AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ತ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾರಗಲ್ ನಾಗೇಶಗೌಡ ಮತ್ತು ರಾದಮ್ಮ ದಂಪತಿಗಳು ಆಪಾಯದಿಂದ ಪಾರಾದ ಘಟನೆ ನಡೆದಿದೆ.ಶನಿವಾರ ರಾತ್ರಿ ಎರಡು ಗಂಟೆ ಸುಮಾರಿಗೆ ದಂಪತಿಗಳು ನಿದ್ರೆ ಮಾಡುವ ಸಮಯದಲ್ಲಿ ಸದ್ದು ಕೇಳಿ ಮೊಬೈಲ್ ಬೆಳಕಿನಿಂದ ಹೊರಗೆ ಬಂದಿದ್ದಾರೆ.

ಭಾನುವಾರ ರಾತ್ರಿ ಸುರಕ್ಷಿತವಾದ ಒಂದು ಕೊಟಡಿಯಲ್ಲಿ ದಂಪತಿಗಳು ಮಲಗಿದ್ದರು.ಆ ಕೊಠಡಿ ಸಹ ರಾತ್ರಿ ಜರಿದು ಬಿದ್ದಿದೆ.

ಮನೆಯಲ್ಲಿದ್ದ ಪಾತ್ರೆ ಮತ್ತು ಬಟ್ಟೆ ಬರೆ ಸಹಿತ ಎಲ್ಲಾ ವಸ್ತುಗಳು ಮಣ್ಣಿನಡಿ ಸಿಲುಕಿಕೊಂಡಿವೆ.
ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ನಿತ್ಯಾ ಹೊರತು ಪಡಿಸಿದರೆ ಯಾವ ಆಧಿಕಾರಿಗಳು ಬಾರದೆ ಇರುವುದು ವಿಪರ್ಯಾಸ.

ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಹಾನಿಯಾಗಿದ್ದು ಕೂಡಲೇ ಶಾಸಕಿಯವರು ಮತ್ತು ತಹಸಿಲ್ದಾರ್ ರವರು ಭೇಟಿ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಬಿಳುತ್ತಿರುವುದರಿಂದ ತಾಲೂಕು ಆಡಳಿತ ಸದಾ ಕಾರ್ಯನಿರತವಾಗಿರಬೇಕೆಂದು ಕ್ಷೇತ್ರದ ಜನರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *

You may have missed