AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅವಿನ್ ಟಿವಿ ಸುದ್ದಿಜಾಲ ✍️: ವಿದ್ಯಾರ್ಥಿಗಳ ನಡುವೆ ದೀಪದಂತೆ ಕಾಣುವ ದುಮ್ಮಣ್ಣಗೌಡರು ಇನ್ನು ನೆನಪು ಮಾತ್ರ.

ಚಿಕ್ಕಮಗಳೂರು ಜು ೧೦: ಹಾದಿಹಳ್ಳಿಯಲ್ಲಿ ಹುಟ್ಟಿ ಬೆಳೆದು ಚಿಕ್ಕಮಗಳೂರು ಪಟ್ಟಣಕ್ಕೆ ಹೊಂದಿಕೊಂಡಿರುವ ರಾಮನಹಳ್ಳಿಯಲ್ಲಿ ತಮ್ಮ ಜೀವಿತಾವಧಿಯ ಕೊನೆಯ ದಿನಗಳನ್ನು ಕಳೆಯುತ್ತಿದ್ದ ಶಿಕ್ಷಕ ದುಮಣ್ಣಗೌಡರು ತಮ್ಮ 80ನೆಯ ವಯಸ್ಸಿನಲ್ಲಿ ಇಹ ಬದುಕಿಗೆ ವಿದಾಯ ಹೇಳಿ , ತನ್ನ ಶಿಕ್ಷಕ ವೃತ್ತಿ ಬದುಕಿಗೆ ತನ್ನದೇ ಆದ ಒಂದು ಆದರ್ಶವನ್ನು ಸಂಸ್ಥಾಪಿಸಿ ತನ್ನ ಶಿಷ್ಯ ವೃಂದದ ಮಧ್ಯೆ ಸದಾ ನೆನಪಿರುವಂತೆ ನಿರ್ಗಮಿಸಿದ್ದಾರೆ.

ಆಲ್ದೂರು ಸರ್ಕಾರಿ ಪ್ರಾಥಮಿಕ ಶಾಲೆ, ಚಿಕ್ಕಮಗಳೂರಿನ ಪೋರ್ಟಲ್ ಪೇಟೆ ಮತ್ತು ಸರ್ಕಾರಿ ಪ್ರೌಢಶಾಲೆ, ರಾಮನಹಳ್ಳಿಯ ಗಿರಿ ಗಂಗೋತ್ರಿ ಶಾಲೆ ಸೇರಿದಂತೆ ಇತರೆ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಯಾವತ್ತು ಯಾವ ಕಾಲಕ್ಕೂ ನೇರ ನಿಷ್ಠೂರ ನಡೆವಳಿಕೆಯ ಶಿಸ್ತಿನ ಸಿಪಾಯಿಯಂತಿದ್ದ ಶಿಕ್ಷಕ ದುಮ್ಮಣ್ಣಗೌಡರನ್ನು ಯಾರು ಮರೆಯುವಂತಿಲ್ಲ.

*ಇದು ಉತ್ಪ್ರೇಕ್ಷೆಯ ನೋಟವಲ್ಲ,…*

ದುಮ್ಮಣ್ಣಗೌಡರ ವೃತ್ತಿ ಬದುಕು ಸಂತಸದ ಚೆಲುವು ಮತ್ತು ಒಂದು ಅಧಿಕೃತತೆಯ ಘನತೆಯ ಕರ್ತವ್ಯವಾಗಿತ್ತು, ಸುತ್ತಲೂ ಕವಿದ ಕತ್ತಲೆಯ ಮಧ್ಯೆ ದೀಪದಾರಿಗಳಂತೆ ವಿದ್ಯಾರ್ಥಿಗಳ ನಡುವೆ ಶಿಕ್ಷಕ ದುಮಣ್ಣಗೌಡರು ಗೋಚರಿಸುತ್ತಾರೆ.

ದುಮ್ಮನಗೌಡರು ಕಳೆದ 19ನೇ ಶತಮಾನದ ಎಪ್ಪತ್ತು ಎಂಬತ್ತರ ದಶಕಗಳ ಕಾಲದ ನಡುವಿನ ಶಿಕ್ಷಕರು, ಆ ದಿನಗಳಲ್ಲಿ ಹಳ್ಳಿಯ ಕೃಷಿ ಕುಟುಂಬದಲ್ಲಿ ಹುಟ್ಟಿದ ದುಮ್ಮಣ್ಣಗೌಡರು ಬಿಎಸ್ಸಿ ಬಿಎಡ್ ಗ್ರಾಜುಯೇಷನ್ ಪಡೆದಿದ್ದ ಶಿಕ್ಷಕರಾಗಿದ್ದರು.

