लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
03/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸೇವಾ ಭಾರತಿ ಸಮಾಜ ಸೇವಾ ಸಂಘದ ವತಿಯಿಂದ ಭಾರತಿ ಬೈಲ್ ಸರ್ಕಲ್ ನಲ್ಲಿ 14 ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು….

1 min read

ಸೇವಾ ಭಾರತಿ ಸಮಾಜ ಸೇವಾ ಸಂಘದ ವತಿಯಿಂದ ಭಾರತಿ ಬೈಲ್ ಸರ್ಕಲ್ ನಲ್ಲಿ 14 ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಂಘದ ಅಧ್ಯಕ್ಷರಾದ ಸತೀಶ್ ಧ್ವಜಾರೋಹಣ ನೆರವೇರಿಸಿದರು. ಹೊಸಹಳ್ಳಿ ಕೃಷ್ಣೆ ಗೌಡ. ಕಾರ್ಯಕ್ರಮ ಉದ್ಘಾಟಿಸಿ ಕನ್ನಡ ಹಾಡು ಹಾಡಿ ಮಾತನಾಡಿದ ಅವರು ಕನ್ನಡ ಸೇವಾ ಭಾರತಿ ಸಂಘದ ಕಳೆದ 14 ವರ್ಷಗಳಿಂದ ಈ ಸರ್ಕಲ್ ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿಕೊಂಡು ಬರುತ್ತ ಇದೆ ಅದರ ಜೊತೆಗೆ ಸಮಾಜ ಸೇವೆ ಮಾಡಿಕೊಂಡು ಬರುತ್ತ ಇದೆ ಈ ಸೇವೆ ಸದಾ ಮುಂದುವರೆಯಲಿ ಎಂದರು. ಮಾಜಿ ಗ್ರಾಮ ಅಧ್ಯಕ್ಷ ಅಶ್ರೀತ್ ಮಾತನಾಡಿ ಈ ಸರ್ಕಲ್ ನಲ್ಲಿ ಈ ಸಂಘದ ವತಿಯಿಂದ ರಾಷ್ಟ್ರ ಕವಿ ಕುವೆಂಪು ಅವರ ಪುತ್ತಳಿ ಮಾಡಲು ನನ್ನ ಅವಧಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಮುಂದಿನ ದಿನಗಳಲ್ಲಿ ಪುತ್ತಳಿ ಮಾಡುವ ಕಾರ್ಯದಲ್ಲಿ ನನ್ನ ಸಂಪೂರ್ಣ ಸಹಕಾರವಿದೆ. ನಮ್ಮ ಗ್ರಾಮದಲ್ಲಿ ಕಸ್ತೂರಿ ಬಾ ಟ್ರಸ್ಟ್ ಇದೆ. ಕುವೆಂಪು ಅವರ ಪುತ್ತಳಿ ಅದರೆ ನಮ್ಮ ಗ್ರಾಮ ಪ್ರವಾಸಿ ತಾಣ ಆಗುತ್ತೆ ಎಂದು ಅಭಿಪ್ರಾಯಪಟ್ಟರು ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಲೋಕೇಶ್ ಬೆಟ್ಟಗೆರೆ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಈ ನಾಡು ನುಡಿ ಸಂಸ್ಕೃತಿಗೆ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದಿದೆ ಯಾವ ಭಾಷೆಗೂ 8 ಜ್ಞಾನ ಪೀಠ ಪ್ರಶಸ್ತಿ ಸಿಕ್ಕಿಲ್ಲ 8 ಜ್ಞಾನಪೀಠ ಪ್ರಶಸ್ತಿ ಬಂದಿರುವ ಏಕೈಕ ಭಾಷೆ ಕನ್ನಡ . ಕನ್ನಡ ಉಳಿಯಬೇಕಾದರೆ ದಿನ ನಿತ್ಯ ಬಳಕೆಯಲ್ಲಿ ಕನ್ನಡವನ್ನು ಬಳಸಬೇಕು. ಪೂರ್ಣ ಚಂದ್ರ ತೇಜಸ್ವಿ ಅವರು ಹೇಳುತ್ತಿದ್ದ ಮಾತು ನೆನಪಿಸಿಕೊಟ್ಟರು. ಕರ್ನಾಟಕ ಏಕೀಕರಣದ ಹೋರಾಟಗಾರರನ್ನು ಸ್ಮರಿಸಿದರು. ಬಣಕಲ್ ಹೋಬಳಿ ವ್ಯಾಪ್ತಿಯಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆದರೆ ಸೇವಾ ಭಾರತಿ ಸಮಾಜ ಸೇವಾ ಸಂಘ ಮುಂದೆ ಇರುತ್ತೆ ಇವರ ಕಾರ್ಯ ಶ್ಲಾಘನೀಯ ಎಂದರು. ಶಾಲಾ ಮಕ್ಕಳು ನಾಡಗೀತೆ ಹಾಡಿದರು ಈ ಕಾರ್ಯಕ್ರಮದಲ್ಲಿ ರಾಮಚಂದ್ರ ಕೋಶಾಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ. ರಂಜೀತ್ ಜೆ.ಸಿ.ಐ. ಬಣಕಲ್ ಅಧ್ಯಕ್ಷರು. ಶಿವಪ್ರಸಾದ್ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು. ಪ್ರವೀಣ್ ಬೆಳಗೂಡು.ಪ್ರಸನ್ನ ಹೊಸಳ್ಳಿ ಶಶಿಧರ ಹಳೆಹಳ್ಳಿ.
ಸಂಗಮ.ಪ್ರಜ್ವಲ್ ಶಿಕ್ಷಕಿ ಯರು. ಮುಂತಾದವರು ಇದ್ದರು ದಿಲೀಪ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

About Author

More Stories

Leave a Reply

Your email address will not be published. Required fields are marked *

You may have missed