लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
03/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮತಪಟ್ಟಿ ಪರಿಷ್ಕರಣೆ: ಗುಡ್ಡ ಅಗೆದು ಇಲಿ ಹಿಡಿದ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ…..

1 min read

ಮತಪಟ್ಟಿ ಪರಿಷ್ಕರಣೆ:
ಗುಡ್ಡ ಅಗೆದು ಇಲಿ ಹಿಡಿದ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ

ಅವಿನ್ ಟಿವಿ ಸುದ್ದಿಜಾಲ ಮೂಡಿಗೆರೆ
ಮತಪಟ್ಟಿ ಪರಿಷ್ಕರಣೆ ನೆಪದಲ್ಲಿ ನೈಜ ಮತದಾರರನ್ನು ಕೈಬಿಡಲು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ರೂಪಿಸಿರುವ ಷಡ್ಯಂತ್ರದ ಭಾಗವಾಗಿದೆ. ಇದರಲ್ಲಿ ಗುಡ್ಡವನ್ನು ಅಗೆದು ಇಲಿ ಹಿಡಿದಂತಾಗಿದೆ. ಈ ಪ್ರಕ್ರಿಯೆಯಿಂದ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ದೇಶದ ಜನರ ಮುಂದೆ ಮುಖಭಂಗಕ್ಕೊಳಗಾಗಬೇಕಾಯಿತು ಎಂದು ಬಣಕಲ್ ಮಿಲಾದ್ ಟ್ರಸ್ಟ್ ಅಧ್ಯಕ್ಷ ಜಾಕೀರ್ ಹುಸೇನ್ ಟೀಕಿಸಿದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ಮುಸ್ಲಿಮರನ್ನು ಮತಪಟ್ಟಿಯಿಂದ ಕೈಬಿಡುವಂತೆ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಫಾರಂ 7 ರಲ್ಲಿ ಅರ್ಜಿ ಸುಳ್ಳು ಅರ್ಜಿ ಸಲ್ಲಿಸಿದ್ದಾರೆ. ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿ, ಮಂಗಳವಾರ ತಾಲೂಕು ಕಚೇರಿ ಆವರಣದಲ್ಲಿ ಬಣಕಲ್ ಮೀಲಾದ್ ಟ್ರಸ್ಟ್ ನಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನುಸುಳುಕೋರರನ್ನು ಪತ್ತೆ ಹಚ್ಚುವ ಸಲುವಾಗಿ ಎಸ್ಐಆರ್ ಪ್ರಕ್ರಿಯೆ ನಡೆಸಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ. ಕರ್ನಾಟಕದಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ತಲಾ ಒಬ್ಬೊಬ್ಬ ಮಹಿಳಾ ಪ್ರಜೆಯನ್ನು ಮಾತ್ರ ಪತ್ತೆಹಚ್ಚಲು ಸಾಧ್ಯವಾಗಿದೆ. ಆ ಇಬ್ಬರು ಮಹಿಳೆಯರು ಇಲ್ಲಿಗೆ ಮದುವೆಯಾಗಿ ಬಂದವರೆಂದು ಸರ್ಕಾರ ನಡೆಸಿದ ತನಿಖೆಯಿಂದ ಸಾಬೀತಾಗಿದೆ. ಎಸ್ಐಆರ್ ಪ್ರಕ್ರಿಯೆ ವೇಳೆ ರಾಜ್ಯದ 99.25 ಲಕ್ಷ ಮಂದಿ ನೈಜ ಮತದಾರರನ್ನು ಮತಪಟ್ಟಿಯಿಂದ ಕೈ ಬಿಡಲಾಗಿದೆ. ಮೂಡಿಗೆರೆ ತಾಲೂಕಿನಲ್ಲಿ 13,872 ಮಂದಿ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಲಾಗಿದೆ. ಈ ಪ್ರಕ್ರಿಯೆಗೆ ರಾಜ್ಯದಲ್ಲಿ 10 ಕೋಟಿ ರೂ. ಸರ್ಕಾರದ ಬೊಕ್ಕಸದಿಂದ ವೆಚ್ಚ ಮಾಡಲಾಗಿದೆ. ಕಳೆದಬಾರಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ನಡೆದ ಮತದಾನ ಎಸ್ಐಆರ್ ಪ್ರಕ್ರಿಯೆಯಲ್ಲಿ ನಕಲಿ ಮತಗಳು ಚಲಾವಣೆಯಾಗಿದೆ ಎಂದು ಕಂಡು ಬಂದಿದ್ದರೆ ಚುನಾವಣೆಯಲ್ಲಿ ಗೆದ್ದಿರುವ ಸಂಸದರು ಮತ್ತು ಶಾಸಕರನ್ನು ಕೇಂದ್ರ ಸರ್ಕಾರ ತಾಕತ್ತಿದ್ದರೆ ಹುದ್ದೆಯಿಂದ ವಜಾಗೊಳಿಸಲಿ ಎಂದು ಸವಾಲು ಹಾಕಿದರು.
