“ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಒಲಿದ ರಾಜ್ಯ ಪುರಸ್ಕಾರ ಪ್ರಶಸ್ತಿ.”
1 min read
ಕಡೂರು: ಭಾರತ್ ಸ್ಕೌಟ್ ಮತ್ತು ಗೈಡ್ ಕರ್ನಾಟಕ ರಾಜ್ಯ ಸಂಸ್ಥೆಯಿಂದ 2024-25 ನೇ ಸಾಲಿನಲ್ಲಿ ಉತ್ತೀರ್ಣರಾಗಿರುವ ಕಡೂರಿನ ಜ್ಞಾನಭಾರತಿ ಇಂಗ್ಲೀಷ್ ಶಾಲೆಯ ನಾಲ್ವರು ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ರಾಜಭವನದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ರಾಜ್ಯ ಪುರಸ್ಕಾರದ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ ಎಂದು ಸ್ಕೌಟ್ ಮತ್ತು ಗೈಡ್ ತಾಲ್ಲೂಕು ಅಧ್ಯಕ್ಷ ಶರತ್ ಕೃಷ್ಣಮೂರ್ತಿ ತಿಳಿಸಿದರು.
ಈ ಕುರಿತು 15/07/2026ರ ಬುಧವಾರದಂದು ವಾಹಿನಿಯೊಂದಿಗೆ ಮಾತನಾಡಿದ ಅವರು ತಾಲ್ಲೂಕಿನಾದ್ಯಂತ ಕಳೆದ ಎರಡು ವರ್ಷದಿಂದ ಸ್ಕೌಟ್ ಮತ್ತು ಗೈಡ್ ನ 12 ಯೂನಿಟ್ ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ 1 ರಿಂದ 4ನೇ ತರಗತಿಗೆ ಒಳಪಡುವ ಕಬ್ ಮತ್ತು ಬುಲ್‌ಬುಲ್ ಪರೀಕ್ಷೆಯಲ್ಲಿ ಮೌರ್ಯ ಮತ್ತು ಅನನ್ಯ ತಂಡದ ನಾಲ್ವರು ಮಕ್ಕಳು ಪ್ರಶಸ್ತಿಗೆ ಭಾಜನರಾಗಿರುವುದು ಸಂತಸದ ಸಂಗತಿ. ಇನ್ನು ಹೈವೇ ಶಾಲೆಯ ಪೌಢಶಾಲಾ ವಿಭಾಗದ ಎಂಟು ವಿದ್ಯಾರ್ಥಿಗಳು ಸ್ಕೌಟ್-ಗೈಡ್ ವಿಭಾಗದ ಪರೀಕ್ಷೆಯಲ್ಲಿ ಆಯ್ಕೆಗೊಂಡಿರುವುದು ತಾಲ್ಲೂಕಿಗೆ ಹೆಮ್ಮೆಯ ಸಂಗತಿ ಎಂದರು.
ಮಕ್ಕಳಿಗೆ ವ್ಯಾಸಂಗದ ಬದುಕಿಗೆ ಪೂರಕವಾದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವ ಸ್ವಯಂಪ್ರೇರಿತ ಮತ್ತು ಶೈಕ್ಷಣಿಕ ಆಂದೋಲನವಾಗಿಸಲು ತಾಲ್ಲೂಕು ಘಟಕ ಶ್ರಮಿಸುತ್ತಿದೆ. ಮಕ್ಕಳ ವೈಯಕ್ತಿಕ ವಿಕಸನಕ್ಕೆ ಸ್ಕೌಟ್-ಗೈಡ್ ಕಾರ್ಯಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಸ್ಕೌಟ್ ಮತ್ತು ಗೈಡ್ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಭರತ್, ಉಪಾಧ್ಯಕ್ಷ ಪ್ರಕಾಶ್ ಮೂರ್ತಿ, ಸಹಕಾರ್ಯದರ್ಶಿ ವಸಂತ್ ಕುಮಾರ್, ಜ್ಞಾನಭಾರತಿ ಶಾಲೆಯ ಪ್ರಾಂಶುಪಾಲೆ ರಜೀಯ ಬಾನು ಇದ್ದರು.
🎙️ ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

