ದ್ವಿತೀಯ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭಾಗ್ಯಲಕ್ಷ್ಮಣಗೌಡ ಆಯ್ಕೆ….
1 min read
ದ್ವಿತೀಯ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭಾಗ್ಯಲಕ್ಷ್ಮಣಗೌಡ ಆಯ್ಕೆ
ಚಿಕ್ಕಮಗಳೂರು: ಜಿಲ್ಲಾ ದ್ವಿತೀಯ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಸೆಪ್ಟೆಂಬರ್ 4 ರಂದು ಮೂಡಿಗೆರೆಯ ಜೆ.ಸಿ.ಭವನದಲ್ಲಿ ನಡೆಯಲಿದೆ ಈ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಭಾಗ್ಯಲಕ್ಷ್ಮಣಗೌಡ ಅವರು ಸಮ್ಮೇಳನ ಅಧ್ಯಕ್ಷರಾಗಿ ಸರ್ವಾನು ಮತದಿಂದ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಸಮ್ಮೇಳನ ಅಧ್ಯಕ್ಷರಾಗಿರುವ ಭಾಗ್ಯ ಲಕ್ಷ್ಮಣಗೌಡ ಇವರು ಹಲವು ಕವನಗಳನ್ನು ಮತ್ತು ಚುಟುಕುಗಳನ್ನು ರಚಿಸಿದ್ದಾರೆ ಇವರ ತನುವಿನೊಳಗೊಬ್ಬಳು ಎನ್ನುವ ಕವನ ಸಂಕಲನ ಪ್ರಕಟಿತವಾಗಿದೆ ಹಲವು ಕವನಗಳು ಮುದ್ರಣದ ಅಚ್ಚಿನಲ್ಲಿದೆ. ಇವರು ಇನ್ನರ್ವಿಲ್ ಕ್ಲಬ್ ನ ಅಧ್ಯಕ್ಷರಾಗಿದ್ದು ಗೊಣೀಬೀಡು ಹೊಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರಿಗೆ ಸಾಹಿತ್ಯದ ಬಗ್ಗೆ ಅಪಾರವಾದ ಒಲವು ಇರುತ್ತದೆ ಮತ್ತು ಇವರು ಓದು ಮತ್ತು ಬರಹದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ ಎಂಬುದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷ ನಿರ್ಮಲ ಮಂಚೇಗೌಡ ತಿಳಿಸಿದರು.
ವರದಿ…
ಮಗ್ಗಲಮಕ್ಕಿಗಣೇಶ್.

