ ಮಹಾಸಭಾ ದ ಅಧ್ಯಕ್ಷರಾದ ಹಾಲಯ್ಯ , ಬಿ ಬಿ ನಿಂಗಯ್ಯ, ಮಂಜಯ್ಯ, ಪಿ ಕೆ ಸಾವಿತ್ರಿ ಮಹೇಂದ್ರ ಮೌರ್ಯ, ಜಿಲ್ಲಾಧ್ಯಕ್ಷ ಅನಿಲ್, ಕೆ ಟಿ ರಾಧಾಕೃಷ್ಣ, ಪರಮೇಶ್, ಗಂಗಾಧರ, ಹರೀಶ್,ಮಂಜುನಾಥ್,ಚಂದ್ರಶೇಖರ್, ಮಂಜುನಾಥ್ ಬಿ ಪಿ, ಮಹೇಶ್, ನಾಗೇಶ್, ನಾಗರಾಜ್, ಹೊನ್ನೇಶ್, ಲಕ್ಷ್ಮಣ್ , ರಮೇಶ್, ಶಂಕರ್, ನಿಖಿಲ್, ಜೈಪಾಲ್, ಚಂದ್ರಶೇಖರ್, ಕೆ ಸಿ , ಅಭಿ, ನವೀನ್, ಶಶಿ, ನಾಗೇಶ್ ಬಕ್ಕಿ , ಹರೀಶ್ ನಲಿಕೆ, ಜಗದೀಶ್, ರವಿ ಬಿ ಜೆ ,ಚೇತನ್, ಮುಂತಾದವರು ಹಾಜರಿದ್ದರು.

