“ಭಾರಿ ಮಳೆ : ನಡು ರಸ್ತೆಗೆ ಬಿದ್ದ ಮರ.” ತೆರವು ಕಾರ್ಯಾಚರಣೆಯಲ್ಲಿ ಶಾಸಕ ಗೋಪಾಲ ಕೃಷ್ಣ ಬೇಳೂರು ಭಾಗಿ.
1 min read
ಶಿವಮೊಗ್ಗ ಜಿಲ್ಲೆಯ,ಸಾಗರ ತಾಲ್ಲೂಕಿನ,ಆನಂದಪುರ ಸಮೀಪದ ಗಿಳಾಲಗುಂಡಿಯಲ್ಲಿ ನಡು ರಸ್ತೆಗೆ ಉರುಳಿ ಬಿದ್ದ ಮರ ನೂರಾರು ವಾಹನಗಳು ಸ್ಥಳದಲ್ಲೇ ನಿಲ್ಲಬೇಕಾದಂತ ಪರಿಸ್ಥಿತಿ ಉಂಟಾಗಿತ್ತು.


ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಇದೇ ಮಾರ್ಗದಲ್ಲಿ ಬರುತ್ತಿರುವ ಸಂದರ್ಭದಲ್ಲಿ ರಸ್ತೆಯ ಮೇಲೆಬಿದ್ದ ಮರ ತೆರವುಗೊಳಿಸುವ ಕಾರ್ಯದಲ್ಲಿ ಭಾಗಿಯಾಗಿ ತಕ್ಷಣ ಸಂಚಾರ ನಡೆಯುವಂತೆ ಅನುಕೂಲ ಮಾಡಿದರು.


ಆನಂದಪುರಕ್ಕೆ ಆಗಮಿಸಿ ಸ್ಥಳೀಯ ಬಸ್ ಸ್ಟಾಂಡ್ ನಲ್ಲಿ ಗುಂಡಿಗಳಿಗೆ ಹಾಕಿದ ಜಲ್ಲಿ ಕೆಲಸ ವೀಕ್ಷಿಸಿದರು ,ನಂತರ ಕಣ್ಣೂರಿನಲ್ಲಿ ಕಾಲುವೆಯ ಒಡೆದು ನೀರು ಗದ್ದೆಗಳಿಗೆ ಹರಿಯುತ್ತಿರುವುದನ್ನು ನೋಡಿದರು.
ಹೊಸೂರು ಗ್ರಾಮ ಪಂಚಾಯಿತಿಯ ನೆದರವಳ್ಳಿಯಲ್ಲಿ ರವಿ ಎನ್ನುವವರ ಮನೆ ಸಂಪೂರ್ಣವಾಗಿ ನೆಲಕಚ್ಚಿದೆ, ಈ ಮನೆಯಲ್ಲಿ ವಾಸವಾಗಿದ್ದ ವಿದ್ಯಾರ್ಥಿಯ ಪುಸ್ತಕ ,ಬಟ್ಟೆ, ಮನೆಯ ಗೃಹ ಉಪಯೋಗಿ ವಸ್ತುಗಳು ಸಂಪೂರ್ಣವಾಗಿ ಹಾಳಾಗಿದೆ ಇವುಗಳಿಗಾಗಿ ತುರ್ತು ಅವಶ್ಯಕತೆಗೆ ಬೇಕಾಗುವಂತೆ ಧನ ಸಹಾಯವನ್ನು ಸಹ ಸ್ಥಳದಲ್ಲಿ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸೋಮಶೇಖರ್ ಲ್ಯಾವಗೆರೆ,ಆನಂದ ಹರಟೆ,ಮಂಜುನಾಥ್ ದಾಸನ್,ಉಮೇಶ್,ಹಾಗೂ ಪಕ್ಷದ ಇನ್ನಿತರ ಮುಖಂಡರು ಹಾಜರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.











