लाइव कैलेंडर

February 2025
M T W T F S S
 12
3456789
10111213141516
17181920212223
2425262728  
05/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಂಬೇಡ್ಕ‌ರ್ ತತ್ವ-ಸಿದ್ಧಾಂತ ಅಳವಡಿಸಿಕೊಂಡರೆ ಪುತ್ಥಳಿ ಪ್ರತಿಷ್ಠಾಪನೆಗೆ ನಿಜವಾದ ಅರ್ಥ

1 min read

ಅಂಬೇಡ್ಕ‌ರ್ ತತ್ವ-ಸಿದ್ಧಾಂತ ಅಳವಡಿಸಿಕೊಂಡರೆ ಪುತ್ಥಳಿ ಪ್ರತಿಷ್ಠಾಪನೆಗೆ ನಿಜವಾದ ಅರ್ಥ

ಚಿಕ್ಕಮಗಳೂರು ಜಿಲ್ಲೆ.ಅಲ್ಲೂರು ನಗರದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಪುತ್ಥಳಿ ಅನಾವರಣ ಮತ್ತು ಸ್ವಾಭಿಮಾನಿ ಸಮ್ಮೇಳನ.

ಡಾ.ಬಾಬಾಸಾಹೇಬ್ ಅಂಬೇಡ್ಕರ್ ತತ್ವ ಸಿದ್ಧಾಂತ ಗಳನ್ನು ಅಳವಡಿಸಿಕೊಂಡು ಅವರ ವ್ಯಕ್ತಿತ್ವವನ್ನು ತಾವು ರೂಪಿಸಿಕೊಂಡದ್ದೆ ಆದರೆ ಅಂಬೇಡ್ಕರ್ ಪುತ್ತಳಿ ಪ್ರತಿಷ್ಠಾಪನೆಗೆ ನಿಜವಾದ ಅರ್ಥ ಬರುತ್ತದೆ ಎಂದು ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ತಿಳಿಸಿದರು.

ಬಿ.ಆರ್.ಅಂಬೇಡ್ಕರ್ ಪುತ್ತಳಿ ನಿರ್ಮಾಣ ಸಮಿತಿ ವತಿಯಿಂದ ಆಲ್ಲೂರು ನಗರದಲ್ಲಿ ಇಂದು ಆಯೋಜಿಸಿದ್ದ ಅಂಬೇಡ್ಕರ್ ಪುತ್ಥಳಿ ಅನಾವರಣ ಮತ್ತು ಸ್ವಾಭಿಮಾನಿ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಲ್ಲೂರಿನ ಎಲ್ಲಾ ಸಮುದಾಯಗಳ ಒಗ್ಗಟ್ಟಿನ ಹೋರಾಟದ ಫಲವಾಗಿ ಆಲ್ಲೂರಿನಂತಹ ಪುಟ್ಟ ನಗರದಲ್ಲಿ ಅಂಬೇಡ್ಕರ್ ಅವರ ಪುತ್ತಳಿ ನಿರ್ಮಾಣ ಹಾಗೂ ವೃತ್ತ ನಿರ್ಮಾಣವಾಗಿದೆ. ಈ ಕಾರ್ಯಕ್ಕೆ ಜಾತಿ ಧರ್ಮಗಳ ವರ್ಗಗಳ ಭೇದವನ್ನು ಮೀರೆ ಪುತ್ಥಳಿ ನಿರ್ಮಾಣಕ್ಕೆ ಹೋರಾಟ ನಡೆಸಿದ ಮುಖಂಡರು ಮತ್ತು ಕಾರ್ಯಕ್ರಮದ ರೂವಾರಿಗಳ ಶ್ರಮ ಅಭಿನಂದನೀಯ ಎಂದು ಹೇಳಿದರು.

ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಹೋರಾಟದಲ್ಲಿ ನನ್ನದು ಯಾವುದೇ ಪಾತ್ರವಿಲ್ಲದಿದ್ದರೂ ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಶಾಸಕಿಯಾಗಿ ಆಯ್ಕೆಯಾದ ನಂತರ ಬಂದ ಪ್ರಪ್ರಥಮ ಅನುದಾನವನ್ನು ಅಂಬೇಡ್ಕರ್ ರವರ ಪುತ್ತಳಿ ನಿರ್ಮಾಣಕ್ಕೆ ನೀಡಿರುವುದು ಹೆಮ್ಮೆ ತಂದಿದೆ ಎಂದು ಹೇಳಿದರು

ಇತ್ತೀಚಿನ ದಿನಗಳಲ್ಲಿ ದಲಿತ ಸಮುದಾಯದ ವಿದ್ಯಾರ್ಥಿ ಯುವಜನತೆ ಐಎಎಸ್, ಐಪಿಎಸ್ ತರಬೇತಿಗಳನ್ನು ಪಡೆದು ಉನ್ನತ ಹುದ್ದೆಗಳನ್ನು ಆಲಂಕರಿಸುವಂತೆ ವ್ಯವಸ್ಥೆ ರೂಪಿಸುವ ಗುರುತರ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದ್ದು, ಆ ನಿಟ್ಟಿನಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಐಎಎಸ್ ಐಪಿಎಸ್ ಮಾಡುವ ಆಕಾಂಕ್ಷಿಗಳಿಗೆ ತರಬೇತಿ ಶುಲ್ಕದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದರು.

