ಕಳಸ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ…..
1 min read
ಕಳಸ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ

ದಿನಾಂಕ -25-08-2026 ರಂದು ಕಳಸ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಆತಿಥೇಯ ಶಾಲೆ ಹಿರೇಬೈಲ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಿರಣ್ ಶೆಟ್ಟಿ ರವರು ಕ್ರೀಡೆ ಎಂಬುದು ವಿಧ್ಯಾರ್ಥಿಗಳ ಉನ್ನತಿಗೆ ಅತಿ ಮುಖ್ಯವಾದದ್ದು ಹಾಗಾಗಿ ವಿಧ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳುವುದು ಮುಖ್ಯ ಎಂದರು.
ಕಾರ್ಯಕ್ರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮರಸಣಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಶ್ವನಾಥ
ಈ ಭಾಗದ ಹೆಚ್ಚು ವಿದ್ಯಾರ್ಥಿಗಳು ಕ್ರೀಡೆಯ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಈ ವರ್ಷದ ಕ್ರೀಡಾ ಕೂಟವು ಕೂಡ ಇನ್ನು ಹೆಚ್ಚಿನ ಮಟ್ಟದ ನಿಮ್ಮಗಳ ಯಶಸ್ಸಿಗೆ ಸಹಕಾರಿಯಾಗಲಿ ಎಂದರು.
ಈ ಒಂದು ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ರವಿ, ಟಿ ಪಿ ಒ ಲೆವಿನ, ರಂಗನಾಥ್, ಮಂಜುನಾಥ್, ಫೈರೋಜ್ ಅಹಮದ್, ಸುರೇಶ್, ವೆಂಕಟೇಶ್, ಮುಂತಾದವರು ಭಾಗವಹಿಸಿದ್ದರು.

