AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಧರ್ಮಸ್ಥಳ ಗ್ರಾಮಾಭಿವೃದ್ಧಿ ಯಿಂದ ಮದ್ಯವರ್ಜನ ಶಿಬಿರ ಪೂರ್ವಭಾವಿ ಸಭೆ.”

1 min read

ಆಲ್ದೂರು:ಪಟ್ಟಣದ ನಾರಾಯಣ ಗುರು ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಿರುವ 9 ದಿನಗಳ ಮದ್ಯವರ್ಜನ ಶಿಬಿರ ಕುರಿತು ಪೂರ್ವಭಾವಿ ಸಭೆಯನ್ನು ಬುಧವಾರ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಜನಜಾಗೃತಿ ವೇದಿಕೆ ನಿರ್ದೇಶಕ ನಾಗರಾಜ್,ಶಿಬಿರವನ್ನು ಜನಜಾಗೃತಿ ವೇದಿಕೆ 1992ರಲ್ಲಿ ಪ್ರಾರಂಭವಾಗಿದ್ದು, 1998ರಲ್ಲಿ ಬೆಳ್ತಂಗಡಿಯಲ್ಲಿ ಮದ್ಯವರ್ಜನ ಶಿಬಿರ ಪ್ರಥಮವಾಗಿ ನಡೆಯಿತು.ಈ ಶಿಬಿರವು 2104ನೇ ಶಿಬಿರ ವಾಗಲಿದೆ, 9 ದಿನಗಳ ಶಿಬಿರದಲ್ಲಿ ಏಳು ದಿನಗಳ ಕಾರ್ಯಕ್ರಮದ ಕುರಿತು ನೀತಿ ನಿಯಮಗಳ ಕುರಿತು ತಿಳಿಸಿಕೊಟ್ಟರು.
ಯೋಜನೆಯ ಜಿಲ್ಲಾ ನಿರ್ದೇಶಕರಾದ ಸದಾನಂದ ಬಂಗೇರ, ಯೋಜನೆಯ ಪದಾಧಿಕಾರಿಗಳಿಗೆ ಸಂಘ ಸಂಸ್ಥೆಯಿಂದ ಪಾಲ್ಗೊಂಡಿದ್ದ ಮುಖಂಡರುಗಳಿಗೆ ಈ ಶಿಬಿರದ ಸಾಮಾಜಿಕ ಕಳಕಳಿಯ ಉದ್ದೇಶಗಳನ್ನು ಗುರಿಯನ್ನು ಕುರಿತು ಮಾಹಿತಿ ಹಂಚಿಕೊಂಡರು.

ವಲಯ ಒಕ್ಕಲಿಗ ಸಂಘದ ಅಧ್ಯಕ್ಷರಾದ ಅಶೋಕ್.ಡಿ.ಬಿ, ಶಿಬಿರವನ್ನು ನಡೆಸಲು 9 ದಿನಗಳಿಗೆ ರೂಪಿಸಬೇಕಾದ ಯೋಜನೆಗಳ ಕುರಿತು ಸಲಹೆ ನೀಡಿದರು.
ಬಳಿಕ ಶಿಬಿರದ ವ್ಯವಸ್ಥಾಪನ ಸಮಿತಿ ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಬಿ.ಬಿ.ರೇಣುಕಾರ್ಯ,
ಬಿಲ್ಲವ ಸಂಘದ ಅಧ್ಯಕ್ಷರಾದ ಕೆ.ಎಲ್.ಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ,ಉಪಾಧ್ಯಕ್ಷರುಗಳಾಗಿ ಅಶೋಕ್.ಡಿ.ಬಿ,
ನಾಗೇಶ್,ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ
ನಾರಾಯಣ ಆಚಾರ್ಯ,ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ನವರಾಜು.ಎಚ್,ಬ್ಯಾರಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎ.ಯು.ಇಬ್ರಾಹಿಂ,ಈಶ್ವರ್,ರವಿಕುಮಾರ್.ಹೆಚ್ .ಎಲ್,ಕಾರ್ಯದರ್ಶಿ ಬೇಬಿ,ಸಹಕಾರ್ಯದರ್ಶಿ ಪ್ರತಿಮಾ, ಕೋಶಾಧಿಕಾರಿ ಭರತ್,ಗೌರವ ಸದಸ್ಯರಾಗಿ ಪ್ರತಿಭಾ ನವೀನ್ ಅವರನ್ನು ಆಯ್ಕೆ ಮಾಡಲಾಯಿತು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಾಬಿರ್,ಪ್ರಧಾನ ಕಾರ್ಯದರ್ಶಿ ಸುರೇಶ್.ಹೆಚ್.ಎಸ್,ಹಂಝತುಲ್ ಖರ್ರಾರ್ ಮಸೀದಿಯ ಅಧ್ಯಕ್ಷ ಹಸೈನರ್ ಅಚ್ಚು ಹಾಗೂ ಈ ಸಭೆಯಲ್ಲಿ ವೀರಭದ್ರೇಶ್ವರ ಮುಕ್ತಿದಾನ ಸಮಿತಿಯ ಪದಾಧಿಕಾರಿ ನಾಗೇಶ್ ಗಾಳಿ ಗಂಡಿ,ದೊಡ್ಡ ಮಾಗರವಳ್ಳಿ ಮಾಜಿ ಪಂಚಾಯಿತಿ ಸದಸ್ಯ ರಾಜು.ಕೆ.ಎಲ್,ಮುಖಂಡ ತುಡುಕೂರು ಮಂಜು,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳು ಒಕ್ಕೂಟದ ಅಧ್ಯಕ್ಷರುಗಳು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿಗಳು ಭಾಗವಹಿಸಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

About Author

Leave a Reply

Your email address will not be published. Required fields are marked *

You may have missed