ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಜಾಗತಿಕ ರಂಗಕ್ಕೆ ಸಾವಿರಾರು ವಿದ್ಯಾರ್ಥಿಗಳನ್ನು ಕೂಡ ಮಾಡಿದ ಆದಿಚುಂಚನಗಿರಿ ವಿಶ್ವವಿದ್ಯಾಲಯ: ಪಿ ಹೆಚ್ ಡಿ ಸಂಶೋಧನಾ ಮಹಾಪ್ರಬಂದಕ್ಕಾಗಿ ಡಾಕ್ಟರೇಟ್ ಪದವಿ ಪಡೆದ ದಿಣ್ಣೇಕೆರೆಯ ಡಿ.ಈ. ಸಿದ್ಧಾರ್ಥ .
1 min read
ಅವಿನ್ ಟಿವಿ ಸುದ್ದಿಜಾಲ ✍️:
ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಜಾಗತಿಕ ರಂಗಕ್ಕೆ ಸಾವಿರಾರು ವಿದ್ಯಾರ್ಥಿಗಳನ್ನು ಕೂಡ ಮಾಡಿದ ಆದಿಚುಂಚನಗಿರಿ ವಿಶ್ವವಿದ್ಯಾಲಯ: ಪಿ ಹೆಚ್ ಡಿ ಸಂಶೋಧನಾ ಮಹಾಪ್ರಬಂದಕ್ಕಾಗಿ ಡಾಕ್ಟರೇಟ್ ಪದವಿ ಪಡೆದ ದಿಣ್ಣೇಕೆರೆಯ ಡಿ.ಈ. ಸಿದ್ಧಾರ್ಥ .
ಚಿಕ್ಕಮಗಳೂರು ಸೆ 11: ಯಾವುದೇ ಓದು ಮತ್ತು ಬರಹ ಓದುಗರನ್ನು ಅಧ್ಯಯನಶೀಲರನ್ನಾಗಿ ಮಾಡಿ ಚಿಂತನೆಗೆ ತೊಡಗಿಸುವ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣವಾಗುವಂತೆ ಮಾಡಬೇಕು, ಜ್ಞಾನಾರ್ಜನೆಯ ಹೆಸರಿನಲ್ಲಿ ತೊಡಗಿಸಿಕೊಂಡ ಶೋಧನೆ ಸಂಶೋಧನೆಗಳು ದೇಶದ ಸರ್ವತೋಮುಖ ಅಭಿವೃದ್ಧಿಯ ಅಡಿಗಲ್ಲು ಆಗಬೇಕು, ಸಾವಿರಾರು ವರ್ಷಗಳ ಹಿಂದೆಯೇ ಭಾರತದ ಜ್ಞಾನ ಶಾಖೆಗಳು ಜಗತ್ತಿನ ಗಮನ ಸೆಳೆದಿದ್ದನ್ನು ಕಾಣಬಹುದು.
ಸಾರ್ವತ್ರಿಕವಾಗಬೇಕಾದ ಶಿಕ್ಷಣ ವ್ಯಾಪಾರಿಕರಣವಾದ ಹಿನ್ನೆಲೆಯಲ್ಲಿ ಸ್ವತಂತ್ರ ಮತ್ತು ಸ್ವಾವಲಂಬಿ ಬದುಕನ್ನು ಕಟ್ಟಿ ಕೊಡುವಂತಹ ಗುಣಾತ್ಮಕ ಶಿಕ್ಷಣವನ್ನು ಈ ಆಧುನಿಕ ಭಾರತ ಸಮರ್ಪಕವಾಗಿ ರೂಪಿಸುವಲ್ಲಿ ಗಣನೀಯ ಸಾಧನೆ ಮಾಡದಿರುವ ಕಾರಣ ಇಂದು ಭಾರತದ ವಿಶ್ವವಿದ್ಯಾಲಯಗಳು ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳೊಂದಿಗೆ ಪೈಪೋಟಿ ನಡೆಸಲು ಹೆಣಗಾಡುತ್ತಿವೆ, ಸಮೀಕ್ಷೆಯೊಂದು ಹೇಳಿದಂತೆ ಜಗತ್ತಿನ ಮೊದಲು ನೂರು ವಿಶ್ವವಿದ್ಯಾಲಯಗಳ ಪಟ್ಟಿಯೊಳಗೆ ಭಾರತದ ಯಾವುದೇ ಒಂದು ವಿಶ್ವವಿದ್ಯಾಲಯಗಳು ಇಲ್ಲದಿರುವುದು ಗಂಭೀರವಾಗಿ ಯೋಚಿಸಬೇಕಾದ ಸಂಗತಿಯಾಗಿದೆ.
