लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
07/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸಲು ಹಸಿರು ಫೌಂಡೇಶನ್ ಕರೆ..!!

1 min read

ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸಲು ಹಸಿರು ಫೌಂಡೇಶನ್ ಕರೆ..!!
ಇಂದು ಮೂಡಿಗೆರೆ ಪಟ್ಟಣದ ಪದವಿ ಪೂರ್ವ ಪ್ರೌಢ ಶಾಲೆಯಲ್ಲಿ ಹಸಿರು ಫೌಂಡೇಶನ್ ವತಿಯಿಂದ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸುವಂತೆ ಹಾಗೂ ವಾಯು ಮಾಲಿನ್ಯ ಕುರಿತು ಅರಿವು ಮೂಡಿಸಲಾಯಿತು.
ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮಣ್ಣಿನ ದೀಪಗಳನ್ನು ವಿತರಿಸಲಾಯಿತು ಹಾಗೂ ಹಸಿರು ಫೌಂಡೇಶನ್ ವತಿಯಿಂದ ಪರಿಸರ ಸ್ನೇಹಿ ದೀಪಾವಳಿ ಜಾಗೃತಿ ಸಂದೇಶವನ್ನು ಹೊಂದಿರುವ ಕಾರ್ಡ್ ವಿತರಿಸಲಾಯಿತು.
ಹಸಿರು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ರತನ್ ಊರುಬಗೆ ಪ್ರಾಸ್ತವಿಕವಾಗಿ ಮಾತನಾಡಿ ವಾಯುಮಾಲಿನ್ಯ ತಡೆಗಟ್ಟುವ ದೃಷ್ಟಿಯಿಂದ ಆದಷ್ಟು ಪಟಾಕಿ ಕಡಿಮೆ ಮಾಡಿ ದೀಪಗಳನ್ನು ಹಚ್ಚುವುದರ ಮೂಲಕ ನಮ್ಮ ಸಂಸ್ಕೃತಿ ಆಚರಣೆ ನಡೆಸಬೇಕು ಪರಿಸರ ಉಳಿದರೆ ನಾವೆಲ್ಲ ಉಳಿಯಲು ಸಾಧ್ಯ, ವಾಯು ಮಾಲಿನ್ಯ ಗಂಭೀರವಾದ ಸಮಸ್ಯೆಯಾಗಿದ್ದು, ಈಗಾಗಲೇ ವಾಯು ಮಾಲಿನ್ಯ ನಗರಗಳಲ್ಲಿ ವಿಪರೀತವಾಗಿ ಹೆಚ್ಚಿದೆ. ಯುವ ಸಮೂಹ ಆದಷ್ಟು ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಪ್ರಾಣಿ ಪಕ್ಷಿಗಳು ಕೂಡ ಬದುಕಬೇಕಿದೆ ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಹಬ್ಬಗಳನ್ನು ಆಚರಿಸಬೇಕಿದೆ ಎಂದರು.
ಶಾಲಾ ಮುಕ್ಯೋಪಾಧ್ಯಾಯರಾದ ಜಗದೀಶ್ ನಾಯಕ್ ಮಾತನಾಡಿ ಹಸಿರು ಫೌಂಡೇಶನ್ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ವಾಯು ಮಾಲಿನ್ಯ ತಡೆ ಕುರಿತು ಮಾಡುತ್ತಿರುವ ಕಾರ್ಯಕ್ರಮ ನಿಜಕ್ಕೂ ಶ್ಲಾಘನಿಯ ಮಕ್ಕಳಿಗೆ ನಾವು ಪಾಠದಲ್ಲಿ ಕಲಿಸುತ್ತೀವೆ ಹಸಿರು ಫೌಂಡೇಶನ್ ಸಂಸ್ಥೆಯೂ ಪ್ರಾಯೋಗಿಕವಾಗಿ ಮಾಡುತ್ತಿವುದು ತುಂಬಾ ಸಂತೋಷ ಎಲ್ಲರು ಜೀವನದಲ್ಲಿ ಅಳವಡಿಕೊಳ್ಳಬೇಕು, ಪರಿಸರ ಬದುಕಿನ ಪಾಠವಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಫೌಂಡೇಶನ್ ವತಿಯಿಂದ ಪರಿಸರ ಪೂರಕ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಭೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಚಿತ್ರಕಲಾ ಶಿಕ್ಷಕರಾದ ಎಚ್ ಎಸ್ ರವಿ, ಸಹ ಶಿಕ್ಷಕರು, ಹಸಿರು ಫೌಂಡೇಶನ್ ಉಪಾಧ್ಯಕ್ಷರಾದ ವಿನು ಪ್ರಸಾದ್, ಕಾರ್ಯದರ್ಶಿ ಅಭಿಜಿತ್ ಹೆಡದಾಳು, ನಿರ್ದೇಶಕರುಗಳಾದ ಸಚಿನ್ ದುರ್ಗದಹಳ್ಳಿ, ಸುಮಂತ್ ಸತ್ತಿಗನಹಳ್ಳಿ, ಅದೀಪ್ ಊರುಬಗೆ ಮತ್ತಿತರು ಹಾಜರಿದ್ದರು

About Author

Leave a Reply

Your email address will not be published. Required fields are marked *

You may have missed