AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಆಲ್ದೂರು ಬಿಜೆಪಿ ಮಂಡಲ ವತಿಯಿಂದ SIR ಪ್ರಕ್ರಿಯೆ ಪ್ರಗತಿ ಪರಿಶೀಲನ ಸಭೆ

1 min read

ಆಲ್ದೂರು ಬಿಜೆಪಿ ಮಂಡಲ ವತಿಯಿಂದ ಎಸ್ಐಆರ್ ಪ್ರಕ್ರಿಯೆ ಪ್ರಗತಿ ಪರಿಶೀಲನ ಸಭೆ

ಆಲ್ದೂರು: ಪಟ್ಟಣದ ನಾರಾಯಣ ಗುರು ಸಮುದಾಯ ಭವನದಲ್ಲಿ ಭಾನುವಾರ ಬಿಜೆಪಿ ಮಂಡಲ ವತಿಯಿಂದ ಎಸ್ಐಆರ್ ಪ್ರಕ್ರಿಯೆ ಪ್ರಗತಿ ಪರಿಶೀಲನ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಚಿಕ್ಕಮಗಳೂರು ಉಡುಪಿ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ರಾಜ್ಯದಲ್ಲಿ ನಡೆಯುತ್ತಿರುವ ಪ್ರಕ್ರಿಯೆಯಲ್ಲಿ ಕ್ಷೇತ್ರದ ಎಲ್ಲಾ ಬಿ ಎಲ್ ಎ ಗಳು ತಮ್ಮ ವ್ಯಾಪ್ತಿಯ
ಬಿ ಎಲ್ ಓ ಗಳೊಂದಿಗೆ ಮನೆಮನೆಗಳಿಗೆ ಭೇಟಿ ನೀಡಿ
ಎಸ್ಐಆರ್ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಸಹಕಾರ ನೀಡಬೇಕೆಂದು ತಿಳಿಸಿ, ಎಸ್ಐಆರ್ ಪ್ರಕ್ರಿಯೆಗಳನ್ನು ಯಾವುದೇ ಊರಿನ ಸಮುದಾಯ ಭವನ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದ್ದರೆ ಅಂತಹ ಮಾಹಿತಿಗಳನ್ನು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕೆಂದು ಬಿಎಲ್ಎ ಗಳಿಗೆ ಮತ್ತು ಮಂಡಲ ಕಾರ್ಯಕರ್ತರು ಮುಖಂಡರಿಗೆ ತಿಳಿಸಿದರು.

ಮುಖಂಡರಾದ ದೀಪಕ್ ದೊಡ್ಡಯ್ಯ ಚುನಾವಣಾ ಆಯೋಗವು ಎಸ್ಐಆರ್ ಪರಿಷ್ಕರಣೆಯನ್ನು ಜಾರಿಗೆ ತರಲು ಸೂಚಿಸಿರುವ ಮಾನದಂಡ ಗಳು ಮತ್ತು ನಿಯಮಗಳ ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊಂಡರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಡಲ ಅಧ್ಯಕ್ಷ ರವಿ ಬಸರವಳ್ಳಿ, 2002ರ ನಂತರ ನಡೆಯುತ್ತಿರುವ ಮತದಾರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಿಜವಾದ ದೇಶದ ಭಾರತೀಯ ಪೌರರಿಗೆ ಸಲ್ಲಬೇಕಾದ ಹಕ್ಕಾಗಿದ್ದು ನಕಲಿ ಮತದಾರರನ್ನು ಮತ್ತು ಮತಗಳ್ಳತನ ನಡೆಯದಂತೆ ತಡೆಯಲು ಬಹುಮುಖ್ಯವಾಗಿದೆ ಎಂದು ತಿಳಿಸಿದರು. ಮಂಡಲ ಪ್ರಭಾರಿ ಹಾಗೂ
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿ ಎಲ್ ಎ ರಘು ಜನ್ನಾಪುರ, ಜಿಲ್ಲಾ ಉಪಾಧ್ಯಕ್ಷರಾದ ವೀಣಾ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸಂಪತ್ ಹೆಡದಾಳು, ಜಿಲ್ಲಾ ಕಾರ್ಯದರ್ಶಿ ಚಂಪಾ ಜಗದೀಶ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಆನಿಗನಹಳ್ಳಿ, ಅರವಿಂದ್, ನೋಡಿಲ್ವಾ ಜಿಲ್ಲಾ ಮುಖಂಡರಾದ ರಾಜು ಮಾನೇನಹಳ್ಳಿ, ಶಂಕರ್ ,ಶಶಿ, ಜ್ಯೋತಿ ,ಸುರೇಶ್, ಮಂಡಲ ಉಪಾಧ್ಯಕ್ಷರಾದ ಭವ್ಯ ನಟೇಶ್, ಸುದರ್ಶನ್, ಬನ್ನೂರು ಶಿವಕುಮಾರ್, ಪ್ರತಿಭಾ ನವೀನ್ ,ನಳಿನಾಕ್ಷಿ,
ಸಿಂಧು ಕುಮಾರ್, ನಾಗೇಶ್ ಡಿಜೆ, ಅಜಿತ್, ಮಹೇಶ್ ಕೆರೆಮಕ್ಕಿ, ನಾಗೇಶ್ ಬೈಗೂರು, ಯೋಗೇಶ್,ಶಂಕರ್ ಹೊಸಳ್ಳಿ,
ಬೂತ್ ಅಧ್ಯಕ್ಷರುಗಳು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed