ಜಿಲ್ಲೆಗೆ ಸಚಿವ ಸ್ಥಾನ ನೀಡದಿರುವುದು ಅನ್ಯಾಯ : ಬಿ.ಎಸ್.ಜೈರಾಮ್ ಹೇಳಿಕೆ.
1 min read
ಚಿಕ್ಕಮಗಳೂರು: ಗಾಯತ್ರಿ ಶಾಂತೇಗೌಡ ಅವರಿಗೆ ಹೈಕಮಾಂಡ್ ನೀಡಿದ್ದ ಸಚಿವ ಸ್ಥಾನವನ್ನು ರಾಜ್ಯದಲ್ಲಿ ತಡೆ ಹಿಡಿಯುವ ಮೂಲಕ ಜಿಲ್ಲೆಗೆ ಅವಮಾನ ಮಾಡಲಾಗಿದೆ ಎಂದು ಗ್ಯಾರಂಟಿ ಪ್ರಾಧಿಕಾರದ ಮೂಡಿಗೆರೆ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಸ್. ಜೈರಾಮ್ ಆರೋಪಿಸಿದ್ದಾರೆ.
‘ಜಿಲ್ಲೆಯಲ್ಲಿ ಅರಣ್ಯ,ಕಂದಾಯ ಭೂಮಿ,ಕಸ್ತೂರಿ ರಂಗನ್ ವರದಿ,ಪರಿಸರ ಸೂಕ್ಷ್ಮ ಪ್ರದೇಶ ಸೇರಿ ಹಲವು ಜ್ವಲಂತ ಸಮಸ್ಯೆಗಳಿವೆ.ಜಿಲ್ಲೆಯ ಸಮಸ್ಯೆ ಬಗ್ಗೆ ಸಚಿವ ಸಂಪುಟದಲ್ಲಿ ಧ್ವನಿ ಎತ್ತುವ ನಮ್ಮ ಪ್ರತಿನಿಧಿ ಇರಬೇಕು’ ಎಂದರು.
ಇದು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರೂ,ವಿಧಾನ ಪರಿಷತ್ ಸದಸ್ಯರೂ ಇದ್ದರೂ ಸಚಿವ ಸ್ಥಾನ ನೀಡದೆ ಜಿಲ್ಲೆಗೆ ನಿರಾಸೆ ಮೂಡಿಸಿದೆ ಎಂದು ಹೇಳಿದರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

