लाइव कैलेंडर

October 2026
M T W T F S S
 1234
567891011
12131415161718
19202122232425
262728293031  
04/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಡಿದಾಳು ಗ್ರಾಮದ ನೂತನ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಕೈ ನಾಯಕಿ ಕೈಗಳಿಂದ ಗುದ್ದಲಿ ಪೂಜೆ*….

1 min read

*ಕಡಿದಾಳು ಗ್ರಾಮದ ನೂತನ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಕೈ ನಾಯಕಿ ಕೈಗಳಿಂದ ಗುದ್ದಲಿ ಪೂಜೆ*

*ಮೂಡಿಗೆರೆ*:ಕಡಿದಾಳು ಗ್ರಾಮದ ನೂತನ ಸಿಮೆಂಟ್ ರಸ್ತೆ ಕಾಮಗಾರಿಗೆ ಶಾಸಕಿ ನಯನಾ ಮೋಟಮ್ಮ ಅವರು ಗುದ್ದಲಿ ಪೂಜೆ ನೆರವೇರಿಸಿದರು

ಬಳಿಕ ಮಾತನಾಡಿದ ಅವರು ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಪ್ರತಿಯೊಂದು ಕಾಮಗಾರಿಯ ಪ್ರಗತಿಯನ್ನು ಖುದ್ದಾಗಿ ಪರೀಕ್ಷಿಸಿ ಬಿಲ್ಲುಗಳ ಮಂಜೂರಾತಿಗೆ ಶಿಫಾರಸು ಮಾಡುವುದಾಗಿ ಹೇಳಿದರು.

ತಾಲೂಕಿನ ಕಡಿದಾಳು ಗ್ರಾಮದ ನೂತನ ರಸ್ತೆಗೆ ಶಾಸಕರ ಅನುದಾನದಿಂದ 50 ಲಕ್ಷ ವೆಚ್ಚದ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮದ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು

ಈ ಸಂದರ್ಭದಲ್ಲಿ ಪತ್ರಕರ್ತರಾದ ಪುನೀತ್ ಕಡಿದಾಳು, , ಕಾಂಗ್ರೆಸ್ ಮುಖಂಡ ದೀಪಕ್ ಕಡಿದಾಳು, ರಘು ಕೆ. ಕೆ,ಕಾಂಗ್ರೆಸ್ ಯುವ ಮುಖಂಡ ಆರ್ಯ ಪಟೇಲ್,ಸುಕುಮಾರ್, ಬಿಜೆಪಿ ಮುಖಂಡರಾದ ಸಂಜಯ್, ಬ್ರಿಜೇಶ್ ಕಡಿದಾಳು ,ಗುತ್ತಿಗೆದಾರ ವಿ. ಸಿ. ಜಯಂತ,ಅಣ್ಣಪ್ಪಗೌಡ, ಅಜಿತ್ ಕೆ. ಜೆ ,ಮಂಜುನಾಥ ಮೋಟಯ್ಯ,ಕಾಂಗ್ರೆಸ್ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಂಕರ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ, ರಘು ಮಗ್ಗಲಮಕ್ಕಿ ರಮೇಶ್ ಹೊಸಕೆರೆ, ಸುಧೀರ್ ಚಕ್ರಮಣಿ ಸೇರಿದಂತೆ ಕಡಿದಾಳು ಗ್ರಾಮಸ್ಥರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed