AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ಜಿಲ್ಲೆಯ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸದೇ ಇರುವ ಮತಗಟ್ಟೆ ಅಧಿಕಾರಗಳ ವಿರುದ್ಧ (ಬಿಎಲ್‌ಒ) ಕ್ರಮ ಜರುಗಿಸುವಂತೆ ಕೋರಿ….

1 min read

ಚಿಕ್ಕಮಗಳೂರು ಜಿಲ್ಲೆಯ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸದೇ ಇರುವ ಮತಗಟ್ಟೆ ಅಧಿಕಾರಗಳ ವಿರುದ್ಧ (ಬಿಎಲ್‌ಒ) ಕ್ರಮ ಜರುಗಿಸುವಂತೆ ಕೋರಿ.

‎ಈ ಮೇಲ್ಕಂಡ ವಿಷಯಕ್ಕೆ ಸಂಬಂದಪಟ್ಟಂತೆ  ಎನ್ಯುಮರೇಷನ್ ಫಾರಂಗಳನ್ನು ವಿತರಿಸಬೇಕೆಂಬ ನಿರ್ದೇಶನವಿದ್ದರೂ, ಪೊಲಿಂಗ್ ಸ್ಟೇಷನ್ ಗಳಲ್ಲಿ ಕುಳಿತು ಕೆಲವು ವ್ಯಕ್ತಿಗಳ ನಿರ್ದೇಶನದ ಮೇರೆಗೆ ಫಾರಂಗಳನ್ನು ವಿತರಿಸುತ್ತಿದ್ದು ದಿನಾಂಕ 2.7.2026 ರಂದು ತಾಲ್ಲೂಕು ಕಚೇರಿಗೆ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಆದ್ದರಿಂದ ತಕ್ಷಣವೇ ಮಧ್ಯ ಪ್ರವೇಶ ಮಾಡಿ ಸಂಬಂಧಪಟ್ಟ ಬಿಎಲ್‌ಒಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತೇನೆ

‎ ಮತಗಟ್ಟೆ ಅಧಿಕಾರಿಗಳು ಒಂದು ಎನ್ಯುಮರೇಷನ್ ಫಾರಂನನ್ನು ಭರ್ತಿ ಮಾಡಿ ತಾವು ತೆಗೆದುಕೊಂಡಿದ್ದು, ಇನ್ನೊಂದು ಫಾರಂಗೆ ಸಹಿ ಮಾಡದೆ ಕೇವಲ ಖಾಲಿ ಫಾರಂಗಳನ್ನು ಮನೆಮನೆಗೆ ವಿತರಿಸಿರುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ  ಚುನಾವಣಾಧಿಕಾರಿಗಳಿಗೆ ಹಾಗೂ ಶಿರಸ್ತೆದಾರರಿಗೆ ದೂರವಾಣಿ ಕರೆ ಮಾಡಿದಾಗ ಯಾವುದೇ ರೀತಿಯ ಸ್ಪಂದನೆ ನೀಡಿರುವುದಿಲ್ಲ. ಆದ್ದರಿಂದ ರಾಜಕೀಯ ಪಕ್ಷಗಳ ಬಿಎಲ್‌ಎ-1 ಹಾಗೂ bLA 2 ರವರ ಜೊತೆಗೆ ಸೌಹಾರ್ದ ರೀತಿಯಲ್ಲಿ ವರ್ತಿಸುವಂತೆ ಹಾಗೂ ದೂರುಗಳು ಬಂದಾಗ ಕರೆ ಸ್ವೀಕರಿಸುವಂತೆ ನಿರ್ದೇಶನ ನೀಡಬೇಕು ಮತ್ತು ಸಹಿ ಮಾಡದೆ ಖಾಲಿ ಫಾರಂ ನೀಡಿರುವ ಹಾಗೂ ಒಂದೇ ಸ್ಥಳದಲ್ಲಿ ಫಾರಂ ವಿತರಣೆ ಮಾಡುವುದನ್ನು ತಡೆಯಬೇಕು  ಮತ್ತು ಅಂತ ಮತಗಟ್ಟೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಈ ಮೂಲಕ ಮನವಿಯನ್ನು ADC ಯವರಾದ ನಂಜುಂಡೇಗೌಡ ರವರಿಗೆ ಸಲ್ಲಿಸಲಾಯಿತು
‎ ಈ ಸಂದರ್ಭದಲ್ಲಿ ರಾಜ್ಯ sc ಮೋರ್ಚ  ಕಾರ್ಯದರ್ಶಿಯಾದ ಸೀತಾರಾಮ್ ಭರಣ್ಯ, ರಾಜ್ಯ ನೇಕಾರ ಪ್ರಕೋಷ್ಟ  ಸದಸ್ಯರಾದ ವಿನೋದ್ ಬೊಗಸೆ, ಜಿಲ್ಲಾ ಮಾಧ್ಯಮ ಪ್ರಮುಖರಾದ SDM ಮಂಜಣ್ಣ, ಕೇಶವ ಹಿರೇಮಗಳೂರು, ನಿಶಾಂತ್ ಕೋಟೆ, ಪ್ರಜ್ವಲ್ ಶಾಸ್ತ ಇದ್ದರು.

About Author

Leave a Reply

Your email address will not be published. Required fields are marked *

You may have missed