ಉಸ್ತುವಾರಿ ಸಚಿವರು ಕೇವಲ ಧ್ವಜಾರೋಹಣಕ್ಕೆ ಸೀಮಿತ : ರಾಮೇಗೌಡ
1 min read
ಉಸ್ತುವಾರಿ ಸಚಿವರು ಕೇವಲ
ಧ್ವಜಾರೋಹಣಕ್ಕೆ ಸೀಮಿತ : ರಾಮೇಗೌಡ
ಚಿಕ್ಕಮಗಳೂರು: ಪಂಪ್ಸೆಟ್ಗಳಿಗೆ ಸಮರ್ಪಕ ಎಳು ಗಂಟೆಗಳ ಕೃಷಿ ವಿದ್ಯುತ್ ನೀಡಬೇಕು ಹಾಗೂ ತಾಲೂಕಿನ ಅಂಬಳೆ ಹೋಬಳಿ ಕೆ.ಆರ್.ಪೇಟೆಗೆ ನಿರಂತರ ಜ್ಯೋತಿ ಯೋಜನೆಯ ಅನುಷ್ಠಾನ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷೀಯ ಮಂಡಳಿ ತಾಲ್ಲೂಕು ಸದಸ್ಯ ಡಿ.ರಾಮೇಗೌಡ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆಯಲ್ಲಿ ಮಾತನಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಧ್ವಜಾರೋ ಹಣಕೆ ಮಾತ್ರ ಸೀಮಿತವಾದಂತಿದೆ. ರೈತರ ನೆಲ, ಜಲ ಹಾಗೂ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಕೊಡದೇ ಮೂರ್ಖಪ್ರೇಕ್ಷಕರಾಗಿದ್ದಾರೆ ಎಂದು ದೂರಿದ್ದಾರೆ.
ಜಿಲ್ಲಾ ಸಚಿವರು ಪ್ರತಿ ಸ್ವಾತಂತ್ರ್ಯ ದಿನಾಚರಣೆ, ಗಣ-ರಾಜ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮಗಳಿಗೆ ಆಗಮಿಸಿ ಮನವಿಗಳನ್ನು ಸ್ವಿಕರಿಸುತ್ತಾರೆ. ಆದರೆ ಮನವಿಗಳ ಮೇಲೆ ಕ್ರಮವಿಲ್ಲ, ಅಧಿಕಾ-ರಿಗಳ ಸಭೆಯಿಲ್ಲ, ಸಮಸ್ಯೆಗಳ ಪರಿಹಾರಕ್ಕೆ ಕಾಲಮಿತಿಯಿಲ್ಲ. ಸಚಿವರಿಗೆ ಮನವಿ ಸಲ್ಲಿ ಸುವುದೇ ರೈತರ ಪಾಲಿಗೆ ಒಂದು ಔಪಚಾರಿಕತೆಯಾಗಿದೆಯೇ ಎಂಬ ಪ್ರಶ್ನೆ ಮೂಡಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಕಳೆದ 25 ವರ್ಷಗಳ ನೀರಾವರಿ ವೈಫಲ್ಯ, 10 ವರ್ಷಗಳ ನಿರಂತರ ಜ್ಯೋತಿ ಭರವಸೆ, ಕೃಷಿಗೆ ಸಮರ್ಪಕ ವಿದ್ಯುತ್ ಇಲ್ಲ, ಮನವಿಗಳಿಗೆ ಸ್ಪಂದನೆಯೂ ಇಲ್ಲ. ಕನ್ನಡ ನಾಡಿನ ನೆಲ, ಜಲ, ನುಡಿ ಮತ್ತು ಸಂಸ್ಕೃತಿಯ ರಕ್ಷಣೆಯಿಲ್ಲ. ಜಿಲ್ಲೆಯ ರೈತರ ಬದುಕಿನ ಮೂಲಭೂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹೋರಾಟವೇ ಒಂದು ದಾರಿ ಎಂದಿದ್ದಾರೆ.
ಅಂಬಳೆ ಹೋಬಳಿ, ಮಳಲೂರು ಹಾಗೂ ಕೆ ಆರ್ ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾವಣಿಗೆ ನಾಡಿನ ರೈತರ ಜೀವನಾಡಿಯಾಗಿದ್ದ ಅರಸನ ನಾಲೆಯೂ ಅವೈಜ್ಞಾನಿಕ ಕಾಮಗಾ-ರಿಗಳು ಹಾಗೂ ಹಾದಿಹಳ್ಳಿ ಭಾಗದ ರೈಲ್ವೆ ಕಾಮಗಾರಿಯಿಂದ ಅಡೆತಡೆ ಎದುರಿಸುತ್ತಿದೆ. ಸ್ವಾಭಾವಿಕ ನಾಲೆಯ ಹರಿವನ್ನು ಪುನಃಸ್ಥಾಪಿಸಿ ರೈತರ ಜಮೀನುಗಳಿಗೆ ನೀರು ತಲುಪಿಸುವ ಕೆಲಸವೂ ಆಗಿಲ್ಲ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಕೇವಲ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಆಚರಣೆಗೆ ಸೀಮಿತಗೊಳಿಸದೆ, ಕೃಷಿ ಪರಿಕರಗಳ ಸ್ತಬ್ಧಚಿತ್ರಗಳು ಹಾಗೂ ನೂರಾರು ರೈತರ ಭಾಗವಹಿಸುವಿಕೆಯೊಂದಿಗೆ ನೆಲ, ಜಲ, ನಾಡು, ನುಡಿ ಮತ್ತು ರೈತ ಸಂಸ್ಕೃತಿಯ ಅಭಿಮಾನದ ಸಂಕೇತವಾಗಿ ಆಚ-ರಿಸಲಿದ್ದೇವೆಂದಿದ್ದಾರೆ.
ಅಲ್ಲದೇ ಕಾಫಿ ಬೆಳೆಗಾರರ 10 ಹೆಚ್ ಪಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನಿರ್ಧಾರದ ಜಾರಿ ಮಾಡಬೇಕು, ಮಳಲೂರು ಏತ ನೀರಾವರಿ ಯೋಜನೆಯಿಂದ ತಕ್ಷಣ ಪ್ರಾಯೋಗಿಕ ನೀರು ಹರಿಸಬೇಕು ಬೆಳೆಗಳನ್ನು ಉಳಿಸಬೇಕು, ಅರಸನ ನಾಲೆಯ ಪುನಃಸ್ಥಾಪನೆ ಮಾಡಬೇಕು ಬೆಳೆಗಳನ್ನು ಉಳಿಸುವುದು, ಬರ ಪರಿಹಾರವನ್ನು ಸಣ್ಣ ಮತ್ತು ದೊಡ್ಡ ರೈತ ಎಂಬ ತಾರತಮ್ಯ ಇಲ್ಲದೆ ಎಲ್ಲಾ ರೈತರಿಗೂ “ರೈತರಿಗೂ ಎಕರೆವಾರು ಪಾವತಿಸಬೇಕು, ಬರಗಾಲದಿಂದ ತತ್ತರಿಸಿರುವ ರೈತರ ಬೆಳೆ ಸಾಲ ತಕ್ಷಣ ಮನ್ನಾ ಮಾಡಬೇಕು ಸೇರಿ ದಂತೆ ಕೃಷಿಕರ ವಿವಿಧ ಬೇಡಿಕೆಗಳನ್ನು ಪೂರೈಸಬೇಕು ಎಂದು ಒತ್ತಾಯಿಸಿದ್ದಾರೆ.