ವಿದ್ಯಾವಂತ ದಲಿತ ಯುವಜನರು ವಿದ್ಯೆಗೆ ತಕ್ಕ ಹುದ್ದೆಗಳನ್ನು ಹುಡುಕಿಕೊಂಡು ಸ್ವಾವಲಂಬಿಯಾಗಿ ಬದುಕುವುದರ ಬಗ್ಗೆ ಗಮನಹರಿಸದೆ ಗ್ರಾಮಗಳಲ್ಲಿಯೇ ಉಳಿದುಕೊಂಡು ತಮ್ಮ ಪ್ರತಿಭೆಯನ್ನು ವ್ಯರ್ಥಗೊಳಿಸಿಕೊಳ್ಳುತ್ತಿರುವುದು ವಿಷಾದನೀಯ ಎಂದರು.

ಸಮುದಾಯದ ವಿದ್ಯಾವಂತರು ತಮಗಿರುವ ಕೌಶಲ್ಯಗಳನ್ನು ಅಭಿವೃದ್ಧಿ ಮಾಡಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಆದರೊಂದಿಗೆ ಇತರ ಸಮುದಾಯದ ಇತರರನ್ನು ಸಹ ಕರೆದುಕೊಂಡು ಬರುವ
ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ.
ಇದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯವು ಹೌದು ಎಂದು ಹೇಳಿದರು.

ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಮಾತನಾಡಿ ನಮ್ಮ ದೇಶದ ಸಂವಿಧಾನಕ್ಕೆ ಪರ್ಯಾಯವಾಗಿ ಮನಸ್ಕೃತಿ ಆಧಾರಿತ ಸಂವಿಧಾನ ರಚಿಸುವ ಮೂಲಕ ದೇಶದಲ್ಲಿ ಜಾತಿವಾದ ಹುಟ್ಟು ಹಾಕುವ ಷಡ್ಯಂತ್ರ ನಡೆಯುತ್ತಿದ್ದು, ಜಾತಿವಾದ ಹುಟ್ಟುವ ಹಾಕುವ ಮೂಲವನ್ನು ಪತ್ತೆ ಹಚ್ಚಿ ಧಮನಿಸುವ ಅಗತ್ಯವಿದೆ ಎಂದು ಹೇಳಿದರು.

ಸಮಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್
ನೀಡಿರುವ ಕೊಡುಗೆ ಅಪರಿಮಿತವಾದದ್ದು ಎಂದು ಹೇಳಿದ ಅವರು ಅಂಬೇಡ್ಕರ್ ರವರ ವ್ಯಕ್ತಿತ್ವದ ಶ್ರೇಷ್ಠತೆ ಇಡೀ ಜಗತ್ತಿನಲ್ಲಿ ಚರ್ಚೆ ಆಗುತ್ತಿರುವುದು ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿ ಎಂದು ಕೊಂಡಾಡಿದರು.

ಅಂಬೇಡ್ಕರ್ ರವರು ಭಾರತ ದೇಶದ ಸಂವಿಧಾನವನ್ನು ರಚಿಸಲು ಅಧ್ಯಯನಕ್ಕಾಗಿ ಅಮೇರಿಕಾಕ್ಕೆ ತೆರಳಿದ ಸಂದರ್ಭದಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ಮುಖ್ಯಸ್ಥರು ಸೇರಿದಂತೆ ಅಲ್ಲಿನ ಗಣ್ಯ ಮಾನ್ಯರು ಅಂಬೇಡ್ಕ‌ರ್ ರವರ ವಿದ್ವತ್ತನ್ನು ಕಂಡು ನಿಬ್ಬೆರಗಾಗಿ ಪ್ರಶಂಸೆ ವ್ಯಕ್ತಪಡಿಸಿದ್ದನ್ನು ಮೇಲಕ್ಕೂ ಹಾಕಿದರು.

ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕವೀಶ್ ಪ್ರಸ್ತಾವಿಕ ವಾಗಿ ಮಾತನಾಡಿ 2000 ಇಸ್ವಿಯಿಂದಲೂ ಈ ಭಾಗದ ದಲಿತ ಮುಖಂಡರು ಅಂಬೇಡ್ಕರ್ ಪ್ರತಿಮೆ ಹಾಗೂ ವೃತ್ತ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ನಂತರದ ದಿನಗಳಲ್ಲಿ 2011ರಲ್ಲಿ ಎಲ್ಲಾ ಸಂಘಟನೆಗಳು ಒಗ್ಗೂಡಿ ಪುತ್ತಳಿ ನಿರ್ಮಾಣಕ್ಕೆ ನಿರ್ಧಾರ ಮಾಡಿದ ನಂತರ ಈ ವಿಚಾರ ರಾಜಕೀಯಕರಣಗೊಂಡು ತಾವು ಸೇರಿದಂತೆ ಹತ್ತಾರು ಮಂದಿ ಜೈಲು ಅನುಭವಿಸಬೇಕಾಯಿತು. ಸುಮಾರು 11 ವರ್ಷಗಳ ಕಾಲ ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಕಟ್ಟ ಕಡೆಗೆ ಪುತ್ಥಳಿ ನಿರ್ಮಾಣ ಮಾಡುವಲ್ಲಿ ಯಶಸ್ಸು ಕಂಡಿರುವುದು ಸಂತಸ ತಂದಿದೆ ಎಂದು ಹೇಳಿದರು.

ಇದೇಸಂದರ್ಭದಲ್ಲಿ ಹೆಡದಾಳಿನ ಸರ್ಕಾರಿ ಪ್ರಾಥಮಿಕಶಾಲೆಯ 10ಕ್ಕೂ ಹೆಚ್ಚು ಮಕ್ಕಳು ಸೇನಾಸಮವಸ್ತ್ರ ಧರಿಸಿ ವೇದಿಕೆ ಗಣ್ಯರನ್ನು ಅಭಿನಂದಿಸಿ ಗಮನಸೆಳೆದರು.

ಗಮನಸೆಳೆದ ಬೈಕ್ ಜಾಥ ಮತ್ತು ಮೆರವಣಿಗೆ.

ಡಾ| ಬಿ.ಆರ್.ಅಂಬೇಡ್ಕರ್ ಪುತ್ತಳಿ ನಿರ್ಮಾಣ ಸಮಿತಿ ವತಿಯಿಂದ ಆಲ್ಲೂರು ನಗರದಲ್ಲಿ ಇಂದು ಆಯೋಜಿಸಿದ್ದ ಅಂಬೇಡ್ಕರ್ ಪುತ್ಥಳಿ ಅನಾವರಣ ಮತ್ತು ಸ್ವಾಭಿಮಾನಿ ಸಮ್ಮೇಳನ ಅಂಗವಾಗಿ ಆಲ್ಲೂರು ನಗರ ಸಂಪೂರ್ಣ ನೀಲಿಮಯವಾಗಿ ಮಾರ್ಪಟ್ಟಿತ್ತು ಬ್ಯಾನ‌ರ್ ಬಂಟಿಂಗುಗಳು ನಗರಾಧ್ಯಂತ ರಾರಾಜಿಸಿದ್ದವು.

ತೋರಣಮಾವು ವೃತ್ತದಿಂದ ಅಲಂಕೃತ ವಾಹನದಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ನೂರಾರು ಯುವಕರು ಭಾಗವಹಿಸಿದ್ದ ಬೈಕ್ ಜಾಥಕ್ಕೆ ಶಾಸಕಿ ನಯನ ಮೊಟ್ಟಮ್ಮ ಚಾಲನೆ ನೀಡಿದರು. ಬೃಹತ್ ಮೆರವಣಿಗೆಯಲ್ಲಿ ಹಳ್ಳಿ ವಾದ್ಯ ಡ್ರಮ್ಸ್ ಗಳ ವಾದನಕ್ಕೆ ಯುವಜನತೆಯು ಸೇರಿದಂತೆ * ಅಬಾಲವೃದ್ಧರಾಗಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಈ ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀದೇವಿ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಕನ್ನಡಸೇನೆ ಜಿಲ್ಲಾಧ್ಯಕ್ಷ ರಾಜೇಗೌಡ, ಅಂಬೇಡ್ಕರ್ ಪುತ್ಥಳಿ ನಿರ್ಮಾಣ ವೇದಿಕೆ ಗೌರವಾಧ್ಯಕ್ಷರಾದ ವೈ. ಎಂ.ಹೊನ್ನಪ್ಪ, ಎಚ್.ನವರಾಜ್, ಉಪಾಧ್ಯಕ್ಷ ತುಡುಕೂರು ಪೂರ್ಣೆಶ್ .ಕಾರ್ಯದರ್ಶಿ ಹೆಡದಾಳ್ ಕುಮಾರ್, ಸಹಕಾರ್ಯದರ್ಶಿ ದೊಡ್ಡಮಾಗರವಳ್ಳಿ ಗಿರೀಶ್, ಖಜಾಂಚಿ ಆಲ್ಲೂರು ವಸಂತ್, ಕೌಶಿಕ್ ಇದ್ದರು.

About Author

Leave a Reply

Your email address will not be published. Required fields are marked *