ಡಯಾಲಿಸಿಸ್ ರೋಗಿಗೆ 20 ಸಾವಿರ ಸಹಾಯಧನ…
1 min read
ಡಯಾಲಿಸಿಸ್ ರೋಗಿಗೆ 20 ಸಾವಿರ ಸಹಾಯಧನ
ಆಲ್ದೂರು: ಸಮೀಪದ ಹಾಂದಿಯ ಭೀಮ ನಗರ ನಿವಾಸಿ ಸಾಯಿನಾಬಿ ರವರು ಒಂದುವರೆ ವರ್ಷಗಳಿಂದ ಎರಡು ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದು, ಮೇಘ ಪ್ರಗತಿ ಸಂಘದ ಸಕ್ರಿಯ ಸದಸ್ಯರಾಗಿದ್ದು,
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಡಯಾಲಿಸಿಸ್ ಚಿಕಿತ್ಸೆ ಪಡೆಯಲು 20,000 ಮೊತ್ತದ ಸಹಾಯಧನದ ಚೆಕ್ ಅನ್ನು ಭಾನುವಾರ ಯೋಜನಾಧಿಕಾರಿ ಬೇಬಿ ರವರು ವಿತರಣೆ ಮಾಡಿದರು.
ಶೌರ್ಯ ಘಟಕದ ಪ್ರತಿನಿಧಿ ರಾಕೇಶ್, ವಲಯ ಮೇಲ್ವಿಚಾರಕಿ ರೂಪ, ಸೇವಾ ಪ್ರತಿನಿಧಿ ರೀನಾ ಉಪಸ್ಥಿತರಿದ್ದರು.

