लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
05/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅನಂತು ಒಬ್ಬ ಕನಸುಗಾರ , ಕ್ರಿಯಾಶೀಲ ಮಲೆನಾಡಿನ ಸಾಂಸ್ಕೃತಿಕ ವಲಯದ ಒಬ್ಬ ವಕ್ತಾರ ರಾಗ ದ್ವೇಷವಿಲ್ಲದ ಮಗುವಿನಂಥ ಮನಸ್ಸು , …

1 min read

ಅನಂತು…….
ಕನಸುಗಾರನ ಕಣ್ಣಲ್ಲಿ ನೂರಾರು ಕನಸುಗಳು ಆ ಕನಸುಗಳನ್ನು ನನಸು ಮಾಡುವ ಹಂಬಲದೊಂದಿಗೆ ತನ್ನ ಬದುಕಿನ ಅಂತಿಮ ಕ್ಷಣದಲ್ಲಿ ಪೀಳಿಕಿಸುತಿದ್ದ ಕಣ್ಣು, ಬದುಕುವ ಹಂಬಲದಲ್ಲಿ ಕೊನೆಯ ಗಳಿಗೆ ಉಸಿರು ತೆಗೆದುಕೊಳ್ಳುತ್ತಿದ್ದ ಅನಂತು ಇಂತಹ ಸ್ಥಿತಿಯಲ್ಲಿ ಆಸ್ಪತ್ರೆಯ ಐ.ಸಿ.ಯುನಲ್ಲಿ ಮಲಗಿದ್ದ ತಮ್ಮನಂತ ಗೆಳೆಯ ಅನಂತು ಇಂದು ಇಲ್ಲವಾಗಿದ್ದಾನೆ. ನಿನ್ನೆ ರಾತ್ರಿ 11 ರ ಸುಮಾರಿಗೆ ಆತನ ಸ್ಥಿತಿ ಕಂಡು ಏನು ಮಾಡಲಾಗದ ಅಸಹಾಯಕ ಸ್ಥಿತಿ ಯಾರಿಗೂ ಬರಬಾರದು . ಎಂದಿಗೂ ನಗುನಗುತ್ತಾ ಅಣ್ಣ ಎಂದೆ ಕರೆಯುತ್ತಿದ್ದ ತಮ್ಮನ ಬದುಕು ಮುಗಿದು ಹೋಯಿತಲ್ಲ ಎಂಬ ಸಂಕಟ ನನ್ನ ಪಾಲಿಗೆ ಬಂದಿತ್ತು….
ಅನಂತು ಒಬ್ಬ ಕನಸುಗಾರ , ಕ್ರಿಯಾಶೀಲ ಮಲೆನಾಡಿನ ಸಾಂಸ್ಕೃತಿಕ ವಲಯದ ಒಬ್ಬ ವಕ್ತಾರ ರಾಗ ದ್ವೇಷವಿಲ್ಲದ ಮಗುವಿನಂಥ ಮನಸ್ಸು , ದಮನಿತ ಸಮುದಾಯದ ನೋವನ್ನು ಕಂಡು ಸದಾ ಮಿಡಿಯುವ ಮನ. ನನ್ನ ಮತ್ತು ಅನಂತು ಸ್ನೇಹ ನಾಲ್ಕು ದಶಕಕ್ಕೂ ಹೆಚ್ಚಿನದು. ಬಹುತೇಕ ಆತನ ಯೌವ್ವನದ ದಿನಗಳಲ್ಲಿ ನಾವಿಬ್ಬರು ಹೆಚ್ಚು ಒಡನಾಡಿಗಳಾಗಿದ್ದು ನಮ್ಮ ಚಿಂತನೆಗಳಲ್ಲಿ ಸಮಾನತೆ ಇದ್ದುದರಿಂದ ಅದನ್ನು ಹಂಚಿಕೊಂಡು ಸಮಸಮಾಜದ ಕನಸನ್ನು ಕಾಣುತ್ತಿದ್ದವರು,ಮುಂದೆ ರಾಜಕೀಯ ಕಾರಣಕ್ಕಾಗಿ ನಾವಿಬ್ಬರು ಬೇರೆ ಬೇರೆ ದಾರಿ ಹಿಡಿದರೂ ನಮ್ಮ ನಡುವಿನ ಸ್ನೇಹ ಎಂದಿಗೂ ಮಾಸಿರಲಿಲ್ಲ. ಮುಂದೆಯೂ ಮಾಸುವುದಿಲ್ಲ ತಮ್ಮನಂತ ಗೆಳೆಯ ಇನ್ನಿಲ್ಲ ಎಂಬುದನ್ನು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ.

