लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
04/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಯಾರನ್ನೇ ಕೇಳಿ ನೋಡಿ ಅಯ್ಯೋ! ನನಗೆ ಟೈಮ್ ಇಲ್ಲ, ನಾನು ಬ್ಯುಸಿ ಅನ್ನುವವರೇ ಹೆಚ್ಚು. ಸಮಯದ ಮಹತ್ವ ಯಾರು ಅರಿತಿರುತ್ತಾರೋ ಅವರೆಲ್ಲ ಬ್ಯುಸಿಯಾಗಿ ಇರುತ್ತಾರೆ….

1 min read

‎ಇಂದು ನಾಳೆಯಾಗುವ ಮುನ್ನ
‎
‎ಯಾರನ್ನೇ ಕೇಳಿ ನೋಡಿ ಅಯ್ಯೋ! ನನಗೆ ಟೈಮ್ ಇಲ್ಲ, ನಾನು ಬ್ಯುಸಿ ಅನ್ನುವವರೇ ಹೆಚ್ಚು. ಸಮಯದ ಮಹತ್ವ ಯಾರು ಅರಿತಿರುತ್ತಾರೋ ಅವರೆಲ್ಲ ಬ್ಯುಸಿಯಾಗಿ ಇರುತ್ತಾರೆ.
‎
‎ಹಾಗಂದ ಮಾತ್ರಕ್ಕೆ ಯಾರೊಡನೆಯೂ ಬೆರೆಯದೆ ಆತ್ಮೀಯರೊಡನೆ ಸಮಯ ಕಳೆಯದಷ್ಟು ಕುಟುಂಬದವ-ರಿಗೆ ಸಮಯ ಕೊಡಲಾರದಷ್ಟು ಬ್ಯುಸಿ ಯಾವ ವ್ಯಕ್ತಿಯೂ ಇರಲಾರ.
‎
‎ಎಲ್ಲರೊಡನೆ ಬೆರೆತು ದೈನಂದಿನ ಜೀವನದ ಆಗುಹೋಗುಗಳೊಂದಿಗೆ ತನ್ನ ಸಮಯ ವಿನಿಯೋಗಿಸಿ ಉಳಿದ ಸಮಯ ಮಾಡುವ ಕಾಯಕಕ್ಕೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗಿರುತ್ತದೆ.
‎
‎ಯಾವಾಗಲೂ ನಾವು ಸಮಯಕ್ಕೆ ಅನುಗುಣವಾಗಿ ಕಾರ್ಯಗಳನ್ನು ಹೊಂದಿಸಿಕೊಂಡು ನಡೆದದ್ದೇ ಆದರೆ ಯಶಸ್ಸಿನ ದಾರಿ ಅದು ತಾನಾಗೆ ತೆರೆದುಕೊಳ್ಳಲಾರಂಭಿಸುತ್ತದೆ. ಅಂದಿನ ಕೆಲಸ ಆ ದಿನವೇ ಆ ಗಳಿಗೆಯೇ ಮಾಡುವುದರಿಂದ ಕೆಲಸವಾಗಲಿ, ಸಮಯವಾಗಲಿ, ವ್ಯರ್ಥವಾಗದೆ ಸದ್ವಿನಿಯೋಗವಾಗುತ್ತದೆ.