लाइव कैलेंडर

October 2026
M T W T F S S
 1234
567891011
12131415161718
19202122232425
262728293031  
04/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನಾಚರಣೆ..2026….

1 min read

ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನಾಚರಣೆ..2026
ಮೂಡಿಗೆರೆ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲ್ಲೂಕು ಕಚೇರಿಯ ಆವರಣದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಮೂರು ಧರ್ಮಗಳ ಪ್ರಮುಖರ ಜೊತೆ ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕಿ ನಯನ ಮೋಟಮ್ಮರವರು, ಸುಭಿಕ್ಷಾ ಭಾರತದ ಅಡಿಗಲ್ಲು ಹಾಕಿದ ಮಹಾನ್ ಪುರುಷ ಗಾಂಧೀಜಿ ಹಸಿರು ಕ್ರಾಂತಿಯ ನಿರ್ಮಾತೃ ಲಾಲ್ ಬಹದ್ದೂರ್ ಶಾಸ್ತ್ರಿ ರವರು ಎಂದರು.
ಮಹಿಳೆಯರು ಅಂಜಿಕೆಯಿಂದ ಹೊರ ಬರುವ ಪ್ರಯತ್ನ ಮಾಡಬೇಕು ಎಂದರು.
ಭಗವದ್ಗೀತೆಯನ್ನು ಅರ್ಚಕರಾದ ಮಹಾಬಲ ಕಾರಂತ್ ರವರು ನಡೆಸಿಕೊಟ್ಟರು.
ಕುರಾನ್ ಅನ್ನು ಸಿನಾನ್ ಫೈಜಿ ನಡೆಸಿಕೊಟ್ಟರೆ
ಬೈಬಲ್ ನ ಪ್ರವಚನವನ್ನು ಡೀನ್ ಸಿಸ್ಟರ್ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಅಶ್ವಿನಿ, ಕಾರ್ಯ ನಿರ್ವಾಹಕ ಅಧಿಕಾರಿ ದಯಾವತಿ, ಕೆಡಿಪಿ ಸದಸ್ಯ ಕುನ್ನಳ್ಳಿ ರವಿ , ಮಾಜಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ರಮೇಶ್ , ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ಶಂಕರ್, ಗುತ್ತಿಗೆದಾರ ನಿಶಾಂತ್ ಪಟೇಲ್ , ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೀನಾಕ್ಷಿ, ದೈಹಿಕ ಶಿಕ್ಷಣದ ಪರಿವೀಕ್ಷಕರಾದ ಲೆವಿನಾ ಡಿ ಸೋಜಾ, ಹಾಗು ತಾಲೂಕಿನ ಅಧಿಕಾರಿ ಗಳು, ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ಚಂದ್ರು ರವರು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಮೂಡಿಗೆರೆ ಜಿ ಜೆ ಸಿ ಶಿಕ್ಷಕರಾದ ಚಂದ್ರೇಗೌಡ ಹಾಗೂ ವಿಧ್ಯಾರ್ಥಿಗಳು ರಘುಪತಿ ರಾಘವ ರಾಜ ರಾಮ್ ಗೀತೆ ಭಜನೆ ಬಾಲಕಿಯರ ಪ್ರೌಢ ಶಾಲೆ ಯ ವಿಧ್ಯಾರ್ಥಿಗಳ ದೇಶಭಕ್ತಿ ಗೀತೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದರು.

About Author

Leave a Reply

Your email address will not be published. Required fields are marked *

You may have missed