ತಮ್ಮ ಅತ್ತೆ ರಾಜಕೀಯವಾಗಿ ಬಹುದೊಡ್ಡ ನಾಯಕರಾಗಿದ್ದರು ಅವನೆಂದು ಈ ರಾಜಕೀಯ ಅಧಿಕಾರವನ್ನು ಅಹಂ ಆಗಿಸಿಕೊಳ್ಳಲಿಲ್ಲ ಬದಲಿಗೆ ತನ್ನ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ಬಡವರಿಗೆ ನೆರವು ನೀಡಲು ಅತ್ತೆಯ ಅಧಿಕಾರ ಬಳಸಿಕೊಂಡಿದ್ದು ಸತ್ಯ. ಆರಂಭದಲ್ಲಿ ರಾಜಕಾರಣಿಯಾಗುವ ಯಾವ ಹಂಬಲವೂ ಇಲ್ಲದ ಅನಂತು ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಹಾಸನದ ಮಲೆನಾಡು ಇಂಜಿನಿಯರಿಂಗ್ ಕಾಲೇಜ್ ಸೇರಿದ್ದು ನನಗೆ ಇನ್ನು ನೆನಪಿದೆ ಆಗಾಗ ಅಲ್ಲಿಗೆ ಹೋಗಿ ಆತನನ್ನು ಭೇಟಿ ಮಾಡಿ ಹಲವು ವಿಷಯಗಳನ್ನ ಚರ್ಚಿಸಿ ಬರುತ್ತಿದ್ದೆ. ಇದಕ್ಕೂ ಮೊದಲು ಆತನ ಒಳಗೆ ಒಬ್ಬ ಅದ್ಭುತ ಕಲಾವಿದನಿದ್ದ ಸಂಗೀತಗಾರನಿದ್ದ ಸ್ವತಃ ಹಾಡುಗಳನ್ನು ರಚಿಸಿ ರಾಗ ಸಂಯೋಜನೆ ಮಾಡುತ್ತಿದ್ದ ಇಂತಹ ಗೆಳೆಯನೊಂದಿಗೆ ಸೇರಿ ಮಲೆನಾಡಿನಲ್ಲಿ ಮಲೆನಾಡಿನ ಜನರ ಸಾಂಸ್ಕೃತಿಕ ಬದುಕನ್ನು ನೂರು ವರ್ಷದ ಹಿಂದೆ ನಮ್ಮೂರು ಹೇಗಿತ್ತು ಎಂಬ ಪರಿಕಲ್ಪನೆ ಯೊಂದಿಗೆ ಅದನ್ನು ರಂಗದ ಮೇಲೆ ತರುವ ಉದ್ದೇಶದಿಂದ #ಆದಿದಿನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು ಹಿರಿಯರಾದ ಮೋಟಮ್ಮನವರು ಇದಕ್ಕೆ ಒತ್ತಾಸೆಯಾಗಿದ್ದರು ಇದೊಂದು ಕಲ್ಪನಾ ಲೋಕದ ಕಾರ್ಯಕ್ರಮ. ಈ ಕಲ್ಪನೆಗಳನ್ನು ನಿಜ ರೂಪಕದಲ್ಲಿ ತರಬೇಕು ಎಂದು ನಾವಿಬ್ಬರು ಮಲೆನಾಡಿನ ಎಲ್ಲಾ ಹಳ್ಳಿಗಳು, ದಲಿತ ಕಾಲೋನಿಗಳಿಗೆ ಭೇಟಿ ನೀಡಿ ನಶಿಸಿ ಹೋಗುತ್ತಿದ್ದ ಮಲೆನಾಡಿನ ಹಾಡುಗಳನ್ನು ವಾದ್ಯಗಳನ್ನು ಹಾಡುಗಾರರನ್ನು ವಾದ್ಯ ನುಡಿಸುವವರನ್ನು ಭೇಟಿ ಮಾಡಿ ಅವರಿಂದ ಬಾಯಿಂದ ಬಾಯಿಗೆ ಪಸರಿಸುತ್ತಿದ್ದ ಜಾನಪದ ಸಾಹಿತ್ಯವನ್ನು ಸಂಗ್ರಹಿಸಿ, ಅವರನ್ನೆಲ್ಲ ಮೂಡಿಗೆರೆಯ ಅಡ್ಯಾ oತಾಯ ರಂಗಮಂದಿರದ ಆವರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೆವು.ಈ ಕಾರ್ಯಕ್ರಮದಲ್ಲಿ ಹಲವು ಸಾಂಸ್ಕೃತಿಕ ಮನಸ್ಸಗಳು ಒಟ್ಟುಗೂಡಿದ್ದೆವು ಇದೊಂದು ಐತಿಹಾಸಿಕ ಮರೆಯಲಾರದ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಮಲೆನಾಡಿನ ಊಟ, ತಿನಿಸು, ದಿರಿಸು ಹಾಡು,,ವಾದ್ಯ,, ಮಲೆನಾಡಿನ ವಿಶಿಷ್ಟ ವಿಭಿನ್ನ ಅದ್ಭುತ ನಿಶಾನಿಕಲೆ ಎಲ್ಲವೂ ಮಿಳಿತವಾಗಿದ್ದವು ಅಂದು ಅವನು ಪುಟ್ಟ ಮೋಟು ಪಂಚೆ,, ಕರಿಕೋಟು ತಲೆಯ ಮೇಲಿನ ಟೋಪಿ ಸೊಂಟದಲ್ಲಿ ಎಲ್ಲಡಿಕೆಯ ಪುಟ್ಟ ಚೀಲ ಹಿಡಿದುಕೊಂಡು ಓಡಾಡುತ್ತಿದ್ದ ಅನಂತು ಇಂದಿಗೂ ಮರೆಯಲಾರೆ. ಈ ಕಾರ್ಯಕ್ರಮ ರೂಪಿಸುವಲ್ಲಿ ಅನಂತು ಅಣ್ಣ ಆನಂದನ ಪಾತ್ರವು ಮರೆಯಲಾರೆ ಹೀಗೆ ಮಲೆನಾಡಿನ ಮರೆತು ಹೋದ ಪರಂಪರೆಯನ್ನು ನೆನಪಿಸುತ್ತ ಮಲೆನಾಡಿನ ಜನರ ಹೊಸ ಬದುಕನ್ನು ಕಟ್ಟುವ ಕನಸು ಆತನ ಅದಮ್ಯ ಕನಸಾಗಿತ್ತು
ಆತನ ಮದುವೆಯು ಕೂಡ ಸಮಾಜಕ್ಕೆ ಒಂದು ಆದರ್ಶವೇ ಯಾವುದೇ ವರದಕ್ಷಿಣೆ ವರೋಪಚಾರವಿಲ್ಲದ ಮಲೆನಾಡಿನ ಬಡ ಕುಟುಂಬದ ಹೆಣ್ಣನ್ನು ಮದುವೆಯಾಗಿ ಆದರ್ಶವನ್ನು ಮೆರೆದವನು. ನನ್ನ ಮದುವೆಯ ಪುರೋಹಿತ್ಯ ವಹಿಸಿದವನು ಕೂಡ ಅನಂತುವೆ.