ನಾಳೆ ಮಾಡಿದರಾಯ್ತು, ನಾಳೆ ಹೋದರಾಯಿತು, ಹೀಗೆ ನಾಳೆ-ನಾಳೆ ಎಂದು ಸಮಯವನ್ನು ಮುಂದಕ್ಕೆ ಹಾಕುವುದರಿಂದ ಸಮಯಕ್ಕೆ ಏನು ತೊಂದರೆ ಆಗುವುದಿಲ್ಲ. ಕಾರಣ ಸಮಯ ಎಲ್ಲಿಯೂ ನಿಲ್ಲದೆ ತನ್ನ ಕೆಲಸವನ್ನು ತಾನು ಮಾಡುತ್ತಲೇ ಇರುತ್ತದೆ. ಹಗಲನ್ನು ಹಗಲಾಗೆ ತೋರಿಸುತ್ತದೆ ಹಾಗೆ ಇರುಳನ್ನು ಇರುಳಾಗಿಯೇ ತೋರಿಸುತ್ತದೆ. ಕಾಲವೆಲ್ಲಾದರೂ ಮನುಷ್ಯನಂತೆ ಹೋದರಾಯಿತು, ಮಾಡಿದರಾಯಿತು ಎಂದು ತನ್ನ ಕರ್ತವ್ಯವನ್ನು ಮರೆತು ಕುಳಿತದ್ದೆ ಆದರೆ ಸೃಷ್ಟಿಯ ವ್ಯವಸ್ಥೆಯೇ ಅಲ್ಲೋಲಕಲ್ಲೋಲವಾಗಿ ಬಿಡುತ್ತದೆ. ಮನುಷ್ಯನೂ ಕೂಡ ಒಬ್ಬ ಪ್ರಾಣಿಯೇ ಎಂದು ಭಾವಿಸುವುದೇ ಆದ-‘ರೆ ಇಡೀ ಪ್ರಾಣಿ ಸಂಕುಲಗಳಲ್ಲಿ ಯೋಚನಾ ಶಕ್ತಿ, ವಿವೇಚನಾ ಶಕ್ತಿ ಇರುವ ಏಕೈಕ ಪ್ರಾಣಿ ಎಂದರೆ ಅದು ಮನುಷ್ಯ ಮಾತ್ರ ಉಪಯೋಗ ಏನು ಅನಿಸುತ್ತದೆ ಅಲ್ಲವೇ? ನೋಡಿ ಆಕಾಶದಲ್ಲಿ ಹಾರುವ ಪಕ್ಷಿಗಳಿಂದ ಎಷ್ಟು ಪಾಠ ಕಲಿಯಲು ಇದೆ ಅಂದರೆ ಬೆಳಗ್ಗೆ ಎಲ್ಲವೂ ಒಮ್ಮೆಲೆ ಎದ್ದು ಹೊರಟು ನಿತ್ಯದ ಕೆಲಸದಲ್ಲಿ ತೊಡಗಿ ಕೊಳ್ಳುತ್ತವೆ. ಸಂಜೆಯಾಗುತ್ತಲೇ ಒಟ್ಟೋಟ್ಟಿಗೆ ಬಾನಂಗಳದಲ್ಲಿ ಒಮ್ಮೆಲೇ ಹಾರುತ್ತಾ ತನ್ನ ಗೂಡನ್ನು ಸೇ-ರಿಕೊಳ್ಳುತ್ತವೆ. ಇನ್ನೊಂದು ಉದಾಹರಣೆಗೆ ಇರುವೆಗಳನ್ನು ಕಂಡಾಗ ಸಾಲಿನಲ್ಲಿ ಸಾಗುವುದು ಇವುಗಳಿಗೆ ಯಾರೂ ಕಲಿಸಿರೋದಿಲ್ಲ. ಮಳೆ ಆಗಮನದ ಸೂಚನೆ ದೊರಕಿತೆಂದರೆ
‎
‎ಇಂದು ನಾಳೆಯಾಗುವೆ ಮುನ್ನ.
‎ಸಾಕು, ಆಹಾರ ಸಂಗ್ರಹಣೆಯ ಕಾರ್ಯಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತವೆ. ಇದನ್ನೇ ಹೇಳಿದ್ದು ಸಮಯಕ್ಕೆ ಸರಿಯಾಗಿ, ಸಮಯದ ಜೊತೆ ಬದುಕುವುದು ಎಂದು.

