AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣವು ವಿಶ್ವನಾಥ್ ಗದ್ದೆಮನೆ ಚಾರಿಟಬಲ್ ಟ್ರಸ್ಟ್‌ನ ಪ್ರಮುಖ ಗುರಿಗಳಲ್ಲಿ ಒಂದಾಗಿದೆ.

 

ಮಾನ್ಯ ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರ “ನಶಾ ಮುಕ್ತ ಭಾರತ” ಅಭಿಯಾನಕ್ಕೆ ಕೈಜೋಡಿಸುವ ಉದ್ದೇಶದಿಂದ,ನಮ್ಮ ಟ್ರಸ್ಟ್ ಕಳೆದ ಒಂದು ವರ್ಷದಿಂದ ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ವಿದ್ಯಾರ್ಥಿಗಳು,ಪೋಷಕರು ಹಾಗೂ ಸಾರ್ವಜನಿಕರಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸುತ್ತಿದೆ.

ಈ ಅಭಿಯಾನದ ಭಾಗವಾಗಿ,ಮಾದಕ ವಸ್ತುಗಳ ಅಪಾಯ, ಅವುಗಳ ದುಷ್ಪರಿಣಾಮಗಳು,ಅವುಗಳಿಂದ ದೂರವಿರುವ ಮಾರ್ಗಗಳು ಹಾಗೂ ಆರೋಗ್ಯಕರ ಜೀವನದ ಮಹತ್ವವನ್ನು ವಿವರಿಸುವ ಜಾಗೃತಿ ಕೈಪಿಡಿಗಳನ್ನುಶಾಲಾ ಪರಿಕರಗಳೊಂದಿಗೆ ವಿದ್ಯಾರ್ಥಿಗಳು,ಪೋಷಕರು ಹಾಗೂ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ.

ಇಂದಿನ ಯುವಜನತೆಯನ್ನು ಮಾದಕ ವ್ಯಸನದಿಂದ ದೂರವಿಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ಜಾಗೃತ ಸಮಾಜವೇ ಸುರಕ್ಷಿತ ಸಮಾಜ;ಮಾದಕ ವ್ಯಸನ ಮುಕ್ತ ಯುವಜನತೆಯೇ ದೇಶದ ಉಜ್ವಲ ಭವಿಷ್ಯ.

ನಾವೆಲ್ಲರೂ ಸೇರಿ “ನಶಾ ಮುಕ್ತ ಭಾರತ” ನಿರ್ಮಾಣದ ಸಂಕಲ್ಪವನ್ನು ಯಶಸ್ವಿಗೊಳಿಸೋಣ.

✍🏻ಬರಹ ಕೃಪೆ.✍🏻

ವಿಶ್ವನಾಥ್ ಗದ್ದೆಮನೆ.

ಸಂಸ್ಥಾಪಕರು.

ವಿಶ್ವನಾಥ್ ಗದ್ದೆಮನೆ ಚಾರಿಟೇಬಲ್ ಟ್ರಸ್ಟ್.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

About Author

Leave a Reply

Your email address will not be published. Required fields are marked *

You may have missed