ತಮ್ಮ ವೃತ್ತಿ ಬದುಕನ್ನು ಪ್ರಪ್ರಥಮವಾಗಿ ಮೊದಲು ಆರಂಭಿಸಿದ್ದು ಮಲೆನಾಡಿನ ಆಲ್ದೂರಿನ ಪ್ರಾರ್ಥಮಿಕ ಶಾಲೆಯಲ್ಲಿ, ಸುಮಾರು ಒಂದು ದಶಕಗಳ ಕಾಲ ಆಲ್ದೂರಿನಲ್ಲಿ ಕರ್ತವ್ಯ ನಿರ್ವಹಿಸಿ, ತದನಂತರ ಚಿಕ್ಕಮಗಳೂರು ಪಟ್ಟಣದ ಪೋರ್ಟಲ್ ಪೇಟೆ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ವೃತ್ತಿ ಬದುಕನ್ನು ಸಮರ್ಥವಾಗಿ ನಿಭಾಯಿಸಿ , ಈ ಮಧ್ಯೆ ಬಡ್ತಿ ಪಡೆದು ಸ್ಕೂಲ್ ಇನ್ಸ್ಪೆಕ್ಟರ್ ಆಗಿ , ನಂತರ ರಾಮನಹಳ್ಳಿಯ ಗಿರಿ ಗಂಗೋತ್ರಿಯಲ್ಲಿರುವ ಟಿಸಿಎಚ್ ಕಾಲೇಜಿನಲ್ಲಿ ಬೋಧಕರಾಗಿ ನಿವೃತ್ತಿ ಹೊಂದಿದ್ದರು.

ಸುಮಾರು ಮೂರುವರೆಯಿಂದ ನಾಲ್ಕು ದಶಕಗಳ ಕಾಲ ಶಿಕ್ಷಕರಾಗಿ,ಸ್ಕೂಲು ಇನ್ಸ್ಪೆಕ್ಟರ್ ಆಗಿ, ಟಿಸಿಎಚ್ ಓದುವ ವಿದ್ಯಾರ್ಥಿಗಳಿಗೆ ಬೋಧಕರಾಗಿದ್ದ ದುಮಣ್ಣಗೌಡರು ಎಂದರೆ ಅಜಾತಬಾಹು ಮಾತ್ರವಲ್ಲ, ನೇರ ನಿಷ್ಠೂರವಾದದ ಕಟ್ಟುನಿಟ್ಟಿನ ಶಿಕ್ಷಕರಾಗಿದ್ದರು.

ತಾವು ಜನ್ಮ ನೀಡಿದ ತಮ್ಮ ಮಕ್ಕಳ ಬಗ್ಗೆ ಉಜ್ವಲ ಭವಿಷ್ಯವನ್ನು ಮಾತ್ರ ಬಯಸಲಿಲ್ಲ, ವಿದ್ಯಾರ್ಥಿಗಳೆಲ್ಲರ ಭವಿಷ್ಯವು ಉಜ್ವಲವಾಗಿ ಬೆಳಗಬೇಕು ಎಂಬ ಕಳಕಳಿಯಿಂದ ಕೈಯಲ್ಲಿ ಕೋಲಿಲ್ಲದೆ ಶಾಲಾ ಕಟ್ಟಡಿಯೋಳಗೆ ದುಮ್ಮಣ್ಣಗೌಡರು ಹೋಗುತ್ತಲೇ ಇರಲಿಲ್ಲ, ದುಮ್ಮಣ್ಣಗೌಡರ ಕೈಯಲ್ಲಿದ್ದ ಕೊಲಿನ ಹಿಂದೆ ವಿದ್ಯಾರ್ಥಿಗಳ ಭವಿಷ್ಯದ ಬೆಳಕಿನ ಕಳಕಳಿಯಿತ್ತು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಅವರು ಕೋಲಿನಿಂದ ಹೊಡೆಯುತ್ತಿರಲಿಲ್ಲ, ಟಿಸಿಎಚ್ ಮಾಡುವ ಪ್ರಶಿಕ್ಷಣಾರ್ಥಿಗಳು ಸರಿಯಾಗಿ ಪಾಠ ಮಾಡದಿದ್ದರೆ ಅವರಿಗೂ ಕೂಡ ಕೂಲಿನ ರುಚಿ ತೋರಿಸಿ, ಬೆರಳ ತುದಿಯಿಂದ ಯಾವುದೇ ಮುಲಾಜಿ ಇಲ್ಲದೆ ಕಂಕುಳಿಗೆ ಜಿಗಟಿ ಜಿಗಟಿ ಪಾಠ ಮಾಡುವ ಕೌಶಲ್ಯವನ್ನು ಕಲಿಸಿದವರು ದುಮ್ಮಣ್ಣ ಗೌಡರು.

ಅವರ ನೇರ ನಡೆ-ನುಡಿ ಮತ್ತು ನಿಷ್ಟೂರವಾದದ ಪರಿಣಾಮ ಇವರಿಂದ ಅಕ್ಷರ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಇಂದು ತಮ್ಮ ಭವಿಷ್ಯವನ್ನು ಉತ್ತಮವಾಗಿ ಕಟ್ಟಿಕೊಂಡಿದ್ದಾರೆ, ಮತ್ತು ವಿದ್ಯಾರ್ಥಿಗಳ ದುಂಡಾವರ್ತನೆಗೆ ಕಡಿವಾಣ ಹಾಕಿ ಅವರನ್ನು ನಿಭಾಯಿಸಿ ಸರಿದಾರಿಗೆ ತರುತ್ತಿದ್ದ ದುಮ್ಮಣ್ಣಗೌಡರ ವ್ಯಕ್ತಿತ್ವವೇ ಒಂದು ವಿಶಿಷ್ಟ ಆಕರ್ಷಣೆಯಾಗಿತ್ತು.

ತಂದೆಯಿಂದ ಬಳುವಳಿಯಾಗಿ ಬಂದಂತೆ ಇಂಥಹ ನೇರ ಮತ್ತು ನಿಷ್ಠರವಾದಿತನ ಗೌಡರ ಅಕ್ಕರೆಯ ಒಬ್ಬಳೇ ಮಗಳು ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಚಂಪಾ ಜಗದೀಶ್ , ಚಿಕ್ಕಮಗಳೂರು ನಗರಸಭೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಸುಧೀರ್ ಮತ್ತು ಕಿರಿಯ ಮಗ ದೀಪಕ್ ಈ ಮೂವರಲ್ಲೂ ಕಾಣಬಹುದು.

ಮಕ್ಕಳು, ಮಡದಿ, ಮೊಮ್ಮಕಳಾದಿಯಾಗಿ ಸಾವಿರ ಸಾವಿರ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳ ಮಧ್ಯೆ ಅಗಲಿದ ದುಮ್ಮಣ್ಣಗೌಡರ ಆದರ್ಶದ ವ್ಯಕ್ತಿತ್ವ, ಅವರ ಮಾದರಿಯಾದ ವೃತ್ತಿ ಬದುಕು, ನೇರ ಮತ್ತು ನಿಷ್ಠೂರವಾದದ ಅವರ ಸ್ವಭಾವ ಹಲವರ ಮನದೊಳಗೆ ಅಚ್ಚೊತ್ತಿದೆ.

ತನ್ನ ಮಕ್ಕಳ ಭವಿಷ್ಯವನ್ನು ಮಾತ್ರವಲ್ಲ ವಿದ್ಯಾರ್ಥಿಗಳ ಬದುಕನ್ನು ಸಹನೀಯಗೊಳಿಸಿ, 80 ವರ್ಷಗಳ ಒಂದು ತುಂಬಾ ಜೀವನವನ್ನು ನಡೆಸಿ, ವಯೋಸಹಜ ಅನಾರೋಗ್ಯದಿಂದ ನಿಧನರಾದ ದುಮ್ಮಣ್ಣ ಗೌಡರಿಗೆ ವಿವಿಧ ರಾಜಕೀಯ ಪಕ್ಷದ ಮುಖಂಡರು ಸೇರಿದಂತೆ, ವಿದ್ಯಾರ್ಥಿಗಳು ಶಿಕ್ಷಕ ವರ್ಗ, ಹಲವು ಸಂಘ ಸಂಸ್ಥೆಗಳು ದುಮ್ಮಣ್ಣಗೌಡರ ಅಂತಿಮ ದರ್ಶನ ಪಡೆದು ಸಂತಾಪ ಸಲ್ಲಿಸಿದ್ದಾರೆ.

ಇಂದು ಸಂಜೆ 4:30 ಘಂಟೆಗೆ ತನ್ನ ಹುಟ್ಟೂರು ಚಿಕ್ಕಮಗಳೂರು ಸಮೀಪದ ಹಾದಿಹಳ್ಳಿಯ ತೋಟದ ಮಧ್ಯೆ ಗೌಡರ ಅಂತಿಮ ಸಂಸ್ಕಾರಗಳು ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed