लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
27/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಿಸಿಎಸ್ಆರ್ ಕೆಪಿಎಸ್ ಶಾಲಾ ಕಟ್ಟಡಕ್ಕೆ ಭೂಮಿ ಪೂಜೆ 3 ರಿಂದ 5 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣ….

1 min read

ಸಿಸಿಎಸ್ಆರ್ ಕೆಪಿಎಸ್ ಶಾಲಾ ಕಟ್ಟಡಕ್ಕೆ ಭೂಮಿ ಪೂಜೆ

3 ರಿಂದ 5 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣ

ಆಲ್ದೂರು: ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ನಿವೇಶನದಲ್ಲಿ ವಿದ್ಯಾ ಕಾಫಿ ಮತ್ತು ಹರ್ಬ್ಸ್ ಸಂಸ್ಥೆಯ ಸರಸ್ವತಿ ಫೌಂಡೇಶನ್ ವತಿಯಿಂದ ನೂತನ ಸಿಸಿಎಸ್ಆರ್ ಕೆಪಿಎಸ್ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಶುಕ್ರವಾರ ನೆರವೇರಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ತಿಮ್ಮರಾಜು, ಶತಮಾನೋತ್ಸವದತ್ತ ದಾಪುಗಾಲು ಇಡುತ್ತಿರುವ ಶಾಲಾ ಕಟ್ಟಡವನ್ನು ನೂತನವಾಗಿ ನಿರ್ಮಿಸಿಕೊಡಲು ಮುಂದಾದ ವಿದ್ಯಾ ಕಾಫಿ ಮತ್ತು ಹರ್ಬ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಶ್ಯಾಮ್ ಪ್ರಸಾದ್ ರವರ ವ್ಯಕ್ತಿತ್ವ ಎಷ್ಟು ಸರಳ ಆದರೆ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಬೇಕೆನ್ನುವ ಅವರ ಭವಿಷ್ಯದ ಚಿಂತನೆ ಕಾಳಜಿಯಿಂದ ಕಟ್ಟಡ ನಿರ್ಮಿಸಿ ಕೊಡುತ್ತಿದ್ದು, ಶಾಲೆಗೆ ಅವಶ್ಯಕತೆ ಉಳ್ಳ ಪೀಠೋಪಕರಣಗಳನ್ನು ಒದಗಿಸುವುದಲ್ಲದೆ, ಡಿ ಗ್ರೂಪ್ ನೌಕರರನ್ನು ಸಹ ಸಂಸ್ಥೆ ವತಿಯಿಂದ ನಿಯೋಜಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದು ಇಂತಹ ಸಮಾಜಮುಖಿ ಸರಳ ವ್ಯಕ್ತಿತ್ವಗಳು ಬಹಳಷ್ಟು ವಿರಳ ಎಂದು ಅಭಿಪ್ರಾಯ ಹಂಚಿಕೊಂಡರು.

ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ಯಾಮ್ ಪ್ರಸಾದ್ ಭಟ್ ಮಾತನಾಡಿ ಸಮಾಜದಲ್ಲಿ ಬಹು ಮುಖ್ಯವಾಗಿರುವುದು ಶಿಕ್ಷಣ ಮತ್ತು ಆರೋಗ್ಯ, ಆಲ್ದೂರಿಗೆ ಮೊದಲು ಆಸ್ಪತ್ರೆಯನ್ನು ಕಟ್ಟಿಸಿಕೊಡಲು ಚಿಂತಿಸಿ ಕಾಮಗಾರಿ ಈಗಾಗಲೇ ನಡೆಯುತ್ತಿದ್ದು ಶಾಲೆ ಒಂದನ್ನು ಕಟ್ಟಿಸಬೇಕೆಂಬುದು ನನ್ನ ಕನಸಾಗಿತ್ತು ಹಾಗಾಗಿ ಉತ್ತಮ ಮಾದರಿ ಶಾಲೆಯನ್ನು ಸರಸ್ವತಿ ಫೌಂಡೇಶನ್ ವತಿಯಿಂದ ಮೂರರಿಂದ ಐದು ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿದ್ದೇವೆ.
ಉತ್ತಮ ಗುಣಮಟ್ಟದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ದೇಶದ ಆಸ್ತಿಯಾಗುವುದಲ್ಲದೆ ಉತ್ತಮ ಪೌರರಾಗಿ ದೇಶಕ್ಕೆ ಉನ್ನತ ಕೊಡುಗೆಗಳನ್ನು ನೀಡಬೇಕೆಂಬುದು ನಮ್ಮ ಆಶಯ ಎಂದು ಅಭಿಪ್ರಾಯ ಹಂಚಿಕೊಂಡರು.

ಶ್ಯಾಮ್ ಪ್ರಸಾದ್ ಭಟ್ ರವರ ಪುತ್ರಿ ವಿದ್ಯಾ ಶ್ಯಾಮ್ ಪ್ರಸಾದ್, ತಂದೆಯವರು ಬಾಲ್ಯದ ದಿನಗಳಿಂದಲೂ ಶಿಕ್ಷಣದ ಮಹತ್ವವನ್ನು ಅರಿತದ್ದರಿಂದಲೇ ವಿದ್ಯಾ ಎಂದು ನನಗೆ ಹೆಸರನ್ನು ಇಟ್ಟಿದ್ದಾರೆ ಅದರಂತೆ ಅವರಿಗೆ ಶಾಲೆಗಳನ್ನು ಮತ್ತು ವಿಶ್ವವಿದ್ಯಾನಿಲಯವನ್ನು ನಿರ್ಮಿಸುವ ಮಹತ್ತರ ಕನಸಿದೆ. ನಾನು ಕೂಡ ಎಂಜಿನಿಯರ್ ಪದವಿದರೆ ಆಗಿದ್ದು ತಂದೆಯೊಂದಿಗೆ ಕೆಲಸದ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ ವಿದ್ಯಾ ಬ್ರಾಂಡ್ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದ್ದು ಪರಿಶ್ರಮದಿಂದ 3 ಸಾವಿರ ಕೋಟಿ ಉದ್ಯಮವನ್ನು ಇಂದು ತಂದೆ ನಿರ್ಮಿಸಿದ್ದು ಅದಕ್ಕೆ ಮೂಲ ಕಾರಣ ಶಿಕ್ಷಣ, ಹಳ್ಳಿಯ ಮಕ್ಕಳು ಕೂಡ ಉನ್ನತ ಶಿಕ್ಷಣ ಪಡೆದರೆ ಪ್ರಪಂಚವೇ ತಿರುಗಿ ನೋಡುವಂತೆ ಸಾಧನೆ ಮಾಡಬಹುದು ಶಿಕ್ಷಣ ಅತ್ಯಂತ ಮೌಲ್ಯವುಳ್ಳದ್ದು, ಎಂದು ಅಭಿಪ್ರಾಯ ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನಪರಿಷತ್ ಸದಸ್ಯ ಸಿಟಿ ರವಿ ಮಾತನಾಡಿ, ವಿದ್ಯಾ ಸಂಸ್ಥೆಯ ಶಾಮ್ ಪ್ರಸಾದ್ ರವರು ಸಮಾಜಮುಖಿ ಕಳಕಳಿ ಉಳ್ಳ ಮಾನವತಾವಾದಿ ಈಗಾಗಲೇ ಆಸ್ಪತ್ರೆ ಕಾಮಗಾರಿ ನಡೆಯುತ್ತಿದ್ದು ಪ್ರತಿದಿನವೂ ಅದರ ಮಾಹಿತಿಯನ್ನು ತನ್ನೊಂದಿಗೆ ಹಂಚಿಕೊಳ್ಳುತ್ತಾರೆ. ಈಗಾಗಲೇ ಆಸ್ಪತ್ರೆ ಕಟ್ಟಿಸುತ್ತಿದ್ದಾರೆ ಅದೇ ಆಸ್ಪತ್ರೆಯಲ್ಲಿ ನಾನು ಜನಿಸಿದ್ದು, ಈಗ ಶಾಲೆಯನ್ನು ಕಟ್ಟಿಸುತ್ತಿದ್ದಾರೆ ಈ ಶಾಲೆಯಲ್ಲಿ ನಾನು ವ್ಯಾಸಂಗ ಮಾಡಿದ್ದೇನೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಸಮಾಜ ಕೇಂದ್ರಿತವಾಗಿರಬೇಕು ಗುಣಮಟ್ಟವಾಗಿರಬೇಕು. ಇಂತಹ ಹೃದಯವಂತಿಕೆ ಉಳ್ಳ ಉದ್ಯಮಿಗಳು ಸಮಾಜವನ್ನು ಕಟ್ಟಲು ಶ್ರಮಿಸುತ್ತಿರುವುದು ಶ್ಲಾಘನೀಯ ಇಡೀ ಊರಿನ ಜನರ ಪರವಾಗಿ ಕೃತಜ್ಞತೆಗಳನ್ನು ವಿದ್ಯಾ ಕಾಫಿ ಮತ್ತು ಹರ್ಬ್ಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಶ್ಯಾಮ್ ಪ್ರಸಾದ್ ಭಟ್ ಮತ್ತು ಕುಟುಂಬಕ್ಕೆ ಅರ್ಪಿಸುವುದಾಗಿ ತಿಳಿಸಿದರು.

ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಕೆಳಗೂರು ಪೂರ್ಣೇಶ್ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಸದನದಲ್ಲಿ ಪಾಲ್ಗೊಂಡಿರುವುದರಿಂದ ಕಾರ್ಯಕ್ರಮಕ್ಕೆ ಭಾಗವಹಿಸಲು ಸಾಧ್ಯವಾಗಿಲ್ಲ ಆದರೆ ಈ ಒಂದು ಯೋಜನೆ ಸಾಕಾರಕ್ಕೆ ಸಂಪೂರ್ಣ ಸಹಕಾರ ಮತ್ತು ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದಾರೆ ಎಂದು ತಿಳಿಸಿದರು.

ಶ್ಯಾಮ್ ಪ್ರಸಾದ್ ಭಟ್ ಪತ್ನಿ ವೀಣಾ ಶ್ಯಾಮ್ ಪ್ರಸಾದ್,
ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಸುರೇಶ ಗೌಡ,ವಲಯ ಒಕ್ಕಲಿಗ ಸಂಘದ ಅಧ್ಯಕ್ಷ ಅಶೋಕ್ ಡಿಬಿ,ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹೆಡದಾಳು ಸಂಪತ್, ಪರಿಸರವಾದಿ ಕಾಫಿ ಬೆಳೆಗಾರ ತೌಸೀಫ್ ಅಲಿ, ಡಿಎಸ್ಎಸ್ ಮುಖಂಡರಾದ ಹೊನ್ನಪ್ಪ ಯಲಗುಡಿಗೆ,ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ,ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಟಿ ಆರ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಆಚಾರ್ಯ ಗಾಳಿ ಗಂಡಿ,ಬಿ ಎಲ್ ಚಂದ್ರಶೇಖರ್, ಜೆಡಿಎಸ್ ಹೋಬಳಿ ಅಧ್ಯಕ್ಷ ಪ್ರವೀಣ್,ಪ್ರೌಢಶಾಲೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಯು ಇಬ್ರಾಹಿಂ,
ಮುಖ್ಯ ಶಿಕ್ಷಕ ಸುರೇಶ್ ಸಿ ಎಸ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಮಲಾಕ್ಷಿ, ಶಿಕ್ಷಣ ಸಂಯೋಜನ ಅಧಿಕಾರಿ ಅಸ್ಫಾ ಅಖ್ತರ್, ವಿದ್ಯಾ ಸಂಸ್ಥೆಯ ಭಾನುಪ್ರಕಾಶ್, ಗುತ್ತಿಗೆದಾರ ಪಾಂಡುರಂಗ, ಅರ್ಚಕ ಸುಬ್ರಹ್ಮಣ್ಯ ಭಟ್,
ಭವ್ಯ ನಟೇಶ್,ಸಿ ಆರ್ ಪಿ ಕಮಲ, ಎಸ್ ಡಿ ಎಂ ಸಿ ಅಧ್ಯಕ್ಷ ಪರಮೇಶ್, ವಿವಿಧ ಸಂಘಟನೆಗಳ ಮುಖಂಡರುಗಳು ಭಾಗವಹಿಸಿದ್ದರು.

About Author

More Stories

Leave a Reply

Your email address will not be published. Required fields are marked *

You may have missed