AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರೂಬೆನ್ ಮೊಸಸ್ ಗೆ ನ್ಯಾಷನಲ್ ಬೆಸ್ಟ್ ಸೋಷಿಯಲ್ ವರ್ಕರ್ ಅವಾರ್ಡ್….

1 min read

ರೂಬೆನ್ ಮೊಸಸ್ ಗೆ ನ್ಯಾಷನಲ್ ಬೆಸ್ಟ್ ಸೋಷಿಯಲ್ ವರ್ಕರ್ ಅವಾರ್ಡ್

ಚಿಕ್ಕ.ಜು.28.ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ರೂಬೆನ್ ಮೊಸಸ್ ರವರಿಗೆ ನ್ಯಾಷನಲ್ ಬೆಸ್ಟ್ ಸೋಷಿಯಲ್ ವರ್ಕರ್ ಅವಾರ್ಡ್ ದೊರೆತಿರುತ್ತದೆ.

ಹಲವಾರು ವರ್ಷಗಳಿಂದ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ರೂಬೆನ್ ಮೊಸಸ್ ರವರಿಗೆ ನವದೆಹಲಿಯ ವರ್ಲ್ಡ್ ಚಾರಿಟಿ ವೆಲ್ಫೇರ್ ಫೌಂಡೇಶನ್ ಭಾನುವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಿರುತ್ತದೆ.
ಸರ್ವ ಧರ್ಮ ಯುವಕ ಸಂಘದ ಮೂಲಕ ಸಮಾಜ ಸೇವೆ ಆರಂಭಿಸಿದ ಅವರು ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಅಡ್ವೆಂಚರ್ ಕ್ಲಬ್, ನೇಚರ್ ಕ್ಲಬ್,ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘ, ಹಿಂದೂ ಸ್ಮಶಾನ ಅಭಿವೃದ್ಧಿ ಸಮಿತಿ, ಕ್ರಿಶ್ಚಿಯನ್ ಸ್ಮಶಾನ ಅಭಿವೃದ್ಧಿ ಸಮಿತಿ, ರಸ್ತೆ ಬಳಕೆದಾರರ ವೇದಿಕೆ, ನಾಗರಿಕ ಹೋರಾಟ ಸಮಿತಿ ಸೇರಿದಂತೆ ಹತ್ತು ಹಲವಾರು ಸಂಘ ಸಂಸ್ಥೆಗಳು ಹಾಗೂ ಪ್ರಸ್ತುತ ಬೇತೇಲ್ ಟ್ರಸ್ಟ್ ಹಾಗೂ ಸಹನಾ ಜೆ ರೂಬೆನ್ ಸಮಾಜ ಸೇವಾ ಟ್ರಸ್ಟ್ ಮೂಲಕ ಹಲವಾರು ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಇವರು ಮಾಡಿರುವ ಸೇವೆಗಳಲ್ಲಿ ಮುಖ್ಯವಾಗಿ ಗುಜರಾತ್ ಭೂಕಂಪದ ಸಂದರ್ಭದಲ್ಲಿ ರೋಟರಿ ಕ್ಲಬ್ ಮೂಲಕ ಸ್ಥಳಕ್ಕೆ ತೆರಳಿ ಸೇವೆ ಸಲ್ಲಿಸಿರುತ್ತಾರೆ, ಕೇರಳದಲ್ಲಿ ,ರಾಯಚೂರಿನ ಮಾನ್ವಿ, ಮಡಿಕೇರಿ, ಮೂಡಿಗೆರೆ ಹಾಗೂ ಚಿಕ್ಕಮಗಳೂರಿನಲ್ಲಿ ಅತಿವೃಷ್ಟಿಯಾದಾಗ ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘದ ಮೂಲಕ ಸೇವೆ ಸಲ್ಲಿಸಿರುತ್ತಾರೆ.
ವಿಶೇಷವಾಗಿ ಕೋವಿಡ್ ಸಂದರ್ಭದಲ್ಲಿ ಎರಡು ವರ್ಷ ಸತತವಾಗಿ ಮಲೆನಾಡು ಕ್ರೈಸ್ತರ ಅಭಿವೃದ್ಧಿ ಸಂಘ ಹಾಗೂ ಕಾಂಗ್ರೆಸ್ ಯುವಕರೊಂದಿಗೆ ರಸ್ತೆಯಲ್ಲಿ ಬಿದ್ದಿದ್ದ ಭಿಕ್ಷುಕರು, ನಿರಾಶ್ರಿತರು,ಅನಾಥರು, ದಿಕ್ಕು ದೆಸೆ ಇಲ್ಲದವರು, ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನಗಳಿಗೆ ನಿರಾಶ್ರಿತರ ಕೇಂದ್ರ ತೆರೆದು ದಾನಿಗಳ ಸಹಾಯದಿಂದ ಸೇವೆ ಸಲ್ಲಿಸಿರುತ್ತಾರೆ.
ಪತ್ನಿ ಹಾಗೂ ಮಗಳೊಂದಿಗೆ ಸೇವೆ ಸಲ್ಲಿಸುತ್ತಿರುವ ಇವರು 48 ಬಾರಿ ರಕ್ತದಾನ ಮಾಡಿ ಆರೋಗ್ಯ ಇಲಾಖೆಯಿಂದ ಪ್ರಶಸ್ತಿ ಪಡೆದಿರುತ್ತಾರೆ. ವಿಶೇಷವಾಗಿ ಕಳೆದ ಮೂರು ವರ್ಷಗಳ ಹಿಂದೆ ತಮ್ಮ ಪತ್ನಿ ಸಹನಾ ಬ್ರೈನ್ ಟ್ಯೂಮರ್ ನಿಂದ ಮೃತ ಪಟ್ಟ ಸಂದರ್ಭದಲ್ಲಿ ಕುಟುಂಬದವರ ಒಪ್ಪಿಗೆ ಪಡೆದು ದೇಹದ ಎಲ್ಲಾ ಅಂಗಾಂಗಳನ್ನು ದಾನ ಮಾಡಿ ಏಳೆಂಟು ಜನರ ಬಾಳಿಗೆ ಬೆಳಕಾಗುವಂತೆ ಮಾಡಿದ್ದಾರೆ.