ಈ ಎಲ್ಲ ಕುಂದು ಕೊರತೆಗಳ ಮಧ್ಯೆಯೂ ಅಲ್ಲಲ್ಲಿ ಆಗಾಗ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಇಂದು ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಪಿ ಎಚ್ ಡಿ ಪದವಿ ಮತ್ತು ನಾಗರಿಕ ಸೇವಾ ಪರೀಕ್ಷೆಯಂತಹ ಪರೀಕ್ಷೆಯನ್ನು ಬರೆದು ಉನ್ನತ ಮಟ್ಟದ ಅಧಿಕಾರಿಗಳಾಗುತ್ತಿರುವುದನ್ನು ಕಾಣಬಹುದು.
ವಸ್ತಾರೆ ಸಮೀಪದ ದಿಣ್ಣೇಕೆರೆ ನಿವಾಸಿ ಕೃಷಿಕ ದಂಪತಿಗಳಾದ ಡಿ ಎನ್ ಈರಪ್ಪಗೌಡ ಮತ್ತು ವಿಶಾಲ ಅವರ ಪುತ್ರ ಡಿ ಈ ಸಿದ್ದಾರ್ಥ ಮೆಕಾನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಬಿಇ ಪದವೀಧರರಾಗಿದ್ದು ಚಿಕ್ಕಮಗಳೂರಿನ ಆದಿಚುಂಚನಗಿರಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಉಪನ್ಯಾಸಕ ಮತ್ತು ಉದ್ಯೋಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕರ್ತವ್ಯದ ಸಮಯದಲ್ಲಿಯೇ ಸತತವಾಗಿ ಸುಮಾರು ಏಳು ವರ್ಷಗಳ ಕಾಲ ಡಾ. ಹೇಮಂತ್ ಅವರ ಮಾರ್ಗದರ್ಶನದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಫಿಲಾಸಫಿ ಇನ್ ಮೆಕಾನಿಕಲ್ ಇಂಜಿನಿಯರಿಂಗ್ (ಫ್ಯಾಕಲ್ಟಿ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ) ವಿಷಯದಲ್ಲಿ
ಪಿ ಎಚ್ ಡಿ ಪದವಿಗಾಗಿ ಮಹಾಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಗೌರವಕ್ಕೆ ಭಾಜನರಾಗಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಬಿಜಿ ನಗರದ ಬಿಜಿಎಸ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಆರನೇ ಘಟಿಕೋತ್ಸವದಲ್ಲಿ ಕುಲಪತಿ ಮತ್ತು ಮಠಾಧಿಪತಿಗಳು ಆಗಿರುವ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ವಿಶ್ವವಿದ್ಯಾಲಯದ ಅಧಿಕಾರ ಮುದ್ರೆಯೊಡನೆ ತಮ್ಮ ಸಂಸ್ಥೆಯಲ್ಲಿಯೇ ಭೋದಕರಾಗಿ ಕೆಲಸ ಮಾಡುತ್ತಿರುವ ಸಿದ್ದಾರ್ಥ ಡಿ ಈ ಇವರಿಗೆ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದರು.
••••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

