ಶಾಸಕ ತಮ್ಮಯ್ಯ ಪದೇ ಪದೇ ಫಾರಿನ್ ಟೂರ್ : ಕಾರ್ಯಕರ್ತರಿಂದಲೇ ವಿರೋಧ
1 min read![](https://avintv.com/wp-content/uploads/2025/01/IMG-20241231-WA03021.jpg)
ಶಾಸಕ ತಮ್ಮಯ್ಯ ಪದೇ ಪದೇ ಫಾರಿನ್ ಟೂರ್ : ಕಾರ್ಯಕರ್ತರಿಂದಲೇ ವಿರೋಧ
ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ.ತಮ್ಮಯ್ಯ ಫಾರಿನ್, ಫಾರಿನ್ ಫಾರಿನ್ ಎಂದು ಹೆಚ್ಚು ಪ್ರವಾಸ ಮಾಡುತ್ತಿರುವುದರ ಬಗ್ಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರುಗಳು ಬಹಿರಂಗವಾಗಿ ಟೀಕಿಸತೊಡಗಿದ್ದಾರೆ. ಶಾಸಕರಾದ ಮೇಲೆ ಕ್ಷೇತ್ರ ಮತ್ತು ಜನರ ಜೊತೆಗೆ ಹೆಚ್ಚಾಗಿ ಇರಬೇಕು ಆದರೆ ತಮ್ಮಯ್ಯಗೆ ಫಾರಿನ್ ಆಸೆ ಹುಟ್ಟಿಸಿದ್ದು ಯಾರು ಮತ್ತು ಏಕೆ ಎಂಬ ಪ್ರಶ್ನೆಗೆ ಕಾಂಗ್ರೆಸ್ ಮುಖಂಡರು ಜರಿಯುವುದು ನೋಡಿ ನಗು ಬರುತ್ತದೆ.
ತಮ್ಮಯ್ಯ ಒಂದು ಕಡೆ ಇರುವ ಅಭ್ಯಾಸ ಇಟ್ಟುಕೊಂಡಿಲ್ಲ ಅಂದರೆ ಜನತಾದಳ,ಕಾಂಗ್ರೆಸ್, ಬಿಜೆಪಿ ಮತ್ತೆ ಕಾಂಗ್ರೆಸ್ ಗೆ ಬಂದಿರುವ ತಮ್ಮಯ್ಯಗೆ ಜಂಪಿಂಗ್ ಅಭ್ಯಾಸ ಇದನ್ನು ಈಗಾ ಫಾರಿನ್ ತಿರುಗುವ ಕಡೆ ಬೆಳೆಸಿಕೊಂಡಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಹೆಚ್ಚು ವಿದೇಶಿ ಟೂರು ಮಾಡಿದ ದಾಖಲೆ ತಮ್ಮಯ್ಯರವರಿಗೆ ಸಲ್ಲುತ್ತದೆ. ಈ ಹಿಂದೆ ಸ್ನೇಹಿತರು ಮತ್ತು ಶಾಸಕರ ಜೊತೆಗೆ ಹೋಗುತ್ತಿದ್ದವರು ಈಗ ಸ್ವ ಕುಟುಂಬ ಸಮೇತರಾಗಿ ಹೋಗಿದ್ದಾರೆ. ಅದು ಜರ್ಮನ್ ದೇಶದಲ್ಲಿ ಹದಿನೈದುದಿನಗಳ ಕಾಲ ಪ್ರವಾಸ ಭಾಗ್ಯ ಸಿದ್ದರಾಮಯ್ಯನವರ ಭಾಗ್ಯದ ಜೊತೆಗೆ ಸೇರಿಸಲು ಎಂ.ಎಲ್.ಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಕಾಂಗ್ರೆಸ್ ನವರು ಹಾದಿ,ಬೀದಿಯಲ್ಲಿ ಹೇಳುತ್ತಿರುವುದು ಮಾತ್ರ ಸತ್ಯ. ಗೆದ್ದು ಎರಡು ವರ್ಷ ತುಂಬಿಲ್ಲ ತಮ್ಮಯ್ಯ ಮಾತ್ರ ನಾಲ್ಕು ಐದು ಸಾರಿ ಫಾರಿನ್ ಟ್ರಿಪ್ ಹೊಡೆಯುವ ಮೂಲಕ ದಾಖಲೆ ಬರೆದಿದ್ದಾರೆ.