ಆಕ್ಷೇಪಣೆ ಜೊತೆ ವೈಜ್ಞಾನಿಕ ವರದಿಯನ್ನೂ ನೀಡಿ….
1 min read
ಆಕ್ಷೇಪಣೆ ಜೊತೆ ವೈಜ್ಞಾನಿಕ ವರದಿಯನ್ನೂ ನೀಡಿ
ಚಿಕ್ಕಮಗಳೂರು: ಪರಿಸರ ಸೂಕ್ಷ್ಮ
ಪ್ರದೇಶ ಘೋಷಣೆ ಕರಡು ಅಧಿ ಸೂಚನೆಗೆ ಆಕ್ಷೇಪಣೆ ಸಲ್ಲಿಸಲು ವಿಧಾನ ಸಭೆಯಲ್ಲಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ. ಇದರ ಕೇರಳ ರಾಜ್ಯದ ಮಾದ-ರಿಯಲ್ಲಿಯೇ ವೈಜ್ಞಾನಿಕ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಹೊಲದಗದ್ದೆ ಗೀರಿಶ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಕೇವಲ ಆಕ್ಷೇಪಣೆಯನ್ನು ಸಲ್ಲಿಸಿದರೆ ಮತ್ತೆ ಇನ್ನೊಂದು ಕರಡು ಅಧಿಸೂಚನೆ ಹೊರಡಿಸಲಾಗುತ್ತದೆ. ಇಂದಿನ ಎಲ್ಲಾ ಕರಡು ಅಧಿಸೂಚನೆಗಳನ್ನು ಗಮನಿಸಿದಾಗ ಯಾವುದೇ ತಿದ್ದುಪಡಿ ಇಲ್ಲದೆ ಮತ್ತೆ ಅದೇ ಅಧಿಸೂಚನೆಗಳೇ ಪ್ರಕಟಗೊಂಡಿವೆ. ಹೀಗಾಗಿ ಪಶ್ಚಿಮಘಟ್ಟ ಪ್ರದೇಶದಲ್ಲಿರುವ ಅರಣ್ಯ ಪ್ರದೇಶ, ಜನ ವಸತಿ, ಜಲಮೂಲಗಳು ಹಾಗೂ ಕೃಷಿ ಪ್ರದೇಶ ಎಲ್ಲಿವೆ ಎಂಬ ವೈಜ್ಞಾನಿಕ ವರದಿಯನ್ನು ಸಿದ್ದಪಡಿಸಿ ಆಕ್ಷೇಪಣೆಯೊಂದಿಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕೇರಳ ಸರ್ಕಾರ” ಇದೆ ನಿಟ್ಟಿನಲ್ಲಿ ವೈಜ್ಞಾನಿಕ ವರದಿ ಸಲ್ಲಿಸಿದ ಪರಿಣಾಮ ಆ ರಾಜ್ಯದಲ್ಲಿನ ಕೆಲ ಭೂಪ್ರದೇಶವನ್ನು ಸೂಕ್ಷ್ಮ ಪ್ರದೇಶದ ಕರಡು ಪರಿಸರ
ಅಧಿಸೂಚನೆಯಲ್ಲಿ ಕೈ ಬಿಡಲಾಗಿದೆ. ಕರಡು ಅಧಿಸೂಚನೆಯಲ್ಲಿ ರಾಜ್ಯದ ಪಶ್ಚಿಮ ಘಟ್ಟ ವ್ಯಾಪ್ತಿಯ ನೂರಾರು ಹಳ್ಳಿಗಳು, ಕೃಷಿ ಭೂಮಿ ಸೇರ್ಪಡೆಗೊಂಡಿವೆ. ಈ ಎಲ್ಲಾ ಮಾಹಿತಿಯನ್ನು ಒಳಗೊಂಡ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯಾದಲ್ಲಿ ಬಫರ್ ಝನ್ ಸಹ ಗುರುತಿಸಲಾಗುತ್ತದೆ. ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಿಂದ ಯಿಂದ 10 ಕಿಲೊಮೀಟರ್ ವರೆಗೂ ಭಪರ್ ಜೊನ್ ನಿಗದಿಯಾಗಲಿದೆ. ಹೀಗಾದರೆ ಬಹುತೇಕ ಪಶ್ಚಿಮಘಟ್ಟ ಪ್ರದೇಶದ ಹಳ್ಳಿಗಳ ಜನ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಇದರಿಂದ ಬಫರ್ ರೋಝನ್ ನಿಗದಿಗೆ ಅವಕಾಶ ನೀಡಬಾರದು. ಒಂದು ವೇಳೆ ಬಫರ್ ಜೋನ್ ನಿಗದಿ ಮಾಡಿದ್ದೇ ಆದಲ್ಲಿ ಚಿಕ್ಕಮಗಳೂರು ನಗರವೇ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಬರಲಿದೆ. ಇದೇ ರೀತಿ ರಾಜ್ಯದ 10 ಜಿಲ್ಲೆಗಳ 37 ತಾಲೂಕಿನ ಜನತೆ ಸಮಸ್ಯೆ ಎದುರಿಸಬೇಕಾಗಲಿದೆ. ಈ ಕುರಿತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ವಿಸ್ತ್ರತ ವರದಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 60 ದಿನ ಕಾಲಾವಕಾಶ ನೀಡಲಾಗಿದೆ. ಅವಧಿಯಲ್ಲಿ ಈಗಾಗಲೇ 25 ದಿನಗಳು ಮುಗಿದು ಹೋಗಿವೆ. ಇಂಥ ಸಂದರ್ಭದಲ್ಲಿ ಶಾಸಕರು
ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ ಸಚಿವರ ರಾಜೀನಾಮೆ ಕುರಿತು ಗದ್ದಲ ಮಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೂಕ್ತ ಸಹಕಾರ ನೀಡಬೇಕು. ಸಂಸದರು ಲೋಕಸಭೆಯಲ್ಲಿ ಈ ವಿಷಯ ಚರ್ಚೆಗೆ ತಂದು ಜನರಿಗೆ ಆಗುವ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ತಿಳಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿ ದ್ದಾರೆ.