ಮೂಡಿಗೆರೆಗೆ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಅತ್ತೆ ಮೋಟಮ್ಮನವರು ಕಮ್ಯುನಿಸ್ಟ್ ಪಾರ್ಟಿಯಿಂದ ನಾನು ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಕೂಡ ರಾಜಕಾರಣಕ್ಕೂ ವೈಯಕ್ತಿಕ ಸಂಬಂಧಕ್ಕೂ ಯಾವುದೇ ಲೋಪ ಬರದಂತೆ ಇದ್ದಂತ ಗೆಳೆಯರು ನಾವು. ಅನಂತು ಬಗ್ಗೆ ಬರೆಯಲು ಸಾಕಷ್ಟಿದೆ ಆದರೆ ಇಂದು ಸಾಧ್ಯವಾಗುತ್ತಿಲ್ಲ ಅನಂತು ಹೆಸರನ್ನು ಶಾಶ್ವತವಾಗಿ ಉಳಿಸಲು,ಆತನ ಕನಸುಗಳನ್ನು ನನಸು ಮಾಡಲು ಸಾಧ್ಯವಾದರೆ ಆತನ ಎಲ್ಲ ಗೆಳೆಯರು ಆತನ ನೆನಪಿನಲ್ಲಿ ಸಮಾಜಮುಖಿಯಾದ ಕಾರ್ಯಕ್ರಮ ಹಮ್ಮಿಕೊಳ್ಳಲು ನಾವೆಲ್ಲರೂ ಮುಂದಾಗಬಹುದೇ ಎಂದು ಯೋಚಿಸುತ್ತಿದ್ದೇನೆ. ಅನಂತು ವಿಶ್ವದಲ್ಲಿ ಲೀನವಾಗಿದ್ದಾನೆ ಅನಂತು ನೆನಪು ಅಮರವಾಗಿರುತ್ತದೆ ಅವನ ಕನಸಿಗೆ ನಾವೆಲ್ಲರೂ ಮಿಡಿಯಲು ಸಾಧ್ಯವೇ *ಯೋಚಿಸಿ.

ಸಾತಿ ಸುಂದರೇಶ್* .

About Author

Leave a Reply

Your email address will not be published. Required fields are marked *

You may have missed