ಇಲಾಖೆ ನಿವೇಶನಕ್ಕೆ ಬೇಲಿ ಹಾಕಿ ಭದ್ರಪಡಿಸಿದ ಪೊಲೀಸ್ ಇಲಾಖೆ…
1 min read
- ಇಲಾಖೆ ನಿವೇಶನಕ್ಕೆ ಬೇಲಿ ಹಾಕಿ ಭದ್ರಪಡಿಸಿದ ಪೊಲೀಸ್ ಇಲಾಖೆ

ಆಲ್ದೂರು: ಪೊಲೀಸ್ ಇಲಾಖೆ ವತಿಯಿಂದ ನಾರಾಯಣ ಗುರು ಸಮುದಾಯ ಭವನದ ಪಕ್ಕದಲ್ಲಿರುವ ಇಲಾಖೆ ಅಧೀನದ ನಿವೇಶನಕ್ಕೆ ಗುರುವಾರ ಬೇಲಿ ಹಾಕಿ ಭದ್ರ ಪಡಿಸಲಾಯಿತು.
ಸರ್ಕಲ್ ಇನ್ಸ್ಪೆಕ್ಟರ್ ಪಿಪಿ ಸೋಮೇಗೌಡ ಪ್ರತಿಕ್ರಿಯೆ ನೀಡಿ ಆಲ್ದೂರು ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿ 158 / 2 ಸರ್ವೇ ನಂಬರ್ ನಲ್ಲಿ 1 ಎಕರೆ 8 ಗುಂಟೆ,
159/2 ಸರ್ವೇ ನಂಬರ್ ನಲ್ಲಿ 1 ಎಕರೆ 32 ಗುಂಟೆ ನಿವೇಶನ ಜಮೀನು ಇದ್ದು,
ಇಲಾಖೆಯ ನಿವೇಶನವನ್ನು ಒತ್ತುವರಿ ಮಾಡುವ ಅವಕಾಶಗಳನ್ನು ತಪ್ಪಿಸುವ ಮತ್ತು ಭದ್ರಪಡಿಸುವ ನಿಟ್ಟಿನಲ್ಲಿ ತಂತಿ ಬೇಲಿ ಹಾಕಿಸಿ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.
ಪಿ ಎಸ್ ಐ ರವಿ ಜಿ ಎ, ಪೊಲೀಸ್ ಸಿಬ್ಬಂದಿಗಳು ಇದ್ದರು.

