लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
23/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

  1. ‎ಸಮಾಜ ಸೇವೆಗಾಗೆ ಮಿಡಿಯುವ ಮನಸುಗಳು….
    ಇಂದು ಬೆಳಿಗ್ಗೆ 11.00.ಗಂಟೆ ಸುಮಾರಿಗೆ ನಾವು ಚಿಕ್ಕಮಗಳೂರಿನಿಂದ ಸಕರಾಯಪಟ್ಟಣದ ಮಾರ್ಗವಾಗಿ ಜೋಡಿ ಒಚಿಹಳ್ಳಿಗೆ ತಾಯಿಮಡಿಲು ಕಾರ್ಯಕ್ರಮದಲ್ಲಿ ಸಮಾಜ ಸೇವೆಗಾಗಿ ಪ್ರಸಸ್ತಿ ಸ್ವಿಪರಿಸಲು ಹೊಗುತಿದ್ದೆವು..
  2. ಉದ್ದೆ ಬೋರನಹಳ್ಳಿಯ ಹತ್ತಿರ ಬಲಕ್ಕೆ ತಿರುಗಬೇಕಿದ್ದ ಟಿಪ್ಪರ್ ಇಂಡಿಕೆಟರ್ ಹಾಕದ ಕಾರಣ ಸಂಪೂರ್ಣ ಒಂದೆ ಬಾರಿ ಸ್ಪೀಡ್ ಕಡಿಮೆ ಮಾಡಿದ್ದರಿಂದ ಸುಮಾರು 80-100.ಕಿಮಿ.ಸ್ಪೀಡ್ ಇದ್ದ ಬೈಕಿನ ಚಾಲಕ ಬ್ರೆಕ್ ಹಾಕಿದರು ಸಹ ಸ್ಪೀಡ್ ಕಡಿಮೆ ಆಗದೆ ಟಿಪ್ಪರಿಗೆ ಡಿಕ್ಕಿ ಹೊಡೆದಿದೆ…
  3. ಬೈಕ್ ಚಾಲನೆ ಮಾಡುತಿದ್ದ ಪ್ರಜ್ವಲ್ (25) ಟಿಪ್ಪರಿಗೆ ಗುದ್ದಿದ್ದಾನೆ..ಹೆಲ್ಮೆಟ್ ಹಾಕಿದ್ದರು ಸಹ ಸ್ಥಳದಲ್ಲೆ ಸಾವನಪ್ಪಿದ್ದಾನೆ….
    ‎ಘಟನೆ ನಡೆದು 30.ನಿಮಿಷಗಳಾಗಿದ್ದರೂ ಸಹ ಸ್ಥಳದಲ್ಲಿದ್ದ ಸಾರ್ವಜನಿಕರು ಪೊಟೊ ಹೊಡೆಯುವುದರಲ್ಲಿ ವಿಡಿಯೊ ಮಾಡುವುದರಲ್ಲಿ ತೊಡಗಿಕೊಂಡಿದ್ದರು..
    ‎ಸ್ಥಳಕ್ಕೆ ಆಗಮಿಸಿದ ಸಮಾಜ ಸೇವಕರಾದ ಹಸೈನಾರ್ ಬಿಳಗೊಳ..ಅಬ್ದುಲ್ ರೆಹಮಾನ್ ಬಿಳಗೊಳ…ಮತ್ತು ವಸಂತಹಾರ್ ಗೊಡು ಕೂಡಲೆ ಕಾರ್ಯಪ್ರವೃತ್ತರಾಗಿ ಆಂಭ್ಯುಲೆನ್ಸ್ ತರಿಸಿ ಪೊಲಿಸಿಗೆ ಸುದ್ದಿ ಮುಟ್ಟಿಸಿದರು.
    ಅಪಘಾತದಲ್ಲಿ ಮೃತಪಟ್ಟ ಪ್ರಜ್ವಲ್ ನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕಳುಹಿಸಿದರು..
    ‎ಸ್ಥಳಕ್ಕೆ ಆಗಮಿಸಿದ ಚಿಕ್ಕಮಗಳೂರು ಶಾಸಕರಾದ ತಮ್ಮಯ್ಯ ಮತ್ತು ಕಡೂರಿನ ಮಾಜಿ ಶಾಸಕರಾದ ವೈ ಎಸ್ ವಿ ದತ್ತರವರು ಇವರುಗಳ ಸಮಾಜ ಸೇವೆಯನ್ನು ಗೌರವಿಸಿದರು….ಅಪಘಾತದಲ್ಲಿ ಇಡಾದವರನ್ನು ಮೊದಲು ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಬೇಕು ಎಂದು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು…
    ವರದಿ…
    ಮಗ್ಗಲಮಕ್ಕಿಗಣೇಶ್…ಮೂಡಿಗೆರೆ…

About Author

Leave a Reply

Your email address will not be published. Required fields are marked *

You may have missed