ಜಿಲ್ಲಾ ಸಾಂಸ್ಕೃತಿಕ ಸಂಘದ ನೂತನ ರಾಯಬಾರಿಯಾಗಿ ಮಂಜುನಾಥ್ ಹೆಡದಾಳು ಆಯ್ಕೆ
1 min read
ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಸಭೆ

ಜಿಲ್ಲಾ ಸಾಂಸ್ಕೃತಿಕ ಸಂಘದ ನೂತನ ರಾಯಬಾರಿಯಾಗಿ ಮಂಜುನಾಥ್ ಹೆಡದಾಳು ಆಯ್ಕೆ
ಆಲ್ದೂರು: ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಪದಾಧಿಕಾರಿಗಳ ಸಭೆ ಭಾನುವಾರ ನಡೆಯಿತು.
ಸಭೆಯಲ್ಲಿ ಗೌರವಾಧ್ಯಕ್ಷ ಶಿವಣ್ಣ ಎಸ್ ಎಸ್, ಪ್ರಾಸ್ತಾವಿಕವಾಗಿ ಮಾತನಾಡಿ ಕಲಾವಿದರ ಸಂಘದ ಪ್ರಾರಂಭ ಪ್ರತಿಯೊಬ್ಬ ಕಲಾವಿದನಿಗೂ ಸೂಕ್ತ ಪ್ರೋತ್ಸಾಹ ಬೆಂಬಲ ಸಿಗಬೇಕು ಮತ್ತು ಗ್ರಾಮೀಣ ಪ್ರತಿಭೆಗಳಿಗೆ ಅವಕಾಶಗಳು ದೊರೆಯುವಂತೆ ಮಾಡಬೇಕು ಎನ್ನುವ ದೃಷ್ಟಿಯಲ್ಲಿ ಪ್ರಾರಂಭಿಸಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಜಯಪ್ರಕಾಶ್ ಕೂದುವಳ್ಳಿ,
ಪ್ರತಿಭೆಗಳನ್ನು ಉಳಿಸಿ ಬೆಳೆಸಲು ಸಂಘದ ಪ್ರಾಮುಖ್ಯತೆ ಹೆಚ್ಚಿದ್ದು, ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಪದಾಧಿಕಾರಿಗಳ ಅಗತ್ಯತೆ ಇದ್ದು ಇಂದು ಅವರ ಆಯ್ಕೆ ಪ್ರಕ್ರಿಯೆಯನ್ನು ನಡೆಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸರ್ವಾನುಮತದಿಂದ ಜಿಲ್ಲಾ ಸಂಸ್ಕೃತಿಕ ಕಲಾವಿದರ ಸಂಘದ ರಾಯಬಾರಿಯಾಗಿ ಮಂಜುನಾಥ್ ಹೆಡದಾಳು ರವರನ್ನು ಆಯ್ಕೆ ಮಾಡಲಾಯಿತು.
ಕಡೂರು ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಶೈಲಾ ಸಿದ್ದಪ್ಪ, ಜವಾಬ್ದಾರಿ ಸ್ವೀಕರಿಸಿದರು.
ಸಭೆಯಲ್ಲಿ ಸಂಘದ ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ಅಂಬಾವತಿ ಶೆಟ್ಟಿ, ಸಹ ಕಾರ್ಯದರ್ಶಿ ಶೃತಿ ದಯಾನಂದ, ಪದಾಧಿಕಾರಿಗಳಾದ ಮೈಕ್ ಮುರುಳಿ, ಭೂಮಿಕ, ರತ್ನ, ಭಾರತಿ ಉಮೇಶ್, ಅಶ್ವಿನಿ ಉಮೇಶ್ ಮಲ್ಲೇನಹಳ್ಳಿ, ಹಾಜರಿದ್ದರು.

