लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
23/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಮ್ಮ ಜೀವ ಲೆಕ್ಕಿಸದೆ ಆನೆಗಳನ್ನು ತಡೆಯುತ್ತೇವೆ. ಮಾಜಿ ಉಪ ಸಭಾಪತಿ. ಎಮ್: ಕೆ ಪ್ರಾಣೇಶ್…

1 min read

ನಮ್ಮ ಜೀವ ಲೆಕ್ಕಿಸದೆ ಆನೆಗಳನ್ನು ತಡೆಯುತ್ತೇವೆ ಎಮ್: ಕೆ ಪ್ರಾಣೇಶ್

ಮೂಡಿಗೆರೆ: ಮಲೆನಾಡಿನವರು ಶಾಂತಿ ಪ್ರಿಯರು ಎಂದು ಕೊಂಡಿದ್ದೀರಿ ನಮ್ಮನ್ನು ಆನೆಗಳಿಗೆ ಬಲಿಕೊಡಲು ಹೊರಟಿದ್ದೀರಿ, ಅಂದ್ರೆ ನಾವು ಸುಮ್ಮನೆ ಕೂರುವುದಿಲ್ಲ ನಮ್ಮ ಪ್ರಾಣ ಲೆಕ್ಕಿಸದೆ ತಡೆಯುತ್ತೇವೆ ಎಂದು ಮಾಜಿ ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಎಂ ಕೆ ಪ್ರಾಣೇಶ್ ತಿಳಿಸಿದ್ದಾರೆ.

ಅವರು ಹೇಳಿಕೆಯಲ್ಲಿ ತಿಳಿಸಿ. ಹಾಸನದಲ್ಲಿ ಎತ್ತಿನಹೊಳೆ ಡ್ಯಾಮ್ ನಿರ್ಮಾಣದ ಕಾರಣದಿಂದ. ನೂರಾರು ಆನೆಗಳು ದಾರಿ ತಪ್ಪಿದ್ದು ತಪ್ಪಿ ಬೇಲೂರು ಸುತ್ತಮುತ್ತ ರಂಪಾಠ ಮತ್ತು ಜನರ ಹತ್ಯೆ ಮಾಡುತ್ತಿದ್ದು. ಆನೆಗಳನ್ನು ಮೂಡಿಗೆರೆ. ಚಿಕ್ಕಮಗಳೂರು. ಶೃಂಗೇರಿ. ಭಾಗಕ್ಕೆ ಸಾಗಿಸುವ ವ್ಯವಸ್ಥಿತ ಸಂಚನ್ನು ವಿರೋಧಿಸುವುದಾಗಿ ಮತ್ತು ಇದರ ವಿರುದ್ಧ ನಿರ್ಣಾಯಕ ಹೋರಾಟ ಕೈಗೊಳ್ಳಲಾಗುವುದು. ಅಷ್ಟಕ್ಕೂ ಮಲೆನಾಡಿಗರಿಗೆ ಜೀವವಿಲ್ಲವೇ ಇಲ್ಲಿನ ಕಾಫಿ ಕಾಳು ಮೆಣಸು ಅಡಿಕೆ ಬೆಳೆ ಕಾರ್ಮಿಕರು ಹಾಗೂ ಜನರ ಜೀವಕ್ಕೆ ಬೆಲೆ ಇಲ್ಲವೇ.
ನಾವುಗಳು ಇದುವರೆಗೆ ಶಾಂತಿಯುತ ಹೋರಾಟ ಮಾಡಿದ್ದೇವೆ. ಇನ್ನು ಸುಮ್ಮನಿರುವುದಿಲ್ಲ ಉಗ್ರ ಹೋರಾಟ ಮಾಡುತ್ತೇವೆ. ಈಗಾಗಲೇ ಭದ್ರಾ ಅರಣ್ಯದಲ್ಲಿ ಆನೆಗಳು ಹೆಚ್ಚಾಗಿ. ಕಾಡಿಂದ ಹೊರಬಂದು ಅನೇಕ ಜನರನ್ನು ಹತ್ಯೆ ಮಾಡಿದ್ದು. ಅಲ್ಲದೆ ದಿನನಿತ್ಯ ರಂಪಾಟ ಮಾಡುತ್ತಿವೆ. ಆದರೆ ಚಿಕ್ಕಮಂಗಳೂರು ಅರಣ್ಯ ಇಲಾಖೆ ಹಾಸನಕ್ಕೆ ತೆರಳಿ, ತನ್ನ ನೂರಾರು ಸಿಬ್ಬಂದಿಗಳನ್ನು ಬಳಸಿಕೊಂಡು ಮೂಡಿಗೆರೆ ಭಾಗಕ್ಕೆ ಕಾಡನೆಗಳನ್ನು ಅಟ್ಟಿಕೊಂಡು ಬರುತ್ತಿರುವುದು ಎಷ್ಟು ಸರಿ. ಸಮಸ್ಯೆ ಹಿಡಿದುಕೊಳ್ಳುತ್ತಿರುವ ಈ ಎಲ್ಲಾ ಅಧಿಕಾರಿಗಳನ್ನು ಅಮಾನತು ಮಾಡಿ. ಜಿಲ್ಲೆಯಲ್ಲಿ ಕೇಳುವವರು ಯಾರು ಇಲ್ಲವೇ. ಜಿಲ್ಲೆಯ ಶಾಸಕರು ಮತ್ತು ಉಸ್ತುವಾರಿ ಮಂತ್ರಿಗಳು ಏನು ಮಾಡುತ್ತಿದ್ದಾರೆ. ನಾಡಿದ್ದು ಜಿಲ್ಲೆಯ ಎಲ್ಲಾ ಶಾಸಕರು. ಸದನದಲ್ಲಿ ಒಟ್ಟಾಗಿ ಈ ವಿಷಯವನ್ನು ಚರ್ಚಿಸಿ. ಸರ್ಕಾರದ ಕಣ್ಣು ತೆರೆಸಬೇಕು. ಹಾಸನದ ಸಚಿವ ಶಿವಲಿಂಗೇಗೌಡ ತಮ್ಮ ವ್ಯಾಪ್ತಿಯ ಆನೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಬದಲು. ದನ ಅಟ್ಟುವ ರೀತಿ ಭದ್ರಾಭರಣಕ್ಕೆ ಓಡಿಸುತ್ತೇವೆ ಎಂದು ಬೇಜವಾಬ್ದಾರಿ ಮೆರೆಯುತ್ತಿದ್ದು‌ ರೈತ ಸಂಘಗಳು. ಪ್ಲಾಂಟರ್ಸ್ ಅಸೋಸಿಯೇಷನ್. ಕಾರ್ಮಿಕ ಸಂಘಟನೆಗಳು. ಸಂಘ ಸಂಸ್ಥೆಗಳು. ವಿವಿಧ ಪಕ್ಷಗಳ ಮುಖಂಡರು ಕಾರ್ಯಕರ್ತರು. ಪಕ್ಷಾತೀತವಾಗಿ ಹೋರಾಟ ಮಾಡಲ್ಲ ಕೈಜೋಡಿಸಬೇಕು. ಹೇಗೆ ಆನೆಗಳನ್ನು ಮೂಡಿಗೆರೆ ಬಾರ್ಡರ್ ದಾಟಿಸುತ್ತೀರಿ ನೋಡುವ ನಾವುಗಳು ಪ್ರಾಣ ಲೆಕ್ಕಿಸದೆ ತಡೆಯಲು ಸಿದ್ದರಿದ್ದೇವೆ ಎಂದು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed