लाइव कैलेंडर

October 2026
M T W T F S S
 1234
567891011
12131415161718
19202122232425
262728293031  
31/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಭಾರತೀಯ ಕಾಫಿ ಮಂಡಳಿಗೆ ಹೊಸ ರೂಪ ನೀಡಿದ್ದಲ್ಲದೆ ಕಾಫಿ ಬೆಳೆಗಾರರ ಬೆನ್ನಿಗೆ ನಿಂತ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರ ಅಧಿಕಾರವಧಿ ನವೆಂಬರ್ ಗೆ ಮುಗಿಯಲಿದ್ದು, ಮುಂದಿನ ಅವಧಿಗೂ ದಿನೇಶ್ ಅವರನ್ನೇ ಮುಂದುವರಿಸಬೇಕು ಎಂದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಮುಖಂಡ ಹೊಲದಗದ್ದೆ ಗಿರೀಶ್ ಒತ್ತಾಯಿಸಿದ್ದಾರೆ…….

1 min read

ಎಂ.ಜೆ.ದಿನೇಶ್ ಅವರನ್ನೇ ಮುಂದುವರಿಸಿ
ಚಿಕ್ಕಮಗಳೂರು: ಭಾರತೀಯ ಕಾಫಿ ಮಂಡಳಿಗೆ ಹೊಸ ರೂಪ ನೀಡಿದ್ದಲ್ಲದೆ ಕಾಫಿ ಬೆಳೆಗಾರರ ಬೆನ್ನಿಗೆ ನಿಂತ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರ ಅಧಿಕಾರವಧಿ ನವೆಂಬರ್ ಗೆ ಮುಗಿಯಲಿದ್ದು, ಮುಂದಿನ ಅವಧಿಗೂ ದಿನೇಶ್ ಅವರನ್ನೇ ಮುಂದುವರಿಸಬೇಕು ಎಂದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಮುಖಂಡ ಹೊಲದಗದ್ದೆ ಗಿರೀಶ್ ಒತ್ತಾಯಿಸಿದ್ದಾರೆ.
ದಿನೇಶ್ ಅವರು ಕಾಫಿ ಮಂಡಳಿ ಅಧ್ಯಕ್ಷರಾದ ಬಳಿಕ ಕಾಫಿ ಉದ್ಯಮಕ್ಕೆ ಬಲ ತುಂಬುವ ಕೆಲಸ ಮಾಡಿದ್ದಾರೆ. ಇದಲ್ಲದೆ ಭಾರತೀಯ ಕಾಫಿಯನ್ನು ಬ್ರಾಂಡ್ ಮಾಡುವ ನಿಟ್ಟಿನಲ್ಲಿಯೂ ಕಾರ್ಯಪ್ರವೃತ್ತರಾಗಿದ್ದಾರೆ. ಜೊತೆಗೆ ಕಾಫಿ ಮಂಡಳಿಯಲ್ಲಿ 32ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಈ ಎಲ್ಲಾ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕು ಎಂದರೆ ದಿನೇಶ್ ಮತ್ತೊಂದು ಅವಧಿಗೆ ಅಧ್ಯಕ್ಷರಾಗಬೇಕು ಎಂದು ಹೇಳಿದ್ದಾರೆ.
ಕಾಫಿ ಬೆಳೆಯಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆ ಬಗ್ಗೆಯೂ ದಿನೇಶ್ ದೇವವೃಂದ ಅವರ ಅವಧಿಯಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಕಾಫಿ ಮಂಡಳಿಯ ವಿಜ್ಞಾನಿಗಳು ಸಹ ದಿನೇಶ್ ಅವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿನೇಶ್ ಅವರಿಗೆ ಇನ್ನೊಂದು ಅವಧಿಗೆ ಅಧ್ಯಕ್ಷ ಸ್ಥಾನ ಸಿಕ್ಕಲ್ಲಿ ಕಾಫಿ ಬೆಳೆಗಾರರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಕಾಫಿ ಇಳುವರಿ ಹೆಚ್ಚಳಕ್ಕೂ ದಿನೇಶ್ ದೇವವೃಂದ ಅವಧಿಯಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಇದಲ್ಲದೆ ನಾಗಾಲ್ಯಾಂಡ್, ಅಸ್ಸಾಂ, ಆಂಧ್ರ ಪ್ರದೇಶ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಪ್ರವಾಸ ಮಾಡಿ ಕಾಫಿ ಬೆಳೆಯ ಬಗ್ಗೆ ಅಲ್ಲಿನ ಸರ್ಕಾರಗಳ ಗಮನ ಸೆಳೆದಿದ್ದರಿಂದಾಗಿ ಅಲ್ಲಿನ ಸರ್ಕಾರಗಳು ಬೆಳೆಗಾರರಿಗೆ ಭೂಮಿ ನೀಡಿ ಕಾಫಿ ಬೆಳೆಯಲು ಉತ್ತೇಜನ‌ ನೀಡುತ್ತಿವೆ. ಹೀಗೆ ಕಾಫಿ ಉದ್ಯಮದಿಂದ ಹಿಡಿದು ಬೆಳೆಗಾರರಿಗೂ ಅನುಕೂಲ ಒದಗಿಸುತ್ತಿದ್ದಾರೆ. ಇದಲ್ಲದೆ ರಾಜ್ಯ ಸೇರಿದಂತೆ ಕೇಂದ್ರ ಸಚಿವರನ್ನು ನೇರವಾಗಿ ಭೇಟಿ ಮಾಡಿ ಕಾಫಿ ಉದ್ಯಮದ ಉನ್ನತಿಗೆ ಶ್ರಮಿಸುತ್ತಿರುವ ದಿನೇಶ್ ದೇವವೃಂದ ಅವರನ್ನು ಇನ್ನೊಂದು ಅವಧಿಗೆ ಅಧ್ಯಕ್ಷರನ್ನಾಗಿ ಕೇಂದ್ರ ಸರ್ಕಾರ ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.