ಇವರ ಈ ಎಲ್ಲಾ ಸಮಾಜಸೇವಾ ಕಾರ್ಯಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರದ ನೆಹರು ಯುವ ಕೇಂದ್ರದಿಂದ ಯುವ ಪ್ರಶಸ್ತಿ, ರಾಜ್ಯ ಸರ್ಕಾರದ ಯುವಜನ ಸೇವಾ ಕ್ರೀಡಾ ಇಲಾಖೆಯಿಂದ ಯುವ ಪ್ರಶಸ್ತಿ, ಲಯನ್ಸ್ ಕ್ಲಬ್ ನಿಂದ ಗವರ್ನರ್ ಡೈಮೆಂಡ್ ಸುಪ್ರೀಮ್ ಎಕ್ಸೆಲೆನ್ಸ್ ಅವಾರ್ಡ್ ,ಹಾಗೂ ಬೆಸ್ಟ್ ಸೆಕ್ರೆಟರಿ, ರೋಟರಿ ಕ್ಲಬ್ ಅವಾರ್ಡ್,ರಾಷ್ಟ್ರೀಯ ಸ್ವಹೃದಯಿ ಪ್ರಶಸ್ತಿ, ರಾಜ್ಯ ಕ್ರೈಸ್ತ ರತ್ನ ಪ್ರಶಸ್ತಿ,ಬಸವ ಜ್ಯೋತಿ ರಾಜ್ಯ ಪ್ರಶಸ್ತಿ, ಮ್ಯಾಕ್ಸ್ ಲೈಫ್ ಸೇವಾ ರತ್ನ ಪ್ರಶಸ್ತಿ, ಸಿಟಿ ಎಕ್ಸೆಲೆನ್ಸ್ ಅವಾರ್ಡ್ ಕರ್ನಾಟಕ ಸೇವಾ ರತ್ನ ಪ್ರಶಸ್ತಿ , ಪ್ರಜಾವಾಣಿ ಪತ್ರಿಕೆ ಕೊರೋನ ಸೇನಾನಿ ಪ್ರಶಸ್ತಿ, ಪೋಲಿಸ್ ಇಲಾಖೆಯಿಂದ ಪ್ರಶಂಸೆ ಪತ್ರ, ರಾಜ್ಯ ಸರ್ಕಾರದಿಂದ ಪ್ರಶಂಸ ಪ್ರಮಾಣಪತ್ರ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಇವರಿಗೆ ಮತ್ತೊಂದು ನ್ಯಾಷನಲ್ ಬೆಸ್ಟ್ ಸೋಷಿಯಲ್ ವರ್ಕರ್ ಅವಾರ್ಡ್ ದೊರೆತಿರುವುದು ನಮ್ಮ ಜಿಲ್ಲೆಗೆ ಕೀರ್ತಿ ತಂದಿದೆ.

About Author

Leave a Reply

Your email address will not be published. Required fields are marked *

You may have missed