AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ, ಮೂಡಿಗೆರೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣಿತ ಶಿಕ್ಷಕಿಯಾದ ಶ್ರಿeಮತಿ ರುಕ್ಸನ ಪರ್ವೀನ್ ರವರು ವಯೋ ನಿವೃತ್ತಿ ಹೊಂದಿದ್ದು, ವಿದ್ಯಾಸಂಸ್ಥೆಯ ಪರವಾಗಿ ಅದ್ದೂರಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಯಿತು.

1 min read

ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ, ಮೂಡಿಗೆರೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣಿತ ಶಿಕ್ಷಕಿಯಾದ ಶ್ರಿeಮತಿ ರುಕ್ಸನ ಪರ್ವೀನ್ ರವರು ವಯೋ ನಿವೃತ್ತಿ ಹೊಂದಿದ್ದು, ವಿದ್ಯಾಸಂಸ್ಥೆಯ ಪರವಾಗಿ ಅದ್ದೂರಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಯಿತು.ಸದರಿ ಶಿಕ್ಷಕಿಯು ದಿನಾಂಕ -29-07-1966 ರಲ್ಲಿ ಜನಿಸಿದ್ದು ಎನ್. ಆರ್. ಪುರ ತಾಲೂಕಿನವರಾಗಿದ್ದಾರೆ. ಇವರು ದಿನಾಂಕ -12-06-1997 ರಿಂದ ಸರ್ಕಾರಿ ಪ್ರೌಢಶಾಲೆ, ದಾರದಹಳ್ಳಿಯಲ್ಲಿ ತಮ್ಮ ಸೇವೆಯನ್ನು ಆರಂಬಿಸಿ ಸದರಿ ಶಾಲೆಯಲ್ಲಿ ದಿನಾಂಕ -29-11-2016ರಿಂದ ಇಂದಿನವರೆಗೆ ಒಟ್ಟು 9 ವರ್ಷ 10 ತಿಂಗಳು ಕರ್ತವ್ಯ ನಿರ್ವಹಿಸಿದ್ದು,ಇವರು ಒಟ್ಟಾರೆಯಾಗಿ ಸೇವಾ ಅವಧಿಯಲ್ಲಿ 29 ವರ್ಷ 45 ದಿನಗಳು ಕರ್ತವ್ಯ ನಿರ್ವಹಿಸಿದ್ದಾರೆ. ಸದರಿ ಶಿಕ್ಷಕಿಯ ಪತಿ ಶ್ರೀ ಮಜೀರ್ ಆಸಿಫ್ ರವರು ಭಾಗವಹಿಸಿದ್ದರು. ಈ ದಂಪತಿಗೆ ಒಬ್ಬಳು ಮಗಳಿದ್ದು ಅವರು ವೈದ್ಯರಾಗಿದ್ದು, ಇನ್ನೊರ್ವ ಮಗನಿದ್ದು ಅವರು ಇಂಜಿನಿಯರ್ ಆಗಿದ್ದಾರೆ.ಕಾರ್ಯಕ್ರಮ ದಲ್ಲಿ ಮಾತನಾಡಿದ ಶಿಕ್ಷಕಿಯು ನನ್ನ ಸೇವಾವಧಿ ನನಗೆ ತೃಪ್ತಿ ತಂದಿದೆ, ಶಿಕ್ಷಕಿ ವೃತ್ತಿಯು ನನಗೆ ತೃಪ್ತಿ ತಂದಿದೆ. ವಿದ್ಯಾರ್ಥಿಗಳ ಜೊತೆ ಬೆರೆತು ಪಾಠ ಮಾಡುವ ಕಾಯಕ ಶ್ರೇಷ್ಠವಾದದ್ದು ಎಂದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರಿeಮತಿ ಮೀನಾಕ್ಷಿ ಭಾಗವಹಿಸಿ ಮಾತನಾಡಿ ಸದರಿ ಶಿಕ್ಷಕಿಯ ಸೇವೆಯನ್ನು ಶ್ಲಾಗಿಸಿ, ಇವರು ಉತ್ತಮವಾಗಿ ಸೇವೆ ಸಲ್ಲಿಸಿರುವ ಶಿಕ್ಷಕಿ ಎಂದು ಹೇಳಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶ್ರೀ ರವೀಶ್ ರವರು ಭಾಗವಹಿಸಿ ನಾನು ಇದೆ ಸಂಸ್ಥೆಯಲ್ಲಿ ಉಪಾಪ್ರಾಂಶುಪಾಲರಾಗಿದ್ದಾಗ ಇವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಪಾಠ ಪ್ರವಚನ ಉತ್ತಮವಾಗಿತ್ತು ಎಂದು ನುಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಾಪ್ರಾಂಶುಪಾಲರಾದ ಡಾ. ಜಗದೀಶ್ ನಾಯ್ಕ. ಎಂ ವಹಿಸಿ ಮಾತನಾಡಿ ಸದರಿ ಶಿಕ್ಷಕಿ ಸಮಯ ಪರಿಪಾಲನೆ, ಕರ್ತವ್ಯ ನಿಷ್ಠೆಗೆ ಹೆಸರುವಾಸಿ, ಸದರಿ ಶಿಕ್ಷಕಿಗೆ “ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ “ಪ್ರಶಸ್ತಿ ಲಭಿಸಿರುವುದು & “ಉತ್ತಮ ಗಣಿತ ಅಧ್ಯಾಪಕಿ” ಪ್ರಶಸ್ತಿ ಅವರ ಸಾರ್ಥಕ ಸೇವೆಗೆ ಸಂದಿರುವ ಗೌರವ ಆಗಿವೆ. ಸದಾ ಮಕ್ಕಳ ಏಳಿಗೆಯನ್ನೇ ಬಯಸುವ ಶಿಕ್ಷಕಿಯ ಗುಣ ಅನುಕರನಣಿಯವಾದದ್ದು ಎಂದರು. ಕಾರ್ಯಕ್ರಮದಲ್ಲಿ ಎಸ್. ಡಿ. ಎಂ. ಸಿ ಉಪಾಧ್ಯಕ್ಷರಾದ ಶ್ರೀ ಪರಮೇಶ್, ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿ ಮಾತನಾಡಿದರು. ಈ ಶಾಲೆಯಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರು ತುಂಬಾ ಮುತುವರ್ಜಿಯಿಂದ ಸೇವೆ ಸಲ್ಲಿಸುತ್ತಾರೆ ಎಂದು ನುಡಿದರು.ಸದಸ್ಯರಾದ ಪ್ರಿಯರವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸದಸ್ಯರಾದ ರಾಜೇಶ್, ಪವಿತ್ರ, ಕವಿತಾ, BRP ಸವಿತಾ,& ಇಲಾಖೆ ಅಧಿಕಾರಿಗಳು, ಅಧ್ಯಾಪಕರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಇದೆ ಸಂದರ್ಭದಲ್ಲಿ ಸರ್ಕಾರಿ ಪ್ರೌಢ ಶಾಲೆ ಬೆಟಗೆರೆ ಗೆ ವರ್ಗಾವಣೆಗೊಂಡಿರುವ ಶ್ರೀ ಮತಿ ಜ್ಯೋತಿ.ಸಿ ರವರನ್ನು ಬೀಳ್ಕೊಡುಗೆ ನೀಡಲಾಯಿತು.ಸದರಿ ಶಿಕ್ಷಕಿ ಮಾತನಾಡಿ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿರುವುದು ಖುಷಿ ತಂದಿದೆ ಇದೊಂದು ಐತಿಹಾಸಿಕ & ಸದಾ ನೆನಪಿನಲ್ಲಿ ಉಳಿಯುವ ಶಾಲೆ ಎಂದು ನುಡಿದರು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ರವಿಕುಮಾರ್ ನಿರೂಪಿಸಿದರು, ಚಂದ್ರಶೇಟ್ಟಿ ಪ್ರಾರ್ಥಿಸಿ,ಲತಾ ಶಿಕ್ಷಕಿ ಸ್ವಾಗತಿಸಿ,ವಿಮಲಾ &ರೇಣುಕಾ ವ್ಯಕ್ತಿ ಪರಿಚಯ ಮಾಡಿದರೆ, ಸುಜಾತ ಅಭಿಪ್ರಾಯ ಹಂಚಿಕೊಂಡು, ಮಣಿ ರವರು ವಂದಿಸಿದರು.

About Author

Leave a Reply

Your email address will not be published. Required fields are marked *

You may have missed