*”???ಅಧಿಕಾರದ ಮದ…. ಕುಡಿಯುವ ನೀರಿನ ಟ್ಯಾಂಕ್ ಗಡಗಡ…???”*
1 min read
ದಿನಾಂಕ 22/04/2026ರ ಬುಧವಾರ ಮಧ್ಯಾಹ್ನ 2 ರಿಂದ 3 ಗಂಟೆಯ ಸುಮಾರಿಗೆ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಕೆಂಪಯ್ಯನಹಟ್ಟಿ ಗ್ರಾಮದ ಸಮೀಪದ ಊರಾದ ಪೊನ್ನನ ದೊಡ್ಡಿ ಎಂಬ ಸ್ಥಳದಲ್ಲಿ ಗೌರಿಶಂಕರ್ ಎಂಬ ವ್ಯಕ್ತಿ ತನ್ನ ಸ್ವಂತ ಮನೆಗೆ ರಸ್ತೆ ಮಾಡಿಕೊಳ್ಳುವ ಸಲುವಾಗಿ ಹಾಗೂ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾನು ಮತ ಪಡೆಯುವುದಿಲ್ಲ ಎಂಬ ಕಾರಣದಿಂದ ಸಾರ್ವಜನಿಕರ ಕುಡಿಯುವ ನೀರಿನ ಟ್ಯಾಂಕನ್ನು ನಾಶಪಡಿಸಿರುವ ಅಮಾನವೀಯ ಘಟನೆ ನಡೆದಿದ್ದು ಬೆಳಕಿಗೆ ಬಂದಿದೆ.

ಟ್ಯಾಂಕ್ ಅನ್ನು ಒಡೆದುಹಾಕಿದ ವ್ಯಕ್ತಿಯ ಹೆಸರು ಗೌರಿಶಂಕರ್ ಎಂದಾಗಿದ್ದು ಈತನು ಅದೇ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದ.
ಇದೇ ಅಧಿಕಾರದ ಅಮಲಿನಲ್ಲಿ ಆತ
ಮೇಲ್ಕಂಡ ಘಟನೆಯನ್ನು ಪ್ರಶ್ನಿಸಲು ಹೋದ ಆ ಗ್ರಾಮದ ಗ್ರಾಮಸ್ಥರ ಮೇಲೂ
ಅಸಭ್ಯವಾಗಿ ವರ್ತಿಸಿದ್ದಾನೆ ಅಲ್ಲದೇ ಓರ್ವ ವ್ಯಕ್ತಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ.
ಈ ಘಟನೆಯ ಕುರಿತು
ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮಾಧ್ಯಮದ ಮೂಲಕ ಆಗ್ರಹಿಸಿದ್ದಾರೆ.
✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.
ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.

