*ಮೂಕ ಪ್ರಾಣಿಗಳ ದಾಹ ತಣಿಸಲು ‘ಜನ ಸಹಾಯ ಸೌಹಾರ್ದ ವೇದಿಕೆ’ಯಿಂದ ಮಾನವೀಯ ಅಭಿಯಾನ:*
1 min read
ನಮ್ಮ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಏರಿಕೆ ಆಗಿದೆ.ಇಂತಹ ಸಂದರ್ಭದಲ್ಲಿ ಮನುಷ್ಯ ಏನೋ ಬುದ್ಧಿವಂತ,ಮಾತು ಬಲ್ಲವ ಬಿಸಿಲಿನ ತಾಪಮಾನದಿಂದ ಪಾರಾಗಲು ನೀರು,ಎಳನೀರು,ಜ್ಯೂಸ್ ಕುಡಿದು ತನ್ನ ದಾಹ ತೀರಿಸಿಕೊಳ್ಳುತ್ತಾನೆ. ಆದರೆ ಮೂಕ ಪ್ರಾಣಿಗಳು….!!!??
ಅದಕ್ಕಾಗಿ ಮೂಕ ಪ್ರಾಣಿಗಳ ಮೇಲೆ ವಿಶೇಷವಾದ ಕಾಳಜಿಯನ್ನು ತೆಗೆದುಕೊಂಡು ಬಿಸಿಲಿನ ತಾಪಕ್ಕೆ ತತ್ತರಿಸುತ್ತಿರುವ ಮೂಕ ಪ್ರಾಣಿಗಳಿಗೆ ಆಸರೆಯಾಗಲು ಜನ ಸಹಾಯ ಸೌಹಾರ್ದ ವೇದಿಕೆ’ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ (JSSV) ವತಿಯಿಂದ ದಿನಾಂಕ 24/04/2026ರ ಶುಕ್ರವಾರದಂದು,’ಒಂದು ಹನಿ ನೀರು ಮೂಕ ಪ್ರಾಣಿಗಳ ಬದುಕಿನೆಡೆಗೆ’ಎಂಬ ಅರ್ಥಪೂರ್ಣ ಹಾಗೂ ಮಾನವೀಯ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅಭಿಯಾನದ ಉದ್ಘಾಟನೆಯನ್ನು ಮೂಡಿಗೆರೆಯ ಲಯನ್ಸ್ ವೃತ್ತದ ಬಳಿ ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕರಾದ ತಿಪ್ಪಯ್ಯ ಅವರು ಹಾಗೂ ಚಿಕ್ಕಮಗಳೂರು ಜಿಲ್ಲಾ SYS ಕಾರ್ಯದರ್ಶಿ ಸುಲೈಮಾನ್ ಉಸ್ತಾದ್ ಹ್ಯಾಂಡ್ ಪೋಸ್ಟ್, ಕಾಫಿನಾಡು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷರಾದ ದಿನೇಶ್, ಸಮಾಜ ಸೇವಕರಾದ ಖಾಲಿದ್ ಮೂಡಿಗೆರೆ,’ಪೀಸ್ & ಅವೆರ್ನೆಸ್’ ಟ್ರಸ್ಟ್ ಸ್ಥಾಪಕರಾದ ಅಲ್ತಾಫ್ ಬಿಳಗುಳ, ಪ್ರವೀಣ್ ಕುಟ್ಟಿ ಕೃಷ್ಣಪುರ, JSSV ಅಧ್ಯಕ್ಷರಾದ ಶಿಹಾಬ್ ಹಾಜಿ ಮೂಡಿಗೆರೆ ಹಾಗೂ ಆಟೋ ಚಾಲಕರು ನೆರವೇರಿಸಿದರು.

ನಂತರ ಪ್ರಾಣಿಗಳ ದಾಹ ತಣಿಸುವ ದೃಷ್ಟಿಯಿಂದ ದಿನವಿಡೀ ವಿವಿಧ ಸ್ಥಳಗಳಲ್ಲಿ ನೀರಿನ ತೊಟ್ಟಿಗಳನ್ನು ಅಳವಡಿಸಲಾಯಿತು.

ಅದರ ವಿವರ ಈ ಕೆಳಗಿನಂತಿದೆ.
*ಮಧ್ಯಾಹ್ನ 12:00 ಗಂಟೆಗೆ:* ಬಿಳಗುಳದಲ್ಲಿ ಮೋಹಿಯ್ಯದ್ದಿನ್ ಸೇಠ್ ಮತ್ತು ಸಮಾಜ ಸೇವಕರಾದ ಹಸೈನಾರ್ ಬಿಳಗುಳ ರವರ ನೇತೃತ್ವದಲ್ಲಿ ನೀರಿನ ತೊಟ್ಟಿಯನ್ನು ಅಳವಡಿಸಲಾಯಿತು.

*ಮಧ್ಯಾಹ್ನ 2:00 ಗಂಟೆಗೆ:* ಹ್ಯಾಂಡ್ ಪೋಸ್ಟ್‌ನಲ್ಲಿ ಹಿರಿಯರಾದ ಅಬೂಬಕ್ಕರ್, ಸ್ಥಳೀಯ ಆಟೋ ಚಾಲಕರು ಮತ್ತು ಗ್ರಾಮಸ್ಥರ ನೇತೃತ್ವದಲ್ಲಿ ನೀರಿನ ತೊಟ್ಟಿ ಇಡಲಾಯಿತು.

*ಸಂಜೆ 4:00 ಗಂಟೆಗೆ:* ಜನ್ನಾಪುರದಲ್ಲಿ ಆಟೋ ಚಾಲಕರ ನೇತೃತ್ವದಲ್ಲಿ ನೀರಿನ ತೊಟ್ಟಿಯನ್ನು ಅಳವಡಿಸುವುದರೊಂದಿಗೆ ಅಭಿಯಾನದ ಕಾರ್ಯಕ್ರಮಗಳು ಯಶಸ್ವಿಯಾಗಿ ಸಂಪನ್ನಗೊಂಡವು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ JSSV ಸಂಸ್ಥಾಪಕರಾದ ಎಂ.ಎಸ್. ಆಸೀಫ್, ಉಪಾಧ್ಯಕ್ಷರಾದ ಆರಿಫ್, ಕಾರ್ಯದರ್ಶಿ ಸಯ್ಯದ್ ಸಮೀರ್, ಜೊತೆ ಕಾರ್ಯದರ್ಶಿ ದಾವೂದ್, ಸದಸ್ಯರಾದ ಸೃಜನ್, ಶುಹೈಬ್, ರಾಫೀದ್, ಶುಕೂರ್ ಮತ್ತು ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದು,ಈ ಮಹತ್ಕಾರ್ಯವನ್ನು ಯಶಸ್ವಿ ಮಾಡಿದರು.

ಸಂಘಟಕರು ತಿಳಿಸಿರುವಂತೆ, ಈ ಅಭಿಯಾನವು ಇಲ್ಲಿಗೆ ನಿಲ್ಲದೆ ಮುಂದಿನ ದಿನಗಳಲ್ಲೂ ಮುಂದುವರಿಯಲಿದೆ. ಮೂಕ ಪ್ರಾಣಿಗಳ ಬಾಯಾರಿಕೆ ನೀಗಿಸುವ ಈ ಪುಣ್ಯದ ಕೆಲಸದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕೆಂದು ಜನ ಸಹಾಯ ಸೌಹಾರ್ದ ವೇದಿಕೆಯು ಸಾರ್ವಜನಿಕರಲ್ಲಿ ವಿನಂತಿ ಮಾಡಿದೆ.
ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡುವ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಲು ಜನ ಸಹಾಯ ಸೌಹಾರ್ದ ವೇದಿಕೆ ಮುಂಚೂಣಿಯಲ್ಲಿ ನಿಲ್ಲಲಿದೆ.ಇದುವರೆಗೂ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದು,ಯಶಸ್ವಿಯಾಗಿ ಮುನ್ನಡೆಯುತ್ತಿದೆ ಇಂತಹ ಸಂಘಟನೆಯನ್ನು ಬೆಳೆಸುವಲ್ಲಿ ಸಾರ್ವಜನಿಕರು ಕೈಜೋಡಿಸಬೇಕೆಂದು ಜನ ಸಹಾಯ ಸೌಹಾರ್ದ ವೇದಿಕೆಯ ಪರವಾಗಿ ಜೆ.ಎಸ್.ಎಸ್.ವಿ. ಇದರ ಸಂಸ್ಥಾಪಕರಾದ ಎಂ.ಎಸ್ ಆಸೀಫ್ ಅವರು ಜನ ಸಾಮಾನ್ಯರಲ್ಲಿ ನಮ್ಮ ವಾಹಿನಿಯ ಮೂಲಕ ಆಗ್ರಹಿಸಿದ್ದಾರೆ.
✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.
ನ್ಯೂಸ್ ಬ್ಯೂರೋ,ಅವಿನ್ ಟಿವಿ.
🎙️ವರದಿ🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.

