ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಯಲ್ಲಿ ಮೂಡಿಗೆರೆ ತಂಡಕ್ಕೆ ಪ್ರಥಮ ಸ್ಥಾನ….
1 min read
ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಯಲ್ಲಿ ಮೂಡಿಗೆರೆ ತಂಡಕ್ಕೆ ಪ್ರಥಮ ಸ್ಥಾನ
ಮೈಸೂರು: ಶ್ರೀ ಚಾಮುಂಡೇಶ್ವರಿ ಸ್ಪೋರ್ಟ್ಸ್ ಕ್ಲಬ್ (ರಿ.), ಮೈಸೂರು ಇವರ ವತಿಯಿಂದ ಆಯೋಜಿಸಲಾಗಿದ್ದ 6ನೇ ವರ್ಷದ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಯಲ್ಲಿ, 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ನಮ್ಮೂರಿನ ಮೂಡಿಗೆರೆ ಯಂಗ್ ಪಯೋನಿಯರ್ಸ್ ಮಲ್ನಾಡ್ (Mudigere Young Pioneers Malnad) ತಂಡವು ಪ್ರಥಮ ಸ್ಥಾನವನ್ನು ಪಡೆದು ಗಮನಾರ್ಹ ಸಾಧನೆ ಮಾಡಿದೆ.
ಪಂದ್ಯಾವಳಿಯಲ್ಲಿ ಮೂಡಿಗೆರೆ ತಂಡದ ಬಾಲಕಿಯರು ಮೈಸೂರು ವುಮೆನ್ (Mysur Women) ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ತರಬೇತುದಾರರು
ಸುರೇಶ್ ಕೋರಿ
ಅವಿಷ್ಕಾರ್
ರಮ್ಯಾ — ದೈಹಿಕ ಶಿಕ್ಷಕರು
ವಿಜೇತ ತಂಡದ ಆಟಗಾರ್ತಿಯರು
ಸನ್ಮಿತಾ
ಜೀವಿತ
ನಿಖಿತಾ
ದೀಕ್ಷಾ
ಅಂಕಿತ
ಅನುಕ್ಷ
ಮೇಘನಾ
ರಂಜಿತ
ಚಿನ್ಮಯ್
ಖುಷಿ
ಪೂರ್ವಿಕ
ಸಾಧಿನಿ
ಪೂರ್ವಿ
ಈ ಸಾಧನೆಯ ಮೂಲಕ ತಂಡವು ಮೂಡಿಗೆರೆ ಹಾಗೂ ಮಲ್ನಾಡ್ ಭಾಗಕ್ಕೆ ಹೆಮ್ಮೆ ತಂದಿದೆ. ವಿಜೇತ ಆಟಗಾರ್ತಿಯರಿಗೆ ಮತ್ತು ತರಬೇತುದಾರರಿಗೆ ಕ್ರೀಡಾಭಿಮಾನಿಗಳು, ಪೋಷಕರು ಹಾಗೂ ಸ್ಥಳೀಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