About Author

More Stories

1 min read

🏡 ಮಾಕೋಡು ಗ್ರಾಮಸ್ಥರ ಒಕ್ಕೂಟ ಮಾಕೋಡು ಗ್ರಾಮ, ಚಿಕ್ಕಮಗಳೂರು ಜಿಲ್ಲೆ ಒಗ್ಗಟ್ಟೇ ನಮ್ಮ ಶಕ್ತಿ – ಗ್ರಾಮಾಭಿವೃದ್ಧಿಯೇ ನಮ್ಮ ಗುರಿ ವಿಷಯ: ಗ್ರಾಮಸ್ಥರ ಸ್ವಂತ ಹಣದಲ್ಲಿ ರಸ್ತೆ ಕಾಮಗಾರಿ – ಜನಪ್ರತಿನಿಧಿಗಳಿಗೆ ಒಂದು ನೇರ ಸಂದೇಶ. ಜನಪ್ರತಿನಿಧಿಗಳಿಗೆ ಗ್ರಾಮಸ್ಥರ ನೇರ ಪ್ರಶ್ನೆ! ನಮ್ಮ ಮಾಕೋಡು ಊರಿನ ರಸ್ತೆ ಅಭಿವೃದ್ಧಿಗೆ ನಾವೇ ಹಣ ಹಾಕಬೇಕಾದ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ! ಊರಿನ ಅಭಿವೃದ್ಧಿ ಮಾಡುವುದು ಜನಪ್ರತಿನಿಧಿಗಳ ಜವಾಬ್ದಾರಿಯೇ ಹೊರತು, ಗ್ರಾಮಸ್ಥರ ಮೇಲೆ ಹೊರೆಯಾಗಬೇಕಾದ ಕೆಲಸವಲ್ಲ. ಆದರೆ ಇಂದು ನಮ್ಮ ಊರಿನ ಗ್ರಾಮಸ್ಥರು ರಾಜಕಾರಣಿಗಳ ಸಹಾಯಕ್ಕಾಗಿ ಕಾಯದೆ, ತಮ್ಮ ಸ್ವಂತ ಕಷ್ಟದ ದುಡಿಮೆಯ ಹಣವನ್ನು ಒಟ್ಟುಗೂಡಿಸಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ. ಇದು ಕೇವಲ ರಸ್ತೆ ನಿರ್ಮಾಣವಲ್ಲ; ನಮ್ಮ ಊರಿನ ಜನರ ಒಗ್ಗಟ್ಟು, ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಸಂಕೇತವಾಗಿದೆ. ಚುನಾವಣೆಯ ಸಮಯದಲ್ಲಿ ಊರಿನ ಅಭಿವೃದ್ಧಿಯ ಬಗ್ಗೆ ದೊಡ್ಡ ದೊಡ್ಡ ಭರವಸೆಗಳನ್ನು ನೀಡುವವರು, ಇಂದು ಗ್ರಾಮಸ್ಥರು ತಮ್ಮ ಹಣದಿಂದ ರಸ್ತೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಾಗ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಮ್ಮ ಪ್ರಶ್ನೆ ಇಷ್ಟೇ: 1. ಜನಪ್ರತಿನಿಧಿಗಳಿದ್ದರೂ ಗ್ರಾಮಸ್ಥರು ತಮ್ಮ ಹಣದಲ್ಲಿ ರಸ್ತೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಏಕೆ? 2. ಅಭಿವೃದ್ಧಿಗಾಗಿ ಮೀಸಲಾದ ಅನುದಾನಗಳು ಗ್ರಾಮಗಳಿಗೆ ತಲುಪುತ್ತಿವೆಯೇ? 3. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಕೇವಲ ಚುನಾವಣೆಯ ಸಮಯದಲ್ಲಿ ಮಾತ್ರವೇ? ನಾವು ಯಾರನ್ನೂ ಟೀಕಿಸುವ ಉದ್ದೇಶ ಹೊಂದಿಲ್ಲ. ಆದರೆ ನಮ್ಮ ಊರಿನ ಅಭಿವೃದ್ಧಿ ನಮ್ಮ ಹಕ್ಕು ಎಂಬುದನ್ನು ನೆನಪಿಸಲು ಬಯಸುತ್ತೇವೆ. ರಾಜಕಾರಣಿಗಳೇ, ನೆನಪಿರಲಿ… ನಮಗೆ ಬೇಕಿರುವುದು ಕೇವಲ ಚುನಾವಣೆಯ ಭರವಸೆಗಳಲ್ಲ; ನಮ್ಮ ಊರಿಗೆ ಉತ್ತಮ ರಸ್ತೆ, ಕುಡಿಯುವ ನೀರು, ವಿದ್ಯುತ್ ಮತ್ತು ಮೂಲಭೂತ ಸೌಕರ್ಯಗಳು. ಗ್ರಾಮಸ್ಥರ ಒಗ್ಗಟ್ಟಿಗೆ ನಮ್ಮ ಸಲಾಂ. ತಮ್ಮ ಊರಿನ ಅಭಿವೃದ್ಧಿಗಾಗಿ ಸ್ವಂತ ಹಣವನ್ನು ಖರ್ಚು ಮಾಡುತ್ತಿರುವ ಪ್ರತಿಯೊಬ್ಬ ಗ್ರಾಮಸ್ಥರಿಗೂ ಹೃತ್ಪೂರ್ವಕ ಅಭಿನಂದನೆಗಳು. ಊರಿನ ಅಭಿವೃದ್ಧಿ ನಮ್ಮ ಹಕ್ಕು, ಜನರ ಸೇವೆ ಜನಪ್ರತಿನಿಧಿಗಳ ಕರ್ತವ್ಯ! ಇಂತಿ, ಮಾಕೋಡು ಗ್ರಾಮ…..

Leave a Reply

Your email address will not be published. Required fields are marked *

You may have missed