ಪ್ರಪಂಚದಲ್ಲಿಯೇ ಅತಿ ಹೆಚ್ಚು ಶ್ರೀಮಂತನಾಗಿರಲಿ, ನಾನು ಈ ಪ್ರಪಂಚದ ದೊರೆ ಎಂಬ ಕಾರಣ ನೀಡಿ ಹೇ, ಸಮಯವೇ ಸ್ವಲ್ಪ ತಾಳು.ನಾನು ತಯಾರಾಗಿ ಬರುತ್ತೇನೆ. ನಿನಗೆ ಎಷ್ಟು ಹಣ, ಆಸ್ತಿ, ಶ್ರೀಮಂತಿಕೆ ಬೇಕು ಕೊಡುತ್ತೇನೆ.ಎಂದು ಹೇಳಿದಾಕ್ಷಣ ನಸುನಕ್ಕು ತನ್ನ ಕೆಲಸವನ್ನು ಮುಂದುವರಿಸುವುದೇ ವಿನಹ ಕ್ಷಣವೂ ಕೂಡ ಸಮಯ ಸ್ತಬ್ದವಾಗಿ ನಿಲ್ಲುವುದಿಲ್ಲ. ಪ್ರಕೃತಿಯಲ್ಲಿನ ಹವಾಮಾನಗಳು, ಋತುಗಳು ಕೂಡ ಕಾಲಕ್ಕೆ ಅನುಗುಣವಾಗಿಯೇ ನಡೆಯುತ್ತಿರುವಾಗ ಮನುಷ್ಯರು ಮಾತ್ರ ನಾಳೆ ನಾಡಿದ್ದು ಎಂದು ಮುಂದಾಗುವುದು ಮಾತ್ರ ವಿಪರ್ಯಾಸವೇ ಸರಿ. ಇಂದಿನ ಕೆಲಸವನ್ನು ಇವತ್ತೇ ಮಾಡಬೇಕು. ಇವತ್ತೇ ಎಂದರೆ ಆ ಘಳಿಗೆಯೇ ಮಾಡಿ ಮುಗಿಸಬೇಕು. “ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಎಂಬ ಮಾತಿನಂತೆ ಒಮ್ಮೆ ಸಮಯ ಮೀರಿ ಹೋದರೆ ಅದನ್ನು ನಾವು ಮತ್ತೊಮ್ಮೆ ಪಡೆಯಲು ಸಾಧ್ಯವಿಲ್ಲ ಬದಲಿಗೆ ಪಶ್ಚಾತಾಪ ಪಡುವುದು ಒಂದೇ ದಾರಿ ಆಗಿರುತ್ತದೆ. ಹಾಗಾಗಿ ಯಾರೇ ಆಗಲಿ ಸಮಯಕ್ಕೆ ಅನುಗುಣವಾಗಿ ತಮ್ಮ ಕಾರ್ಯಗಳಲ್ಲಿ ತತ್ಪರತೆ ಹೊಂದಿರಬೇಕಾಗುತ್ತದೆ. ಸಮಯದ ಮಹತ್ವ ತಿಳಿದ ಯಾವ ವ್ಯಕ್ತಿಯು ಜೀವನದಲ್ಲಿ ಸೋಲನ್ನು ಕಾಣುವುದಿಲ್ಲ. ವಿದ್ಯಾರ್ಥಿಗಳು ಕೂಡ ಅವರ ಕಲಿಕೆಯ ಪಯಣದಲ್ಲಿ ಅಂದಿನ ಪಾಠಗಳನ್ನು ಅಂದೆ ಓದಿಕೊಳ್ಳಬೇಕು. ಪ್ರಶೋತ್ತರಗಳನ್ನು ಅಂದೇ ಕಲಿಯಬೇಕು. ಇದರಿಂದ ಕಲಿಕೆಯಲ್ಲಿ ಪ್ರಗತಿ ಹೊಂದಿ ಉತ್ತಮ ಅಂಕಗಳು ಬರುತ್ತವೆ. ಜೊತೆಗೆ ತರಗತಿಯಲ್ಲಿ ಉತ್ತಮ ವಿದ್ಯಾರ್ಥಿ ಎಂಬ ಹೆಸರು ಗಳಿಸಲಾಗುತ್ತದೆ. ಹಾಗೆಯೇ ಮುಂದಿನ ತರಗತಿಗಳಿಗೆ ತೇರ್ಗಡೆ ಹೊಂದಲು ಉನ್ನತ ವಿದ್ಯಾಭ್ಯಾಸಕ್ಕೆ ಹೋಗಲು ಸಹಕಾ-ರಿಯಾಗುತ್ತದೆ. ಹಾಗಾಗಿ ಸಮಯವು ಯಾರಿಗೂ ಕಾಯುವುದಿಲ್ಲ. ಕಳೆದು ಹೋದ ವಸ್ತು ಆಗಲಿ, ಸಮಯವಾಗಲಿ ಎಂದಿಗೂ ವಾಪಸ್ ಬರುವುದಿಲ್ಲ. ಸಕಲ ಐಶ್ವರ್ಯಗಳನ್ನು ಕೊಟ್ಟರೂ ನಾವು ಕಳೆದುಕೊಂಡ ಒಂದು ಕ್ಷಣವನ್ನು ಮರಳಿ ಪಡೆಯಲಾರೆವು. ನಾವು ಸಮಯವನ್ನು ಸರಿಯಾಗಿ ಬಳಸಬೇಕು ಸಮಯ ನಮ್ಮನ್ನು ನಿಯಂತ್ರಿಸುವಂತೆ ಬಿಡಬಾರದು ಯಾವುದೇ ಕಾರಣ-ಕ್ಕೂ ನಾವು ಇಂದಿನ ಕೆಲಸವನ್ನು ನಾಳೆಗೆ ಮುಂದೂಡಬಾರದು ಏಕೆಂದರೆ ಸಮಯವೆ ಜೀವನ ಪ್ರತಿಯೊಬ್ಬರೂ ಸಮಯದ ಮಹತ್ವವನ್ನು ತಿಳಿದುಕೊಳ್ಳಬೇಕು.

‎ರೂಪಸುಧೀರ್.
‎ಶಿಕ್ಷಕರು ಚಿಕ್ಕಮಗಳೂರು

About Author

More Stories

Leave a Reply

Your email address will not be published. Required fields are marked *

You may have missed