ಕರ್ನಾಟಕ ಗ್ರೋಯರ್ಸ್ ಫೆಡರೇಶನ್ ನ ಮೊದಲ ಮಾಸಿಕ ಸಭೆ
1 min readದಿನಾಂಕ 4.2.2025ನೆಯ ಮಂಗಳವಾರದಂದು ಕರ್ನಾಟಕ ಗ್ರೋಯರ್ಸ್ ಫೆಡರೇಶನ್ ನ ಮೊದಲ ಮಾಸಿಕ ಸಭೆಯು ಅಧ್ಯಕ್ಷರಾದ ಶ್ರೀ ಹಳಸೆ ಶಿವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಗೆ ಕಾಫಿ ಮಂಡಳಿಯ ಅಧಿಕಾರಿಗಳು ಭಾಗವಹಿಸಿ ಇ ಯು ಡಿ ಆರ್ ಬಗ್ಗೆ ಮಾಹಿತಿ ನೀಡಿದರು.
ಉಪಾಧ್ಯಕ್ಷರಾದ ಶ್ರೀ ಕೆ ಕೆ ವಿಶ್ವನಾಥ್ ರವರು SLBC ಸಭೆ ಹಾಗೂ EUDR ಕುರಿತು ವಿವರಣೆ ನೀಡಿದರು.
ಒಕ್ಕೂಟದ ಅಧ್ಯಕ್ಷರಾದ ಶ್ರೀ ಹಳಸೆ ಶಿವಣ್ಣನವರು ಹಾಗೂ ಮಾಜಿ ಅಧ್ಯಕ್ಷರಾದ ಡಾ. ಹೆಚ್ ಟಿ ಮೋಹನ್ ಕುಮಾರ್ ಅವರು ಬೆಂಗಳೂರಿನಲ್ಲಿ ಪಾರ್ಲಿಮೆಂಟರಿ ಸ್ಟ್ಯಾಂಡಿಂಗ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ ಬಗ್ಗೆ ಮಾಹಿತಿ ನೀಡಿದರು.
ಹಾಗೂ ಶ್ರೀ ಹಳಸೆ ಶಿವಣ್ಣನವರು ಮಾನ್ಯ ಇಂಧನ ಸಚಿವರಾದ ಶ್ರೀ ಕೆ ಜೆ ಜಾರ್ಜ್ ರವರನ್ನು ಭೇಟಿ ಮಾಡಿರುವ ಕುರಿತು ಸಭೆಗೆ ಮಾಹಿತಿ ನೀಡಿದರು.
ಪಶ್ಚಿಮ ಘಟ್ಟದ ಕಾಡಂಚಿನ ಗ್ರಾಮಗಳ ಅರಣ್ಯ ಸೇರ್ಪಡೆಯ ವಿಚಾರವಾಗಿ ಶ್ರೀ ಕೆಬೀ ಕೃಷ್ಣಪ್ಪನವರು ಹಾಗೂ ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ದೇವರಾಜ ರವರು ಸಭೆಗೆ ತಿಳಿಸಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕಾಗಿದೆಯೆಂದು ಚರ್ಚಿಸಿದರು.
ಇತ್ತೀಚಿಗೆ ನೆಡೆದ ಕಾಫಿ ಬೆಳೆಗಾರರ ಬೃಹತ್ ಸಮಾವೇಶ ಸಂದರ್ಭದಲ್ಲಿ ಶ್ರಮಿಸಿದ ಶ್ರೀ ಕೆಬಿ ಕೃಷ್ಣಪ್ಪನವರಿಗೆ ಶ್ರೀ ಕೀರ್ತಿಭೂಷಣ್ ರವರಿಗೆ, ಶ್ರೀ ಶಿವಕುಮಾರ ಅವರಿಗೆ ಸಭೆಯಲ್ಲಿ ಅಭಿನಂದಿಸಲಾಯಿತು.