AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಿದ ಮೂಡಿಗೆರೆ ರೋಟರಿ ಕ್ಲಬ್”

1 min read

ಮೂಡಿಗೆರೆ : ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ರೋಟರಿ ಕ್ಲಬ್ (RI Dist 3182, Zone 08) ವತಿಯಿಂದ ತಾಲೂಕಿನ ಹಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇತ್ತೀಚೆಗೆ ‘ವನಮಹೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ರೋಟರಿ ಸದಸ್ಯರು ಹಾಗೂ ಶಾಲಾ ಮಕ್ಕಳ ಜಂಟಿ ಸಹಭಾಗಿತ್ವದಲ್ಲಿ ವಿವಿಧ ತಳಿಯ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಪಾಸ್ಟ್ ಝೋನಲ್ ಲೆಫ್ಟಿನೆಂಟ್ ಆರ್‌.ಟಿ.ಎನ್.ಆದರ್ಶ ಅವರು, “ಇತ್ತೀಚಿನ ದಿನಗಳಲ್ಲಿ ಸಕಾಲಕ್ಕೆ ಮಳೆಯಾಗದಿರಲು ಮತ್ತು ಶುದ್ಧ ಗಾಳಿಯ ಅಭಾವಕ್ಕೆ ಮರ-ಗಿಡಗಳ ಅತಿಯಾದ ನಾಶವೇ ಪ್ರಮುಖ ಕಾರಣ. ಅಭಿವೃದ್ಧಿ ಅಥವಾ ಅನಿವಾರ್ಯ ಕಾರಣಗಳಿಗೆ ಒಂದು ಮರವನ್ನು ಕಡಿದರೆ, ಅದಕ್ಕೆ ಪ್ರತಿಯಾಗಿ ಕನಿಷ್ಠ ಎರಡು ಸಸಿಗಳನ್ನು ನೆಟ್ಟು ಪೋಷಿಸಬೇಕು. ಆಗ ಮಾತ್ರ ಪ್ರಕೃತಿಯನ್ನು ಕಾಪಾಡಿಕೊಳ್ಳಲು ಸಾಧ್ಯ. ಶಾಲಾ ಹಂತದಿಂದಲೇ ಮಕ್ಕಳು ಪರಿಸರ ಕಾಳಜಿಯನ್ನು ಮೈಗೂಡಿಸಿಕೊಳ್ಳಬೇಕು”ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮೂಡಿಗೆರೆ ಘಟಕದ ಅಧ್ಯಕ್ಷ ಬಿ. ಕೆ. ದಿನೇಶ್,ಕಾರ್ಯದರ್ಶಿ ಆರ್‌.ಟಿ.ಎನ್. ಸಂತೋಷ್,ನಿಕಟಪೂರ್ವ ಅಧ್ಯಕ್ಷ ಆರ್‌.ಟಿ.ಎನ್.ಪ್ರಸಾದ್, ಸದಸ್ಯರಾದ ಆರ್‌.ಟಿ.ಎನ್.ಸಂದೀಪ್,ಆರ್‌.ಟಿ.ಎನ್. ಸುಭಾಷ್,ಆರ್‌.ಟಿ.ಎನ್. ಅವಿನ್,ಆರ್‌.ಟಿ.ಎನ್. ಸುನಿಲ್ ಉಪಸ್ಥಿತರಿದ್ದರು.

ಇದೇ ವೇಳೆ ಶಾಲೆಯ ಮುಖ್ಯ ಶಿಕ್ಷಕ ಮಂಜು ನಾಯ್ಕ್, ಶಿಕ್ಷಕಿ ರೇಣುಕಮ್ಮ, ಶಾಲಾ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಭಾಗವಹಿಸಿ ಸಾಥ್ ನೀಡಿದರು.

ಅಂತಿಮವಾಗಿ “ಒಂದು ಸಸಿ ನೆಡೋಣ – ಪರಿಸರ ಉಳಿಸೋಣ” ಹಾಗೂ “ಸೇವೆಯೇ ಶ್ರೇಷ್ಠ” ಎಂಬ ಆಶಯದೊಂದಿಗೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ಕೊನೆಗೊಂಡಿತು.

🎙️ವರದಿ.🎙️

 

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

About Author

Leave a Reply

Your email address will not be published. Required fields are marked *

You may have missed