ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಸ್ತೂರಿರಂಗನ್ ವರದಿ ಮಲೆನಾಡಿನ ಜನರಿಗೆ ಮಾರಕ. ಅದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ….
1 min read
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಸ್ತೂರಿರಂಗನ್ ವರದಿ ಮಲೆನಾಡಿನ ಜನರಿಗೆ ಮಾರಕ. ಅದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಈ ಭಾಗದ ಶಾಸಕರ ಜೊತೆ ಧೀರ್ಘ ಮಾತುಕತೆ ನಡೆಸಿದ ಬಳಿಕ ಈ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆದು, ವರದಿ ವಿರುದ್ಧ ನಿರ್ಣಯ ಮಂಡಿಸಿ ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇದು ಸರಿಯಾದ ನಿರ್ಧಾರ.
ಕಸ್ತೂರಿ ರಂಗನ್ ವರದಿಯಲ್ಲಿ ಪಶ್ಚಿಮ ಘಟ್ಟಗಳ ಸೂಕ್ಷ್ಮ ವಲಯ ಎಂದಿದೆ. ನಮ್ಮ ರಾಜ್ಯದ 10.ಜಿಲ್ಲೆ 33.ತಾಲೂಕು
20668.ಚ.ಕಿ.ಮಿ ಪ್ರದೇಶ ಕರ್ನಾಟಕದ್ದು ಇದರ ವ್ಯಾಪ್ತಿಯಲ್ಲಿದೆ.
ಇದರಿಂದ ಯಾವ ರೀತಿ ನಮ್ಮವರನ್ನ ರಕ್ಷಿಸಬೇಕೆಂದು ನೋಡ್ತೇವೆ.
ಈ ವರದಿಯನ್ನ ಯಾವುದೇ ಕಾರಣಕ್ಕೂ ಒಪ್ಪಲ್ಲ. ಕ್ಯಾಬಿನೆಟ್ನಲ್ಲಿ ತರ್ತೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ವಾಹಿನಿಯ ಜೊತೆಗೆ ಕೆ.ಜಿ.ಎಫ಼್ ಮಾಜಿ ಅದ್ಯಕ್ಷ ಬಿದರಹಳ್ಳಿಜಯರಾಂ ತಿಳಿಸಿದರು.

