लाइव कैलेंडर

September 2026
M T W T F S S
 123456
78910111213
14151617181920
21222324252627
282930  
15/09/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜೆಸಿಐ ಸಪ್ತಾಹಕ್ಕೆ ಅದ್ದೂರಿ ಚಾಲನೆ ಮೂಡಿಗೆರೆ: ಜೆಸಿಐ ಮೂಡಿಗೆರೆ ವತಿಯಿಂದ…..

1 min read

ಜೆಸಿಐ ಸಪ್ತಾಹಕ್ಕೆ ಅದ್ದೂರಿ ಚಾಲನೆ
ಮೂಡಿಗೆರೆ: ಜೆಸಿಐ ಮೂಡಿಗೆರೆ ವತಿಯಿಂದ

ಆಯೋಜಿಸಿರುವ “ಪ್ರತಿಬಿಂಬ ಜೆಸಿ ಸಪ್ತಾಹ” ಕಾರ್ಯಕ್ರಮಕ್ಕೆ ಮೂಡಿಗೆರೆಯಲ್ಲಿ ಅದ್ದೂರಿ ಚಾಲನೆ ದೊರೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗಣ್ಯರು ಎನ್ ಎಲ್ ಪುಣ್ಯಮೂರ್ತಿ ಜೆ ಸಿಐ ಪೂರ್ವ ಅಧ್ಯಕ್ಷರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳು, ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದರ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ಯುವಕರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜೆಸಿಐ ಸಂಸ್ಥೆಯು ಯುವಕರ ವ್ಯಕ್ತಿತ್ವ ವಿಕಸನ, ನಾಯಕತ್ವ ತರಬೇತಿ ಹಾಗೂ ಸಮಾಜ ಸೇವೆಯ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಸಪ್ತಾಹದ ಅಂಗವಾಗಿ ವಿವಿಧ ಸಾಮಾಜಿಕ, ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ಜೆಸಿಐ ಸದಸ್ಯರು ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜೆಸಿಐ ಮೂಡಿಗೆರೆ ಅಧ್ಯಕ್ಷರು, ಸುನಿಲ್ ಎಂಎಲ್ ದೀಪಕ್ ದೊಡ್ಡಯ್ಯ ಸುನಿಲ್ ನಾಯಕ್ ಅಬ್ರಾಹಿಂ ಸುದೀಪ್ ತ್ರಿಪುರ ಶೃತಿ ಸಂಪತ್ ನಿಶ್ಚಿತ ಯತೀಶ್ ಅಕ್ಷತ್ ಪಟ್ಟದೂರು ಸಂದ್ಯಾ ಸುದೀಪ್ ಪದಾಧಿಕಾರಿಗಳು, ಸದಸ್ಯರು, ಜೆಸಿ ಕುಟುಂಬದ ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿಜನನದ್ದರು.
“ಯುವ ಶಕ್ತಿ – ಸಮಾಜದ ಶಕ್ತಿ” ಎಂಬ ಆಶಯದೊಂದಿಗೆ ನಡೆಯುತ್ತಿರುವ ಜೆಸಿ ಸಪ್ತಾಹವು ಮೂಡಿಗೆರೆ ತಾಲೂಕಿನ ಜನರಲ್ಲಿ ಉತ್ತಮ ಸಂದೇಶ ಮೂಡಿಸುವಂತಾಗಿದೆ.

About Author

Leave a Reply

Your email address will not be published. Required fields are marked *

You may have missed