लाइव कैलेंडर

October 2026
M T W T F S S
 1234
567891011
12131415161718
19202122232425
262728293031  
04/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಿರುಗುಂದ ಗ್ರಾಮ ಪಂಚಾಯಿತಿ ಮತ್ತು ಆಶ್ರಿತ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಕಿರುಗುಂದ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ಜಯಂತಿ ಹಾಗೂ ಬಾಲ್ಯ ವಿವಾಹ ಮುಕ್ತ ಭಾರತ ಕಾರ್ಯಕ್ರಮವನ್ನು ಮಾಡಲಾಯಿತು…..

1 min read

ಕಿರುಗುಂದ ಗ್ರಾಮ ಪಂಚಾಯಿತಿ ಮತ್ತು ಆಶ್ರಿತ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಕಿರುಗುಂದ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ಜಯಂತಿ ಹಾಗೂ ಬಾಲ್ಯ ವಿವಾಹ ಮುಕ್ತ ಭಾರತ ಕಾರ್ಯಕ್ರಮವನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ರವರಿಗೆ ನಮನವನ್ನು ಸಲ್ಲಿಸಿ ಮಹಾತ್ಮ ಗಾಂಧೀಜಿಯವರ ತ್ಯಾಗ ಅಹಿಂಸಾ ಚಳುವಳಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿ ಬಾಳಿದ ಆದರ್ಶ ಗುಣಗಳನ್ನು ಗ್ರಾಮದ ಹಿರಿಯರಾದ ಕೆಕೆ ರಾಮಯ್ಯ ರವರು ತಿಳಿಸಿದರು ಸಾಮಾಜಿಕ ಕಾರ್ಯಕರ್ತ ಹಾಗೂ ಸಂಪನ್ಮೂಲ ವ್ಯಕ್ತಿ ನವೀನ್ ಆನೆದಿಬ್ಬ ಮಾತನಾಡಿ ಪಂಚಾಯ್ತಿಯನ್ನು ಬಾಲ್ಯ ವಿವಾಹ ಮುಕ್ತ ಪಂಚಾಯಿತಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಭಾಗಿಯಾಗಬೇಕು ನಮ್ಮ ಮನೆಯಲ್ಲಿ ಕುಟುಂಬದಲ್ಲಿ ಸಂಬಂಧಿಕರಲ್ಲಿ ಹಳ್ಳಿಯಲ್ಲಿ ಗ್ರಾಮದಲ್ಲಿ ಎಲ್ಲಾದರೂ ಬಾಲ್ಯ ವಿವಾಹದ ಬಗ್ಗೆ ಸುಳಿವು ಸಿಕ್ಕಿದರೆ ಸ್ಥಳೀಯ ಅಧಿಕಾರಿಗಳೊಂದಿಗೆ ಅದನ್ನು ನಿಲ್ಲಿಸಲು ಎಲ್ಲರೂ ಬದ್ಧರಾಗಬೇಕು ಮತ್ತು ಸಂಸ್ಥೆಯು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದರು ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹ ಮುಕ್ತ ಪ್ರತಿಜ್ಞೆಯನ್ನು ಮಾಡಲಾಯಿತು ಪಂಚಾಯಿತಿ ಆಡಳಿತ ಅಧಿಕಾರಿ ಚಂದನ್ ಬಿಎಮ್ ರವರು ಮಾತನಾಡಿ ಮಹಾತ್ಮ ಗಾಂಧೀಜಿಯವರ ಆದರ್ಶ ನಮ್ಮೆಲ್ಲರಿಗೆ ಬೆಳಕಾಗಿದೆ ಸುಚಿತ್ವ ಮತ್ತು ಸರಳತೆ ತ್ಯಾಗ ಇವೆಲ್ಲವೂ ನಮ್ಮೊಳಗಿನ ಬದುಕಿಗೆ ಆದರ್ಶ ಎಂದರು ಕಾರ್ಯಕ್ರಮದಲ್ಲಿ ಕಿರುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆ ಮತ್ತು ಅಂಗನವಾಡಿಗಳಿಗೆ ಪಾದರಕ್ಷೆಗಳನ್ನು ಇಡುವ ಸ್ಟಾಂಡ್ ಗಳನ್ನು ಗ್ರಾಮ ಪಂಚಾಯಿತಿಯಿಂದ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಬಿ ಎನ್ ಕಾರ್ಯದರ್ಶಿ ನಂಜಯ್ಯ ಸಿಬ್ಬಂದಿ ವರ್ಗದವರು ಮಾಜಿ ಅಧ್ಯಕ್ಷರುಗಳಾದ ಕಿರುಗುಂದ ನಜೀರ್ ರಾಜಶೇಖರ್ ಯು ಹೆಚ್ ಗ್ರಾಮಸ್ಥರಾದ ಲೋಕೇಶ್ ರವಿಕುಮಾರ್ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಪ್ರೇಮ ಮತ್ತು ಪದಾಧಿಕಾರಿಗಳು ಶಾಲೆಯ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಅಂಗನವಾಡಿಯ ಕಾರ್ಯಕರ್ತರು ಕಿರುಗುಂದ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಗ್ರಂಥ ಪಾಲಕರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

About Author

Leave a Reply

Your email address will not be published. Required fields are marked *

You may have missed