ಬಣಕಲ್ ಹೋಬಳಿ ಕಸಾಪ ವತಿಯಿಂದ ತೇಜಸ್ವಿ ಜನ್ಮದಿನಾಚರಣೆ…
1 min read
ಬಣಕಲ್ ಹೋಬಳಿ ಕಸಾಪ ವತಿಯಿಂದ ತೇಜಸ್ವಿ ಜನ್ಮದಿನಾಚರಣೆ…
ತೇಜಸ್ವಿ ಅವರ ಬದುಕು ಬರಹ ಯುವ ಜನತೆಗೆ ಆದರ್ಶವಾಗಿದೆ ಎಂದು ತಾಲ್ಲೂಕು ಕಸಾಪ ಮಹಿಳಾ ಘಟಕದ ನಿಕಟಪೂರ್ವ ಅಧ್ಯಕ್ಷೆ ಅನಿತಾ ಜಗದೀಪ್ ಹೇಳಿದರು.
ಬಣಕಲ್ ಹೋಬಳಿ ಕಸಾಪ ವತಿಯಿಂದ ಬೆಟ್ಟಗೆರೆಯ ಶ್ರೀಮತಿ ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆ ನಡೆದ ಕೆ.ಪಿ. ಪೂರ್ಣ ಚಂದ್ರ ತೇಜಸ್ವಿ ಅವರ 88ನೇ ಜನ್ಮ ದಿನಾಚರಣೆ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೇಜಸ್ವಿ ಅವರ ಬದುಕು ಬರಹ ಎಲ್ಲರಿಗೂ ಸ್ಪೂರ್ತಿಯಾಗಿದ್ದು ಅವರ ಕೃತಿಗಳು ಯುವಪೀಳಿಗೆ ಓದಬೇಕಿದೆ. ಅವರ ಕೃತಿಗಳಲ್ಲಿ ಪರಿಸರ ಸಂರಕ್ಷಣೆಯ ಮಹತ್ವ ಮತ್ತು ಅಗತ್ಯತೆಯನ್ನು ಮನದಟ್ಟು ಮಾಡಿದ್ದಾರೆ ಎಂದರು.
ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಶಾಂತಕುಮಾರ್ ಮಾತನಾಡಿ, ತೇಜಸ್ವಿ ಅವರ
ಕೃತಿಗಳಿಂದಾಗಿ ಹೊಸದೊಂದು ಓದುಗ ವರ್ಗವೇ ಸೃಷ್ಠಿಯಾಗಿದೆ. ಅವರ ಕೃತಿಗಳು ಜನಸಾಮಾನ್ಯರಿಗೂ ಅರ್ಥವಾಗುಂತಾಗಿದೆ. ಸಾಹಿತ್ಯ ವಲಯ ಮಾತ್ರವಲ್ಲದೇ ಜನಸಾಮಾನ್ಯರನ್ನು ತೇಜಸ್ವಿ ಅವರ ಕೃತಿಗಳು ತಲುಪಿವೆ ಎಂದರು.
ಪೂರ್ಣಚಂದ್ರ ತೇಜಸ್ವಿಯವರ ಭಾವಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ತೇಜಸ್ವಿ ಅವರ ಒಡನಾಡಿಗಳಾದ ಬಿ.ಆರ್.ಯತೀಶ್ ಗೌಡ, ಬಣಕಲ್ ಕಸಾಪ ಅಧ್ಯಕ್ಷ ಲೋಕೇಶ್ ಬೆಟ್ಟಗೆರೆ, ಬಂಗಾರ ಚೆಲುವಯ್ಯ, ನವೀನ್, ಜ್ಯೋತಿ, ಪ್ರಕಾಶ್, ಬಿ.ಎ.ಯತೀಶ್, ಸರ್ವೇಶ್ ಹಳಿಕೆ, ನವಿನ್ ಆನೆದಿಬ್ಬ, ರುದ್ರೇಶ್,ಸುಪ್ರೀತ್, ಬಿ.ಕೆ.ರುದ್ರೇಶ್, ರಾಮಚಂದ್ರ. ಮುಂತಾದವರು ಇದ್ದರು.