ಮೀಲಾದ್ ಟ್ರಸ್ಟ್ ಮುಖಂಡ ಗೌಸ್ ಮೊಹಿಯುದ್ದೀನ್ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಮುದಾಯವಾದ ಮುಸ್ಲಿಂ ಸಮುದಾಯದವರನ್ನು ಫಾರಂ ನಂಬರ್ 7 ರಲ್ಲಿ ಸುಳ್ಳು ಅರ್ಜಿ ನೀಡಿ ಮತಪಟ್ಟಿಯಿಂದ ವಜಾಗೊಳಿಸಲು ಕೆಲವರು ಸಂಚು ರೂಪಿಸಿದ್ದಾರೆ. ಇಂತಹ ಸಂಚುಕೋರರನ್ನು ಸರ್ಕಾರ ಪತ್ತೆಹಚ್ಚಿ ಮಟ್ಟ ಹಾಕಬೇಕು. ಮುಸ್ಲಿಮರ ಮೇಲೆ ದೇಶದಲ್ಲಿ ನಿರಂತರ ದಾಳಿ ನಡೆಯುತ್ತಿದೆ. ಎಫ್ಐಆರ್ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮುಸ್ಲಿಮರ ವಿರುದ್ಧ ದುರುದ್ದೇಶದಿಂದ ರೂಪಿಸಿದೆ. ದೇಶದ ಮುಖ್ಯ ಚುನಾವಣಾ ಆಯುಕ್ತರು ಕೂಡ ಕೇಂದ್ರದ ಷಡ್ಯಂತರದಲ್ಲಿ ಭಾಗಿಯಾಗಿದ್ದಾರೆ. ಸುಳ್ಳು ಅರ್ಜಿ ನೀಡಿದವರ ವಿರುದ್ಧ ಕಠಿಣಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಪ್ರಿಯಾಂಕ ಖರ್ಗೆ ಭರವಸೆ ನೀಡಿದ್ದರು. ಸುಳ್ಳು ಅರ್ಜಿ ನೀಡಿದವರ ವಿರುದ್ಧ ಇದುವರೆಗೂ ಕ್ರಮ ಕೈಗೊಂಡಿಲ್ಲ. ಮುಸ್ಲಿಮರು ಸುಳ್ಳು ಅರ್ಜಿ ನೀಡಿದ್ದರೆ ಇಷ್ಟರಲ್ಲೆ ಪ್ರಕರಣ ದಾಖಲಿಸಿ, ಸಾಮೂಹಿಕವಾಗಿ ಬಂಧಿಸಲಾಗುತ್ತಿತ್ತು. ಮುಸ್ಲಿಮರ ವಿರುದ್ಧ ನಿರಂತರವಾಗಿ ದಾಳಿ ನಡೆಸುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ತಹಸೀಲ್ದಾರ್ ಎಸ್.ಅಶ್ವಿನಿ ಅವರ ಮೂಲಕ ಗೃಹಸಚಿವ ಪ್ರಿಯಾಂಕ ಖರ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಹಸನ್ ಹಾಜಿ, ಪಾರೂಕ್, ಹಂಝ, ನಜೀರ್, ಪಿಕೆ.ಹನೀಫ್, ಮುಂತು, ಜಾಕಿರ್ ಅಲಿ ಖಾನ್, ಸಂಶುದ್ದೀನ್, ಅಕ್ಬರಲಿ, ಅಜೀಜ್, ಸಿದ್ದೀಕ್, ಶಬ್ಬೀರ್ ಅಹಮದ್ ಹೊರಟಿ, ಅಬ್ದುಲ್ ಬಾಬಾ, ಮುನಫ್ ಸಾಬ್, ಅನೀಸ್, ಕರೀಂ, ಸಿದ್ದೀಕ್ ಕೊಟ್ಟಿಗೆಹಾರ, ಮಹಮ್ಮದ್ ಹನೀಫ್ ಹೈದ್ರೋಸ್, ಕೆ.ಪಿ.ಖಾಲಿದ್, ಎಂ.ಯು.ಶರೀಫ್ ಇತರರಿದ್ದರು.
3 ಎಂಡಿಜಿ 1 ಮೂಡಿಗೆರೆ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಸಿಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಲಾಯಿತು. ಜಾಕಿರ್ ಹುಸೇನ್, ಹಸನ್ ಹಾಜಿ, ಗೌಸ್ ಮೊಹಿಯುದ್ದೀನ್, ಫಾರೂಕ್, ಹಂಝ, ನಜೀರ್, ಕರೀಂ, ಮುಂತು, ಜಾಕಿರ್ ಅಲಿ ಖಾನ್, ಸಿದ್ದೀಕ್, ಅಜೀಜ್, ಅನೀಸ್ ಇತರರಿದ್ದರು.

About Author

More Stories

Leave a Reply

Your email address will not be published. Required fields are marked *

You may have missed